BigTv News
April 22, 2025
Breaking News, Crime
ಮದುವೆ ಸಮಾರಂಭದಲ್ಲಿ ನಡೆದ ಜಗಳದಿಂದ ತಪ್ಪಿಸಿಕೊಳ್ಳುವಾಗ ಬಾವಿಗೆ ಬಿದ್ದು ಹದಿಹರೆಯದ ಯುವಕನೊಬ್ಬ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ. ಡಿಜೆ ನುಡಿಸಬೇಕಾದ ಹಾಡುಗಳ ಆಯ್ಕೆಗೆ ಸಂಬಂಧಿಸಿದಂತೆ ಮದುವೆಗೆ ಬಂದಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಇದು ಮೂವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಮದುವೆ ಮನೆಯ ಸದಸ್ಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.ವಾಗ್ವಾದದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ಯಾದವ್ ಮತ್ತು ಇನ್ನೊಬ್ಬ ವ್ಯಕ್ತಿ ಕತ್ತಲೆಯಲ್ಲಿ ಹತ್ತಿರದ ಬಾವಿಗೆ ಬಿದ್ದಿದ್ದಾರೆ. ಇದರಿಂದ …
Read More »
BigTv News
April 22, 2025
Breaking News, Crime, ಮಂಗಳೂರು
ಸುಲೋಹಿತಾ ಅವರನ್ನು ಅವರ ಪುತ್ರ ರಿಪ್ಸೆನ್ ಮಾಬೆನ್ ಅವರು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಕಣ್ಣೂರು ಕಡೆಯಿಂದ ಪಡೀಲ್ ಕಡೆಗೆ ಸಾಗುತ್ತಿದ್ದರು. ರಿಪ್ಸೆನ್ ಮಾಬೆನ್ ಅವರು ಕೊಡೆಕ್ಕಲ್ ಅಯ್ಯಪ್ಪ ಗುಡಿ ಬಳಿ ದಿಢೀರ್ ಬ್ರೇಕ್ ಹಾಕಿದಾಗ ಸುಲೋಹಿತಾ ಅವರು ಹೆದ್ದಾರಿಗೆ ಬಿದ್ದಿದ್ದರು. ಅವರ ಮುಖ ಹಾಗೂ ತಲೆಯಲ್ಲಿ ತೀವ್ರ ತರಹದ ಗಾಯಗಳಾಗಿದ್ದವು. ಅವರನ್ನು ತಕ್ಷಣವೇ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Read More »
BigTv News
April 22, 2025
Breaking News, Crime
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಅವನ ಸ್ನೇಹಿತನೊಂದಿಗೆ ತನ್ನ ಸ್ವಂತ ಗಂಡನನ್ನು ಕೊಲೆ ಮಾಡಿದ್ದಾಳೆ. ಇಷ್ಟೇ ಅಲ್ಲ, ತನ್ನ ಪತಿ ಸತ್ತಿದ್ದಾನೆ ಎಂದು ಸಂಪೂರ್ಣವಾಗಿ ಖಚಿತವಾಗುವವರೆಗೂ ಹೆಂಡತಿ ಅವನ ದೇಹದ ಮೇಲೆ ದಾಳಿ ಮಾಡುತ್ತಲೇ ಇದ್ದಳು. ಮೃತ ನೌಶಾದ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ದಿನಗಳ ಹಿಂದೆ ಮನೆಗೆ ಮರಳಿದ್ದರು ಮತ್ತು ಎರಡು ದಿನಗಳ ನಂತರ ಮತ್ತೆ ವಿದೇಶಕ್ಕೆ ಹೋಗುತ್ತಿದ್ದರು. ಮಾಹಿತಿಯ ಪ್ರಕಾರ, …
Read More »
BigTv News
April 22, 2025
Breaking News, Crime, ಬೆಂಗಳೂರು
ಬೆಂಗಳೂರಿನ ಹೆಚ್‍ಬಿಆರ್ ಲೇಔಟ್ ನಲ್ಲಿ ಆಟೋದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಹೆಚ್.ಬಿ.ಆರ್. ಲೇಔಟ್ ನ 13ನೇ ಕ್ರಾಸ್ ನಲ್ಲಿ ತಡರಾತ್ರಿ ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ಇಮ್ರಾನ್ ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇಮ್ರಾನ್ ಖಾನ್ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
BigTv News
April 22, 2025
Breaking News, Crime, ಯಾದಗಿರಿ
ಯಾದಗಿರಿಯ ಕಂಚಗಾರಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಮಹಾದೇವಿ ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದೆ.7 ವರ್ಷದ ಹಿಂದೆ ಮಹಾದೇವಿ ಪತಿ ಸಾವನ್ನಪ್ಪಿದ್ದರು. ಮಹಾದೇವಿ 7 ವರ್ಷದಿಂದ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು.ಕೊಲೆಯಾದ ಮಹಾದೇವಿ ಜೊತೆ ಊರಿನ ಕೆಲವರು ಅನೈತಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಊರಿನ ಇಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ …
Read More »
BigTv News
April 22, 2025
Breaking News, Crime, ಬೆಳಗಾವಿ
ಹಲವು ದಿನಗಳಿಂದ ಆನ್‌ಲೈನ್ ಬೆಟಿಂಗ್ ಚಟಕ್ಕೆ ಬಿದ್ದಿದ್ದ ಅನಿಲ್ ರಾಮು ಜಾಧವ್ ಇದಕ್ಕಾಗಿ ಹಣ ಸುರಿದು ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದ.ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಗೆ ಸಾಲಗಾರರ ಕಿರುಕುಳ ಹೆಚ್ಚಾಗಿತ್ತು. ಸಾಲ ತೀರಿಸುವ ದಾರಿ ಕಾಣದೇ ಅನಿಲ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
April 22, 2025
Breaking News, Crime
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ಮ್ಯಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಡದಿ ಪೊಲೀಸರು ರಿಕ್ಕಿ ರೈ ಗನ್ ಮ್ಯಾನ್ ವಿಠ್ಠಲ್ ರಾವ್ ನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಅಗತ್ಯವಿರುವ ಹಿನ್ನೆಲೆ ರಿಕ್ಕಿ ರೈ ಗನ್ ಮ್ಯಾನ್ ನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ರೈ ಮೇಲಿನ ಶೂಟೌಟ್ ಪ್ರಕರಣ ಸಂಬಂಧ ಅವರ ಕಾರು ಚಾಲಕ ಬಸವರಾಜು ನೀಡಿದ ದೂರಿನ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ …
Read More »
BigTv News
April 21, 2025
Breaking News, Crime
ಗುರುಪ್ರಸಾದ್ ಉಡುಪಿಯ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಊಟ ಮಾಡಿ ಮಲಗಿದವರು ಬೆಳಗ್ಗೆ ಏಳದೇ ಇದ್ದುದರಿಂದ ಮನೆಯವರು ಹಿಂಬದಿ ಕಿಟಕಿಯಿಂದ ನೋಡಿದಾಗ ಗುರುಪ್ರಸಾದ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಯುವಕ ಉತ್ತಮ ಉದ್ಯೋಗದಲ್ಲಿದ್ದು, ಯಾವುದೇ ಸಮಸ್ಯೆಗಳು ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆಗೆ ಕಾರಣ ಎನು ಎನ್ನುವುದು ನಿಗೂಢವಾಗಿ ಉಳಿದಿದೆ. ಪೊಲೀಸ್ ತನಿಖೆಯಿಂದಷ್ಟೇ ಈ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
April 21, 2025
Breaking News, Crime, ಬೆಂಗಳೂರು
ಓಂ ಪ್ರಕಾಶ್ ಎದೆ, ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ರಕ್ತದ ಮಡುವಿನಲ್ಲಿ ಒದ್ದಾಡಿ ನಿವೃತ್ತ ಓಂ ಪ್ರಕಾಶ್ ಪ್ರಾಣ ಬಿಟ್ಟಿದ್ದು, ಗಂಡನ ಉಸಿರು ನಿಲ್ಲುವವರೆಗೂ ಪತ್ನಿ ಕಾದು ನಿಂತಿದ್ದರು.ಕಣ್ಣಿಗೆ ಖಾರದಪುಡಿ ಎರಚಿ, ಮೈಮೇಲೆ ಎಣ್ಣೆ ಸುರಿದು, ಕೈಕಾಲು ಕಟ್ಟಿ ಹಾಕಿ ಎಂಟರಿಂದ ಹತ್ತು ಬಾರಿ ಇರಿದು ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ.ಓಂ ಪ್ರಕಾಶ್ ಪದ್ಮಿನಿ ಮತ್ತು ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, …
Read More »
BigTv News
April 21, 2025
Breaking News, ಬೀದರ್
ಇಬ್ಬರು ಬಾಲಕರು ತಮ್ಮ ಸ್ನೇಹಿತರ ಜೊತೆಗೆ ಗ್ರಾಮದ ಹೊರವಲಯದಲ್ಲಿರುವ ಬಾವಿಯ ಸಮೀಪ ಆಟವಾಡುತ್ತಿದ್ದರು.ಆಟದ ಸಂದರ್ಭದಲ್ಲಿ, ಬಾಲಕರಿಬ್ಬರೂ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾವಿಯು ಆಳವಾಗಿದ್ದು, ನೀರಿನ ಮಟ್ಟವೂ ಹೆಚ್ಚಿರುವುದರಿಂದ ರಕ್ಷಣೆಯ ಪ್ರಯತ್ನಗಳು ವಿಫಲಗೊಂಡಿದ್ದವು. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಶವಗಳನ್ನು ಬಾವಿಯಿಂದ ಹೊರತೆಗೆದರು. ಘಟನೆಯಿಂದ ಮೃತ ಬಾಲಕರ ಕುಟುಂಬಗಳು ದುಃಖದ ಸಾಗರದಲ್ಲಿ ಮುಳುಗಿವೆ. ಬೀದರ್ ಜಿಲ್ಲಾ ಪೊಲೀಸರು ಘಟನೆಯ ಕುರಿತು …
Read More »