Breaking News

ಗೋಪಾಲ ಜೋಶಿ ಕುರಿತು ಸ್ಪೋಟಕ್ ಮಾಹಿತಿ ಬಿಚ್ಚಿಟ್ಟಿ ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ರಾಷ್ಟ್ರೀಯ ರಾಜಕಾರಣದಲ್ಲಿ ಬಹುದೊಡ್ಡ ಛಾಪನ್ನು ಮೂಡಿಸಿರುವ ಜನನಾಯಕ. ಆದರೆ ಟಿಕೆಟ್ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಮೇಲೆ ಸುಳ್ಳು ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಈಗ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ಬಿಚ್ಚಿಟ್ಟಿದ್ದಾರೆ.

ಸಹೋದರ ಗೋಪಾಲ ಜೋಶಿಯವರ ಜೊತೆಗಿನ ಸಹೋದರ ಸಂಬಂಧವನ್ನು 32 ವರ್ಷಗಳ ಹಿಂದೆಯೇ ಕಳೆದುಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಈಗ ಮತ್ತೊಂದು ಸತ್ಯವನ್ನು ಹೊರಹಾಕಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಗೋಪಾಲ ಜೋಶಿ ಸೇರಿದಂತೆ ನಾಲ್ವರು ಅಣ್ಣ ತಮ್ಮಂದಿರು. ಆದರೆ ಯಾವುದೇ ಅಕ್ಕ-ತಂಗಿ ಇಲ್ಲವೇ ಇಲ್ಲ. ವಿಜಯಲಕ್ಷ್ಮಿ ಅಂತ ನನಗೆ ಯಾವುದೇ ಸಹೋದರಿ ಇಲ್ಲವೆಂದು ಹೇಳಿರುವುದು ನಿಜಕ್ಕೂ ಕುತೂಹಲಕ್ಕೆ ಕಾರಣವಾಗಿದೆ. ನನಗೆ ಸಹೋದರಿಯೇ ಇಲ್ಲ.! ಕಾಂಗ್ರೆಸ್ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದ್ದಾರೆ.

ಇನ್ನೂ ಗೋಪಾಲ ಜೋಶಿ, ಗೋವಿಂದ ಜೋಶಿ ಹಾಗೂ ಪ್ರಹ್ಲಾದ ಜೋಶಿ ನಾಲ್ವರು ಸಹೋದರ ಪೈಕಿ ಒಬ್ಬರು 1984ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಯಾವುದೇ ಸಹೋದರಿಯೂ ಇಲ್ಲದೇ ಇರುವುದು. ವಿಜಯಲಕ್ಷ್ಮಿ ಅಂತ ಯಾರೂ ಕೂಡ ಅಕ್ಕ -ತಂಗಿ ಇಲ್ಲ. ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಅವರು ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ. ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ ಎಂದರು.

Share News

About Shaikh BigTv

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *