Breaking News

Breaking News

ಧಾರವಾಡ: ಇಂದುಮತಿ ಕಾಂಬಳೆ ಇನ್ನಿಲ್ಲ! ಬಸ್‌ನಲ್ಲಿ ಪ್ರಯಾಣಿಸುವಾಗ ಹಾರ್ಟ್ ಅಟ್ಯಾಕ್.!

ಕರ್ನಾಟಕ ಸರ್ಕಾರದ ನೀರಾವರಿ ನಿಗಮದಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದ ಇಂದುಮತಿ ಕಾಂಬಳೆ ಅವರು ಬಸ್‌ನಲ್ಲಿ ಪ್ರಯಾಣ ಮಾಡುವಾಗಲೇ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾರೆ. ಸುಮಾರು ಹೊತ್ತು ನಾಡಿಮಿಡಿತವನ್ನು ಹಿಡಿದು ನೋಡಿದ್ದಾರೆ. ಆಗ ಮಹಿಳೆಯ ಜೀವ ಹೋಗಿರುವ ಮಾಹಿತಿ ಲಭ್ಯವಾಗಿದೆ. ಇದಾದ ನಂತರ ಧಾರವಾಡ ನಗರದ ಜಿಲ್ಲಾ ಆಸ್ಪತ್ರೆಗೆ ಬಸ್‌ ಅನ್ನು ತಿರುಗಿಸಿದ್ದಾರೆ.ಜಿಲ್ಲಾಸ್ಪತ್ರೆಗೆ ಬರುವ ವೇಳೆಗೆ ಆಕೆ ಸತ್ತಿದ್ದು ದೃಢಪಟ್ಟಿದ್ದು, ವೈದ್ಯರು ಮತ್ತೊಮ್ಮೆ ಪರಿಶೀಲನೆ ಮಾಡಿ ಸಾವಿನ ಬಗ್ಗೆ ಖಚಿತಪಡಿಸಿದ್ದಾರೆ. ಇನ್ನು ಮೃತ …

Read More »

ಹುಬ್ಬಳ್ಳಿ: ಬ್ಲಾಕ್ ಮೇಲ್ ಪ್ರಕರಣದ ಹಿನ್ನೆಲೆ ರಾಮ್ ಸೇನಾ ಅಧ್ಯಕ್ಷರ ಪ್ರಚೋದನಕಾರಿ ಹೇಳಿಕೆ.

ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ರಿಂದ ಪ್ರಚೋದನಕಾರಿ ಹೇಳಿಕೆ: ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ ಕಾಂಗ್ರೆಸ್ ಇರೋದು ಮುಸ್ಲಿಂರ ರಕ್ಷಣೆಗಾಗಿ ಮಾತ್ರ,ನೇಹಾ ಹಿರೇಮಠ ಹತ್ಯೆಯಾಗಿ ಏಪ್ರಿಲ್18 ಕ್ಕೆ ಒಂದು ವರ್ಷ ಆಗುತ್ತೆ. ಅಂದು ಶ್ರೀರಾಮಸೇನೆ ಒಂದು ಸಾವಿರ ಮಹಿಳೆಯರಿಗೆ “ತ್ರಿಶೂಲ ದಿಕ್ಷೆ” ನೀಡಲಿದೆ.ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ.ಅತ್ಯಾಚಾರಿಗಳು, ಕೊಲೆಗಡಿಗರಿ, ಲವ್ ಜಿಹಾದ್ ಮಾಡುವವರಿಗೆ ಚುಚ್ಚಿ. ನೇಹಾ ಹಿರೇಮಠ ಹತ್ಯೆ ಆಗಿ ಇನ್ನೂ ಒಂದು ವರ್ಷ ಆಗಿಲ್ಲ ಈಗ …

Read More »

ಹುಬ್ಬಳ್ಳಿ :ವಖ್ಫ್ ಬೊರ್ಡ್ ಬಗ್ಗೆ ಶ್ರೀರಾಮ್ ಸೇನೆ ಅಧ್ಯಕ್ಷರ ಹೇಳಿಕೆ…

ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ: ದೆಹಲಿಯ ಸಂಸತ್ತಿನಲ್ಲಿ ಐತಿಹಾಸಿಕ ಮಂಡನೆ ಮಾಡಿ ಅವತೇ ರಾತ್ರಿ ಬಿಲ್ ಪಾಸ್ ಆಗಿದ್ದು ಸ್ವಾಗರ್ತಾರ್ಹ ವಕ್ಪ್ ಬೋರ್ಡ್ ಹೆಸರಿನಲ್ಲಿ ಸರ್ಕಾರಿ ಜಾಗ, ರೈತರ, ಮಠಮಾನ್ಯಗಳ , ದಲಿತರ ಜಾಗ, ಎಂಎಲ್ ಎ , ಜಾಗಗಳನ್ನು ವಕ್ಪ್ ಬೋರ್ಡ್ ಲೂಟಿ ಮಾಡುತ್ತಿತ್ತು. ಇದರ ವಿರುದ್ಧ ಬಿಲ್ ಪಾಸ್ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು ಎಂದರು. ಇದನ್ನು ವಿರೋಧ ಮಾಡುತ್ತಿರುವವರು ದೇಶದ್ರೋಹಿಗಳು. …

Read More »

ಹುಬ್ಬಳ್ಳಿ: ಖಾಸಗಿ ಫೋಟೋ ಇಟ್ಟುಕೊಂಡು ಅನ್ಯಕೋಮಿಯ ಯುವಕನ ಬ್ಲಾಕ್ ಮೇಲ್.!

ಕಳೆದ ಎರಡು ದಿನಗಳ ಹಿಂದೆ ಅನ್ಯಕೋಮಿನ ಯುವಕ ಸಿರಾಜ್ ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದನು. ಯುವಕನ ಟಾರ್ಚರ್ ನಿಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿದ್ಯಾ ಎಂಬ ಯುವತಿಯು ಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿ ಆಗಿರುತ್ತಾಳೆ.ಹುಬ್ಬಳ್ಳಿಯಲ್ಲಿ ಟ್ಯಾಬ್ಲೆಟ್ ತಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾಳನ್ನು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಯುವತಿ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ …

Read More »

ಕನ್ನಡಪರ ಚಿಂತಕ, ಸಾಹಿತಿ ಪಿ.ವಿ.ನಾರಾಯಣ ಇನ್ನಿಲ್ಲ:ಅನಾರೋಗ್ಯ ದಿಂದ್ ನಿಧನ.

ಸಾಹಿತಿ, ವಿದ್ವಾಂಸ ಪಿ. ವಿ. ನಾರಾಯಣ (82) ಅವರು ಇಂದು ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಜಯನಗರದ 8ನೇ ಬ್ಲಾಕ್​ನ ಹೇಮಂತ ಅರಿಷ್ಠ ಅಪಾರ್ಟ್ಮೆಂಟ್​​ನಲ್ಲಿ ಅವರು ಇಹಲೋಕ ತ್ಯಜಿಸಿದ್ದು ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಅವರ ವಚನ ವ್ಯಾಸಂಗ ಕೃತಿಗೆ ಇಳಕಲ್ಲಿನ ಶ್ರೀವಿಜಯ ಮಹಂತೇಶ ಮಠ ಪುರಸ್ಕಾರ, ಸಮಾಜದ ಮೇಲೆ ವಿಜ್ಞಾನದ ಪ್ರಭಾವ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ ಮತ್ತು ಆರ್ಯಭಟ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಲಭಿಸಿವೆ.ಮಧ್ಯಾಹ್ನ …

Read More »

ಶಿಗ್ಗಾವ್ :”ನಮ್ಮ ಊರು ನಮ್ಮ ಕೆರೆ” ಹಸ್ತಾಂತರ ಕಾರ್ಯಕ್ರಮ.

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ “ನಮ್ಮ ಊರು ನಮ್ಮ ಕೆರೆ” ಹಸ್ತಾಂತರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾವೇರಿ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಪೂರ್ಣ ಕುಂಭ ಹಸ್ತಾಂತರಿಸುವ ಮೂಲಕ ಕೆರೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ ಮತ್ತು ಕೆರೆ ಸಮಿತಿಯವರಿಗೆ ನೀಡಿದರು. “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಲ್ಲಿ ಅತ್ತಿಗೇರಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು 24 ದಿನಗಳ ಕಾಲ ಕೆರೆ ಕಾಮಗಾರಿಯನ್ನು ಮಾಡಧಿಕೃತವಾಗಿ ಗ್ರಾಮ ಪಂಚಾಯತ್ ಮತ್ತು ಕೆರೆ ಅಭಿವೃದ್ಧಿ …

Read More »

ಕಲಬುರಗಿ : 11 ಮಂದಿಗೆ ನಂಬಿಸಿ 14 ಲಕ್ಷ ರೂ. ಪಡೆದು, ವಂಚಿಸಿದ ಆರೋಪಿಗಳು

ಆರೋಪಿಗಳು ಅಮಾಯಕ ನಿರುದ್ಯೋಗಿ ಯುವಕರನ್ನ ಗುರಿಯಾಗಿಸಿಕೊಂಡು ಅವರಿಗೆ ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರಿ ಕೊಡಿಸುತ್ತೇನೆ ಅಂತ ಆಮಿಷ ಒಡ್ಡಿ ಅವರಿಂದ‌ ಲಕ್ಷಾಂತರ ರೂಪಾಯಿ ದುಡ್ಡು ವಸೂಲಿ ಮಾಡಿ ನಕಲಿ ನೇಮಕಾತಿ ಆದೇಶಗಳನ್ನ ಕೊಟ್ಟು ಕಳುಹಿಸ್ತಿದ್ದರು.ಇದರಲ್ಲಿ ನೀನು ಜೈಲಿಗೆ ಹೋಗುತ್ತೀಯಾ” ಅಂತ ಹೆದರಿಸಿ ಕೇಳುಹಿಸಿದ್ದಾರೆ. ಹೀಗೆ, ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದ ನಾಗೇಶ್ ಮತ್ತು ಅಭಿಷೇಕ್​ ಇಬ್ಬರನ್ನು ಕಲಬುರಗಿ ಜಿಲ್ಲಾ ಸೆನ್ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.

Read More »

ತಂದೆಯನ್ನೇ ಕೊಂದು ಅಪಘಾತ ಕಥೆ ಕಟ್ಟಿದ ಮಗ,ಸತ್ಯ ಬಯಲು.!

ರಾಜು ಕುಡಿತ ಜಾಸ್ತಿ ಆಗಿತ್ತು‌ ಕಳೆದ 4-5 ವರ್ಷಗಳಿಂದ ಕೆಲಸ ಮಾಡುವುದು ಕಡಿಮೆ ಮಾಡಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದರು. ಕೊನೆಗೆ ಹಣ ಕಿತ್ತುಕೊಂಡು ಹೋಗಿ ಕುಡಿದು ಬಂದು ಅವರನ್ನೇ ಹೊಡೆಯುತ್ತಿದ್ದರು. ತಂದೆ ಕಾಟಕ್ಕೆ ಬೇಸತ್ತು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ಸೇರಿಕೊಂಡು ರಾಜು ಗಾಯಕವಾಡ ಅವರ ಹಲ್ಲೆ ಮಾಡಿದ್ದಾರೆ.ಮೃತದೇಹವನ್ನು ಬೈಕ್ ಮೇಲೆ ತೆಗೆದುಕೊಂಡು ಶಾಹಬಾದ್ ಮುಖ್ಯರಸ್ತೆಯಲ್ಲಿ ಎಸೆದು, ತಲೆ ಮೇಲೆ ಕಲ್ಲು …

Read More »

ಕಲಬುರಗಿ: ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ.

ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್​ ಆಗಿದ್ದ ಸಂತೋಷ್​ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.‌ ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ‌ ಮಾಡಿರುವ ಸಂತೋಷ್ ಕೊನೆಗೆ‌ ತಾ‌ನೂ ಕೂಡ ಮನೆಯ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಘನಘೋರ ಕೃತ್ಯ ‌ಕಂಡು‌ ಇಡೀ ಕಲಬುರಗಿ ಬೆಚ್ಚಿಬಿದ್ದಿದೆ. ಸ್ಟೇಷನ್ ಬಜಾರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More »

ಪತ್ನಿಯ ಕೊಲೆಗೆ ಜೈಲುಪಾಲಾಗಿದ್ದ ಪತಿಗೆ ಶಾಕ್, 5 ವರ್ಷದ ಬಳಿಕ ಪ್ರಿಯಕರನ ಜತೆ ರೆಡ್​ಹ್ಯಾಂಡ್ ಆಗಿ ಸಿಕ್ಕ ಹೆಂಡತಿ!

ಪೊಲೀಸರ ದಾಖಲೆಗಳ ಪ್ರಕಾರ ಮಲ್ಲಿಗೆ ಎಂಬಾಕೆ ಆಕೆಯ ಗಂಡನ ಕೈಯಿಂದಲೇ ಹತ್ಯೆ ಆಗಿ ಅದಾಗಲೇ ಐದು ವರ್ಷ ಆಗಿ ಹೋಗಿದೆ. ಆಕೆಯನ್ನು ಕೊಲೆ ಮಾಡಿದ್ದಾಕ್ಕಾಗಿ ಗಂಡ ಸುರೇಶ್​ ಎರಡು ವರ್ಷ ಜೈಲೂಟ ಕೂಡ ಮಾಡಿ ಬಂದಿದ್ದಾರೆ. ಆದರೆ, ವಿಚಿತ್ರ ಎಂದರೆ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಲ್ಲಿಗೆ ಮಂಗಳವಾರ ಸಂಜೆ ಮಡಿಕೇರಿ ನಗರದ ಹೋಟೆಲ್​ ಒಂದರಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್​ಗೆ ಕಾಣಿಸಿದೆ. ಅದೂ ಕೂಡ ಆಕೆಯ ಲವರ್ ಜತೆ! ಇದನ್ನು …

Read More »