ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ “ನಮ್ಮ ಊರು ನಮ್ಮ ಕೆರೆ” ಹಸ್ತಾಂತರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾವೇರಿ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಪೂರ್ಣ ಕುಂಭ ಹಸ್ತಾಂತರಿಸುವ ಮೂಲಕ ಕೆರೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ ಮತ್ತು ಕೆರೆ ಸಮಿತಿಯವರಿಗೆ ನೀಡಿದರು. “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಲ್ಲಿ ಅತ್ತಿಗೇರಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು 24 ದಿನಗಳ ಕಾಲ ಕೆರೆ

ಕಾಮಗಾರಿಯನ್ನು ಮಾಡಧಿಕೃತವಾಗಿ ಗ್ರಾಮ ಪಂಚಾಯತ್ ಮತ್ತು ಕೆರೆ ಅಭಿವೃದ್ಧಿ ಸಮಿತಿ ಹಸ್ತಾಂತರ ಮಾಡಲಾಯಿತು, ಕೆರೆ ಕಾಮಗಾರಿಯನ್ನು ಯೋಜನೆಯಿಂದ 7,27,102/ಅನುದಾನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.ಇನ್ನು ಈ ಕಾರ್ಯವನ್ನು ದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಶೇಖರಗೌಡ ಪಾಟೀಲ್ ,ಕೆರೆ ಸಮಿತಿ ಉಪಾಧ್ಯಕ್ಷರಾದ ಶ್ರೀ ಹನುಮಂತಗೌಡ್ರ ಪಾಟೀಲ್ , ಶಿಗ್ಗಾಂವ ತಾಲ್ಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಉಮಾ ,ಹುಲಗೂರು ವಲಯದ ಮೇಲ್ವಿಚಾರಕರಾದ ಶ್ರೀ ನಿರಂಜನ್,ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿ ಶ್ರೀ ರವಿ ಗಾಣಿಗೇರ ಅತ್ತಿಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಅಬ್ದುಲ್ ಸಾಬ್ ತೋಟದ ಹಾಗು ಸದಸ್ಯರುಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

