Breaking News

Breaking News

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೇರಿಯಾಗಿದೆ.

ಬೆಂಗಳೂರು ಕಡೆಯಿಂದ ರಾಂಪುರ ಕಡೆ ತೆರಳುತ್ತಿದ್ದ ಕಾರ್ ಪಲ್ಟಿಯಾಗಿದೆ. ಪಕ್ಕದ ಹೈವೇಗೆ ಬಿದ್ದು, ಸರ್ವೀಸ್ ರಸ್ತೆಗೆ ಕಾರು ಉರುಳಿಬಿದ್ದಿದೆ. ಹೆದ್ದಾರಿಯಲ್ಲಿ ಕಾರ್ ಭೀಕರವಾಗಿ ಪಲ್ಟಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾರು ಚಲಾಯಿಸುತ್ತಿದ್ದ ಮೌಲಾ ಅಬ್ದುಲ್ ಮತ್ತು ಅವರ ಇಬ್ಬರು ಪುತ್ರರಾದ ರೆಹಮಾನ್ ಮತ್ತು ಸಮೀರ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೌಲಾ ಅವರ ಪತ್ನಿ ಸಲೀಮಾ ಬೇಗಂ, ಅವರ ತಾಯಿ ಫಾತಿಮಾ ಮತ್ತು ಮತ್ತೊಬ್ಬ ಪುತ್ರ ಹುಸೇನ್ ಗಂಭೀರ ಗಾಯಗೊಂಡಿದ್ದಾರೆ. ಪೊಲೀಸರು ಅವರನ್ನು ಬಳ್ಳಾರಿ …

Read More »

ಅಪಘಾತ: ಹೊತ್ತಿ ಉರಿದ ಬಸ್: ಹತ್ತಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಕರಕಲು.

ಖಾಸಗಿ ಬಸ್ ವಿದ್ಯುತ್ ಕಂಬ ಹಾಗೂ ಕಾಂಪೌಂಡ್ ಗೆ ಹೊಡೆದಿದ್ದು, ಪರಿಣಾಮ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬಸ್ ಹೊತ್ತಿ ಉರಿಯಲಾರಂಭಿಸಿದೆ.ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್ ಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ಬೈಕ್ ಗಳಲ್ಲಿ ಇಲ್ಲಿ ತಂದು ನಿಲ್ಲಿಸಲಾಗಿತ್ತು. ಈ ಬೈಕ್ ಗಳು ಬೆಂಕಿಗಾಹುತಿಯಾಗಿವೆ.

Read More »

ಸಿಎಂ ಸಿದ್ದರಾಮಯ್ಯಗೆ ಮತ್ತೆ ಮೂಡಾ ಸಂಕಷ್ಟ: EDಯಿಂದ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಕೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ-ಇಡಿ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದೆ.ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಸಾಕಷ್ಟು ಸಾಕ್ಷಿಗಳಿವೆ. ನಮ್ಮ ತನಿಖೆಯಲ್ಲಿ ಅವರ ತಪ್ಪುಗಳು ಸಾಬೀತಾಗಿವೆ. ಹೀಗಾಅಗಿ ಲೋಕಾಯುಕ್ತ ವರದಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದೆ ಎಂದು ತಿಳಿದುಬಂದಿದೆ.

Read More »

ರಜೆ ಕೊಡದ್ದಕ್ಕೆ ಬೆನ್ನು ನೋವಿನಿಂದ ಬಳಲುತ್ತಿದ್ದ ಚಾಲಕ ಬಸ್ಸಿನಲ್ಲಿಯೇ ನೇಣಿಗೆ ಶರಣು.!

ಬೆಳಗಾವಿಯಲ್ಲಿ ಬಸ್‌ ಚಾಲಕರೊಬ್ಬರು ಬಸ್ಸಿನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿಯ ಡಿಪೋದ ಎರಡನೇ ಘಟಕದಲ್ಲಿ ಈ ಘಟನೆ ನಡೆದಿದೆ. ಎರಡನೇ ಘಟಕದ ಬಸ್‌ ಚಾಲಕ ಬಾಲಚಂದ್ರ ಹುಕೋಜಿ ನೇಣಿಗೆ ಶರಣಾದ ಚಾಲಕ. ನಿರಂತರ ಬೆನ್ನು ನೋವುನಿಂದ ಬಳಲುತ್ತಿದ್ದ ವಾಲಚಂದ್ರ ಅವರು ಮನೆಯಲ್ಲಿ ಅಕ್ಕನ ಮದುವೆಗೆ ರಜೆಯನ್ನು ಕೇಳಿದ್ದರು.ರಜೆ ನೀಡದ ಹಿನ್ನೆಲೆಯಲ್ಲಿ ಸಿಬಿಟಿಯಿಂದ ವಡಗಾವ ನಗರ ಸಂಚಾರ ಬಸ್‌ನಲ್ಲ ಕರ್ತವ್ಯ ನಿರ್ವಹಿಸಬೇಕಿದ್ದ ಅವರು ಅದೇ ಬಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ …

Read More »

ಹಾವೇರಿ: ವಂದೇ ಭಾರತ ರೈಲು ನಿಲುಗಡೆಗೆ ಆದೇಶ,ಕೇಂದ್ರದಿಂದ ಒಪ್ಪಿಗೆ.

ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್‌ ರೈಲು ಹಾವೇರಿಯಲ್ಲಿ ನಿಲುಗಡೆ ಮಾಡಲು ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಇದರಿಂದಾಗಿ ಹಾವೇರಿ ಜನ ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಇದಕ್ಕಾಗಿ ಮಾಜಿ ಸಿಎಂ ಹಾಗೂ ಹಾವೇರಿಯ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Read More »

ಲೋಕಸಭೆಯಲ್ಲಿ ಮಹತ್ವದ ‘ವಕ್ಫ್ ತಿದ್ದುಪಡಿ ಮಸೂದೆ’ ಮಂಡನೆ.

ಧಾರ್ಮಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ಗೌರವಿಸುವಾಗ ವಕ್ಫ್ ನಿರ್ವಹಣೆಯನ್ನು ಸುಧಾರಿಸುವುದು, ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ಡಿಜಿಟಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಈ ಮಸೂದೆ ಹೊಂದಿದೆ ಎಂದು ರಿಜಿಜು ಒತ್ತಿ ಹೇಳಿದರು.”ಈ ಮಸೂದೆಯು ಧಾರ್ಮಿಕ ಸಂಸ್ಥೆಗಳ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ರಿಜಿಜು ಹೇಳಿದರು. ಬದಲಾಗಿ, ಈ ಹಿಂದೆ ಅವುಗಳ ಕೊರತೆ ಇರುವವರಿಗೆ, ವಿಶೇಷವಾಗಿ ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಕ್ಕುಗಳನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

Read More »

ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಬೆಂಗಳೂರು ಏರ್‌ಪೋರ್ಟ್‌. ಏರ್‌ಪೋರ್ಟ್‌ನಲ್ಲಿ ಕನ್ನಡ ಭಾಷೆ ರಾರಾಜಿಸಲಿದೆ.

ರಾಜ್ಯದಲ್ಲಿ ಕನ್ನಡ ಬೆಳೆಯಬೇಕು. ಬಳಕೆ ಹೆಚ್ಚಾಗಬೇಕು ಎಂಬ ಒತ್ತಾಯದ ಮಧ್ಯೆ ಬೆಂಗಳೂರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲು ಮುಂದಾಗಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗೆ ಒಟ್ಟಾರೆ ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚಿಸುವ ಗುರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಇನ್ಮುಂದೆ ಏರ್‌ಪೋರ್ಟ್‌ನಲ್ಲಿ ಕನ್ನಡ ಭಾಷೆ ರಾರಾಜಿಸಲಿದೆ.

Read More »

ಗುಂಡು ಹಾರಿಸಿ, ಮೂವರನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.!

ಪತ್ನಿ ಬಿಟ್ಟು ಹೋಗಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬ ತನ್ನ ಮಗಳು ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ರಾತ್ರಿ ಚಿಕ್ಕಮಗಳೂರು ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ಘಟನೆ ನಡೆದಿದೆ.ಕೊಲೆ ಮಾಡಿದ ಬಳಿಕ ಸೆಲ್ಫಿ ವಿಡಿಯೋ ಮಾಡಿ ರತ್ನಾಕರ್ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾನೆ.

Read More »

ಈದ್ಗಾ ಮೈದಾನದಲ್ಲಿ ಹಿಂದೂ ಕಾರ್ಯಕರತರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ, ಬಿಗುವಿನ ವಾತಾವರಣ ನಿರ್ಮಾಣ.!

ರಂಜಾನ್‌ ಪ್ರಾರ್ಥನೆ ನಂತರ ವಿವಾದಿತ ಮೈದಾನಕ್ಕೆ ಬೇಲಿ ಹಾಕಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಬೇಲಿ ಹಾಕಿದ್ದು ಯಾರು ಎಂದು ಬೇಲಿ ಹಾಕಿರೋದನ್ನ ಖಂಡಿಸಿ ಹಿಂದೂಪರ ಹೋರಾಟಗಾರ ಆಕ್ರೋಶ ಹೊರಹಾಕಿದ್ದಾರೆ.ಕೂಡಲೇ ಬೇಲಿ ತಗೆಯುವಂತೆ ಹಿಂದೂಪರ ಹೋರಾಟಗಾರರು ಸ್ಥಳದಲ್ಲಿ ಧರಣಿ ಕುಳಿತು ಸಾರ್ವಜನಿಕರ ಆಸ್ತಿಯನ್ನು ಕಬಳಿಸುತ್ತಿರುವ ಗುಂಡಾಗಳು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.ಪ್ರತಿಭಟನಾಕಾರರ ಮನವೊಲಿಸಿ ಸಂಜೆ 7-30 ರ ಒಳಗೆ ಬೇಲಿ ತಗೆಸುತ್ತೇವೆ ಅಲ್ಲಿಯ ವರೆಗೆ ಅವಕಾಶ ನೀಡುವಂತೆ ಪ್ರತಿಭಟನಾಕಾರರಲ್ಲಿ ಎಸ್ಪಿ ಮನವಿ …

Read More »

ಗ್ರಾಮವು ಮದ್ಯದ ವಿರುದ್ಧ ಸಮರ ಸಾರಿದ್ದು, ಅಕ್ರಮ‌ ಮದ್ಯ ಮಾರಾಟಕ್ಕೆ ಬ್ರೇಕ್.!

ಬ್ಯಾಡಮೂಡ್ಲು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಿದರೆ ರೂ.1 ಲಕ್ಷ ದಂಡ ಹಾಕಲು ಗ್ರಾಮಸ್ಥರು ರೂಲ್ಸ್​ ಮಾಡಿದ್ದಾರೆ. ಯಾರೇ ಇರಲಿ ಅಕ್ರಮ ಮದ್ಯ ಮಾರಿದರೆ ರೂ.1 ಲಕ್ಷ ರೂಪಾಯಿ ದಂಡ ಕಟ್ಟಬೇಕು ಮತ್ತು ಮದ್ಯ ಮಾರಾಟದ ಸುಳಿವು ಕೊಟ್ಟರೆ ರೂ.10 ಸಾವಿರ ನಗದು ಬಹುಮಾನವು ನೀಡುವುದಾಗಿ ಇದೇ ವೇಳೆ ಮುಖಂಡರು ಘೋಷಣೆ ಮಾಡಿದ್ದಾರೆ.ಗ್ರಾಮಸ್ಥರ ಈ ಸಭೆಯ ನಿರ್ಣಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪ್ರಶಂಸೆ ವ್ಯಕ್ತವಾಗುತ್ತಿದೆ.

Read More »