Breaking News

Breaking News

ಬೀದರ : ಬುದ್ದಿವಾದ ಹೇಳಿದಕ್ಕೆ ಬಾಲಕಿಯೊಬ್ಬಳ ಆತ್ಮಹತ್ಯೆ.

ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬೇಡ ಎಂದು ಆಕೆಯ ತಂದೆ ಸಂತೋಷ್ ಬುದ್ಧಿವಾದ ಹೇಳಿದ್ದರು.ಇದರಿಂದಾಗಿ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಈ ಘಟನೆಗೆ ಸಂಬಂಧಿಸಿದಂತೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಪಘಾತ : ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಉರುಳಿದ ಲಾರಿ.

ಕೊಳ್ಳೇಗಾಲ : ನಗರದ ಮೋಳೆ ಬಡಾವಣೆಯ ರೈತ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಜಮೀನಿಗೆ ಲಾರಿ ಉರುಳಿ ಬಿದ್ದಿದೆ.ಲಾರಿ ಚಾಮರಾಜನಗರದಿಂದ ಮಧ್ಯರಾತ್ರಿ ಕೂಲ್ ಡ್ರಿಂಕ್ಸ್ ತುಂಬಿಕೊಂಡು ಹೈದರಾಬಾದ್‌ಗೆ ಹೋಗುತ್ತಿತ್ತು. ಚಾಲಕ ಅಸ್ಫಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈ ಘಟನೆಯಿಂದ ನಾಶವಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಿ ವಾಹನವನ್ನು ಒಯ್ಯುವಂತೆ ಸ್ಥಳೀಯ ರೈತರು ಒತ್ತಾಯ ಮಾಡಿದರು.ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಶಾಸಕ ಬಸನಗೌಡ ಯತ್ನಾಳ 6 ವರ್ಷಗಳ ಕಾಲ ಉಚ್ಚಾಟನೆ, ಬೆಂಬಲಿಗರ ರಾಜೀನಾಮೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದನ್ನು ವಿರೋಧಿಸಿ ಅವರು ಬೆಂಬಲಿಗರು ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ಯತ್ನಾಳ್ ಅವರ ಹಿಂದೂತ್ವದ ತತ್ವಗಳಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ ಶಂಕರ್ ಹೂಗಾರ್, ‘ಹಿಂದೂ ನಾಯಕ ಯತ್ನಾಳ್ ಬೆನ್ನಿಗೆ ನಾವು ನಿಲ್ಲುತ್ತೇವೆ’ ಎಂದು ದೃಢವಾಗಿ ಹೇಳಿದ್ದಾರೆ.ಯತ್ನಾಳ್ ಅವರ ಉಚ್ಚಾಟನೆ ಹಿನ್ನೆಲೆಯಲ್ಲಿ ಈಗಾಗಲೇ ಅವರ ಬೆಂಬಲಿಗರು, ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದಲ್ಲದೇ ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ

Read More »

ಚಿಕ್ಕಬಳ್ಳಾಪುರ: ಪ್ರೀತಿಸಿ ವಿವಾಹವಾದ ಹಿಂದೂ—ಮುಸ್ಲಿಮ್ ಜೋಡಿ!

ಹಿಂದೂ ಯುವಕ ಹಾಗೂ ಮುಸ್ಲಿಮ್ ಯುವತಿ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಪೊಲೀಸ್ ಠಾಣೆಯಲ್ಲಿ ಒಂದಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿಯಲ್ಲಿ ನಡೆದಿದೆ.ಜೋಡಿ ಕಳೆದ 2ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಇವರಿಬ್ಬರ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ನಾವಿಬ್ಬರು ಜೊತೆಯಾಗಿ ಬದುಕುತ್ತೇವೆ ಎಂದು ಜೋಡಿ ತೀರ್ಮಾನಿಸಿ, ಮನೆ ಬಿಟ್ಟು ಬಂದು ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು.ಕೊನೆಗೂ ಪೋಷಕರ ವಿರೋಧದ ನಡುವೆಯೂ ಜೋಡಿ ದೇವಸ್ಥಾನವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. …

Read More »

ಕಾನ್ಸ್​​​​​ಸ್ಟೆಬಲ್​​​​ ಬಳಿ ರೂ.5 ಸಾವಿರ ಲಂಚಕ್ಕೆ ಬೇಡಿಕೆ, ಡಿವೈಎಸ್ಪಿ ಲಂಚ ಆರೋಪ.

ಜಿಲ್ಲಾ ಖಜಾನೆಯಲ್ಲಿಯೇ ಕರ್ತವ್ಯ ಮುಂದುವರಿಸಲು ಸಿಬ್ಬಂದಿಯೋರ್ವರಿಂದ ರೂ.5 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುವಾಗಲೇ ರೆಡ್​​ಹ್ಯಾಂಡ್​ ಆಗಿ ಡಿವೈಎಸ್​​ಪಿ ಟಿ.ಪಿ.ಕೃಷ್ಣಮೂರ್ತಿ ಎಂಬುವವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಕೃಷ್ಣಮೂರ್ತಿ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೊಲೀಸ್‌ ಸಿಬ್ಬಂದಿಯೊಬ್ಬರಿಂದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಲೋಕಾಯುಕ್ತ ಎಸ್‌.ಪಿ. ಮಂಜುನಾಥ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ.

Read More »

ಬೆಂಗಳೂರು : ಡಿಕೆಶಿ ಸಂವಿಧಾನ ಬದಲಾವಣೆ ಹೇಳಿಕೆ ಖಂಡಿಸಿ 28ರಂದು ರಾಜ್ಯಾದ್ಯಂತ ಜೆಡಿಎಸ್‌‍ ಪ್ರತಿಭಟನೆ.

ಸಂವಿಧಾನ ಬದಲಾವಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿರುವುದನ್ನು ಖಂಡಿಸಿ ಮಾ.28ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌‍ ಪರಿಶಿಷ್ಟ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್‌ ಪ್ರತಿಮೆ ಬಳಿ ಮಾ.28ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

Read More »

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ದೇವೇಗೌಡರು.

ಹಾಸನ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಸನ ವರ್ತುಲ ರಸ್ತೆ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮಾಜಿ ಪ್ರಧಾನಿಗಳು,ರಾಜ್ಯಸಭೆ ಸದಸ್ಯರಾದ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.ಅಲ್ಲದೆ, ಕರ್ನಾಟಕದ ಮೂಲಸೌಕರ್ಯ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ತಾವು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, ನಾನಾ ಭಾಗಗಳಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಕ್ಷಿಪ್ರಗತಿಯ ಪೂರ್ಣಗೊಳಿಸಬೇಕು …

Read More »

ಬಲ್ಲಿಯ(ಉ.ಪಿ): ವಧುವಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಛಾಯಾಗ್ರಾಹಕನ ಹತ್ಯೆ

ವಿವಾಹದಲ್ಲಿ ತೆಗೆದ ವಧುವಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಕ್ಕಾಗಿ ಛಾಯಾಗ್ರಾಹಕನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ಸಹೋದರ ಮತ್ತು ಸೋದರ ಸಂಬಂಧಿಯನ್ನು ಬಂಧಿಸಲಾಗಿದೆ.ಚಂದನ್ ಪ್ರಮುಖ ಆರೋಪಿ ಸುರೇಂದ್ರ ಯಾದವ್ ಅವರ ಸಹೋದರಿಯ ಮದುವೆಯಲ್ಲಿ ಛಾಯಾಚಿತ್ರ ತೆಗೆದಿದ್ದನು ವಧುವನ್ನು ಅತ್ತೆಯ ಮನೆಗೆ ಕಳಿಸುವಾಗ ವಧುವನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನು.ನಂತರ ತನ್ನ ಹಾಗು ವಧುವಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾನೆ. ಇದರಿಂದಾಗಿ ಆಕೆಯ ಅತ್ತೆಯ ಮನೆಯಲ್ಲಿ ಜಗಳವಾಗಿದೆ. ಮಹಿಳೆಯ …

Read More »

ಉತ್ತರ ಪ್ರದೇಶ : ನದಿಯಲ್ಲಿ ಮುಳುಗಿ ಮೂವರು ಮಕ್ಕಳ ಸಾವು.!

ಮಾಮುಡಿ ಮೊಹಲ್ಲಾದ ನಾಲ್ಕು ಮಕ್ಕಳು ಮೇಕೆಗಳನ್ನು ಮೇಯಿಸಲು ನದಿಯ ದಡಕ್ಕೆ ಹೋಗಿದ್ದರು. ನಂತರ ಶಾರುಖ್ ಅವರ ಸಹೋದರ ಜೀಶನ್ ಈಜಿ ದಡ ಸೇರಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ.ಮಾಹಿತಿ ತಿಳಿದು ಪೊಲೀಸ್ ತಂಡಗಳು ಮತ್ತು ಈಜು ಪಟುಗಳು ನದಿಯಲ್ಲಿ ಶೋಧ ನಡೆಸಿದರೂ ಮಕ್ಕಳ ಶವ ಪತ್ತೆಯಾಗಿಲ್ಲ. ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿ ನೀರಿಗಿಳಿದ್ದಿದ್ದಾರೆ. ಆದರೆ ಆಳವಾದ …

Read More »

ಕೊಬ್ಬರಿಗೆ ಬಂಪರ್ ಬೆಲೆ, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ.

ಕೊಬ್ಬರಿ ಕ್ವಿಂಟಾಲ್‌ಗೆ 19 ಸಾವಿರ ರೂ. ದಾಟುವ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ದಿನದಿಂದ ದಿನಕ್ಕೆ ನಿಧಾನವಾಗಿ ಕೊಬ್ಬರಿ ಬೆಲೆ ಏರುತ್ತಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.ಬಿರುಬೇಸಿಗೆಯಿಂದ ಎಳನೀರಿಗೆ ಭಾರೀ ಬೇಡಿಕೆಯಿದ್ದು, ಸಾಕಷ್ಟು ರೈತರು ಎಳನೀರನ್ನೇ ಮಾರಾಟ ಮಾಡುತ್ತಿರುವುದರಿಂದ ತೆಂಗಿನಕಾಯಿ ಅಷ್ಟಾಗಿ ಲಭ್ಯವಾಗುತ್ತಿಲ್ಲ. ತೆಂಗು ಬೆಳೆಯುತ್ತಿದ್ದ ಪ್ರದೇಶದಲ್ಲಿ ಅಡಿಕೆ ಬೆಳೆ ಆವರಿಸಿದ್ದು, ರೈತರು ಹೆಚ್ಚಾಗಿ ಅಡಿಕೆಗೆ ಒತ್ತು ನೀಡುತ್ತಿದ್ದು, ತೆಂಗಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿರುವುದರಿಂದ ಉತ್ಪಾದನೆ ಕುಂಠಿತವಾಗುತ್ತಿದೆ.ತೆಂಗಿನಕಾಯಿಯೂ …

Read More »