Breaking News

ಕರ್ನಾಟಕ

ಸಚಿವ ಸೋಮಶೇಖರ್ ಗೆ ಕೊರೊನಾ ದೃಢ

ಬೆಂಗಳೂರು:  ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಆದರೆ, ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

Read More »

2 ಕಾರುಗಳು ಮತ್ತು ಟಿಪ್ಪರ್ ಮಧ್ಯೆ ಡಿಕ್ಕಿ : ಆರು ಜನ ಸಾವು

ರಾಮನಗರ: ಎರಡು ಕಾರುಗಳು ಹಾಗೂ ಟಿಪ್ಪರ್ ಮಧ್ಯೆ ಡಿಕ್ಕಿ ಸಂಭವಿಸಿ ಆರು ಮಂದಿ ಸಾವನ್ನಪ್ಪಿ, 8 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಂಬಳಗೋಡು ಪೊಲೀಸ್ ಠಾಣೆ ‌ವ್ಯಾಪ್ತಿಯಲ್ಲಿ ನಡೆದಿದೆ. ಎರಡು ಕಾರುಗಳು ಮತ್ತು ಒಂದು ಬೈಕ್​ ಮೇಲೆ ಟಿಪ್ಪರ್ ಉರುಳಿದೆ ತಿಳಿದುಬಂದಿದೆ. ಮೃತರನ್ನ ನಿಖಿತಾರಾಣಿ, ವೀಣಮ್ಮ, ಇಂದ್ರಕುಮಾರ್, ಕೀರ್ತಿಕುಮಾರ್, ಟಯೊಟಾ ಕಂಪನಿ ನೌಕರ ಶಿವಪ್ರಕಾಶ್ ಹಾಗೂ ಬೈಕ್​​ಲ್ಲಿದ್ದ ಜಿತಿನ್ ಬಿ ಜಾರ್ಜ್ ಎಂದು ಗುರುತಿಸಲಾಗಿದೆ. ಎರಡು ಕಾರುಗಳಲ್ಲಿ …

Read More »

ಮಾಸ್ಕ್ ಇಲ್ಲಿದೆ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ

ಧಾರವಾಡ :  ಎಲ್ಲ ಶಾಲೆಗಳಲ್ಲಿ ಸುಮಾರು 100 ಜನರನ್ನು ಕೋವಿಡ್‌ ತಪಾಸಣೆ ಮಾಡಬೇಕು. ಈ ಪೈಕಿ 5ಕ್ಕಿಂತ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಂಡು ಬಂದರೆ 5 ದಿನಗಳ ಕಾಲ ಶಾಲೆ ಮುಚ್ಚಬೇಕು . ಜಿಲ್ಲೆಯ ಶಾಲೆ – ಕಾಲೇಜುಗಳಲ್ಲಿ ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು. ನಗರದ ಡಿಸಿ ಕಚೇರಿ ನೂತನ ಸಭಾಂಗಣದಲ್ಲಿ ಕೋವಿಡ್‌ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. …

Read More »

ಕರ್ನಾಟಕ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲೆಗಳನ್ನು ಬಂದ್​ ಮಾಡುವುದಿಲ್ಲ

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲೆಗಳನ್ನು ಬಂದ್​ ಮಾಡುವುದಿಲ್ಲ.ಕೊರೊನಾ ಪ್ರಕರಣಗಳು​ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡುವ ಬಗ್ಗೆ ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ. ಶಾಲಾ- ಕಾಲೇಜು ಬಂದ್​ ಬಗ್ಗೆ ಆಯಾ ಡಿಸಿ ನಿರ್ಧರಿಸ್ತಾರೆ ಎಂದು ಟಿವಿ9ಗೆ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್​ ಪ್ರತಿಕ್ರಿಯೆ ನೀಡಿದ್ದಾರೆ. ಆಯಾ ಅಧಿಕಾರಿಗಳೇ ನಿರ್ಧರಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಡಿಸಿಗಳು ಈ ಬಗ್ಗೆ ನಿರ್ಧರಿಸ್ತಾರೆ ಎಂದು ತಿಳಿಸಿದ್ದಾರೆ.

Read More »

ರಾಜ್ಯದಲ್ಲಿ ಮತ್ತೆ ಕೊರೊನಾ ಮಹಾಸ್ಪೋಟ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಮಹಾಸ್ಪೋಟವಾಗಿದ್ದು, ಇಂದು ಹೊಸದಾಗಿ 14,473 ಜನರಿಗೆ ಕೊರೊನಾ ಸೋಂಕು  ದೃಢಪಟ್ಟಿದೆ. ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಕಳೆದ 24 ಗಂಟೆಯಲ್ಲಿ 1,40,452 ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

Read More »

ತುರ್ತು ಸಭೆ ಕರೆದ ಆರೋಗ್ಯ ಸಚಿವ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕರುನಾಡಿನಲ್ಲಿ ಮತ್ತೆ ಲಾಕ್ ಡೌನ್ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯಾದ್ಯಂತ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿರುವ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ನಿನ್ನೆ 11,698 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿಯೇ 9221 ಕೇಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಲಾಕ್ …

Read More »

ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರಿಗೆ ಕೋವಿಡ್ ದೃಢ

ಬೆಂಗಳೂರು: ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಡೆಸಿದ “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಹಿರಿಯ ನಾಯಕ ಹೆಚ್‌ಎಂ ರೇವಣ್ಣ ಹಾಗೂ ಸಿಎಂ ಇಬ್ರಾಹಿಂ ಅವರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

Read More »

ಕೊರೋನಾ ಹೆಚ್ಚಳ : ಇಂದು ಸಂಜೆ ಸಿಎಂ ಮಹತ್ವದ ಸಭೆ

ಬೆಂಗಳೂರು : ದಿನೇ ದಿನೇ ಹೆಚ್ಚಾಗುತ್ತಿರುವಂತ ಕೊರೋನಾ, ಓಮಿಕ್ರಾನ್ ಕೇಸ್ ಗಳಿಂದಾಗಿ 3ನೇ ಅಲೆ ಆರಂಭವಾಗಿದೆ.  ಹಿನ್ನೆಲೆಯ್ಲಲಿ ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ. ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಮಣಿಪಾಲ್ ಆಸ್ಪತ್ರೆಯಿಂದಲೇ ವರ್ಚುವಲ್ ಮೂಲಕ ಅರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ತಜ್ಞರ ಜೊತೆಗೆ ಮಹತ್ವದ ಸಭೆ ನಡೆಸಲಿದ್ದು, ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Read More »

ದಾವಣಗೆರೆಯಲ್ಲಿ 32 ಮಕ್ಕಳಿಗೆ ಕೊರೋನಾ ದೃಢ

ದಾವಣಗೆರೆ :ದಿನೇ ದಿನೇ ಹೆಚ್ಚಾಗುತ್ತಿರುವಂತ ಕೊರೋನಾ, ಓಮಿಕ್ರಾನ್ ಕೇಸ್ ಗಳಿಂದಾಗಿ 3ನೇ ಅಲೆ ಆರಂಭವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊರೋನಾ  ಸ್ಫೋಟಗೊಂಡಿದೆ. ಪ್ರಾಂಶುಪಾಲರು ಸೇರಿ 32 ಮಕ್ಕಳಿಗೆ ಕೊರೋನಾ ಪಾಸಿಟಿವ್ಬಂದಿದೆ. ಚನ್ನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಚಾಮರಾಜನಗರದಲ್ಲಿ ಓಂ ಶಕ್ತಿ ಯಾತ್ರೆಗೆ ಹೋದ ಒಂದೇ ಗ್ರಾಮದ 22 ಮಂದಿಗೆ ಸೋಂಕು ಬಂದಿದೆ. ಗ್ರಾಮದಲ್ಲಿ ಆತಂಕ ಶುರುವಾಗಿದೆ.

Read More »

ಸಿಎಂ ಪುತ್ರನಿಗೆ ಕೋವಿಡ್ ದೃಢ

ದಿನೇ ದಿನೇ ಹೆಚ್ಚಾಗುತ್ತಿರುವಂತ ಕೊರೋನಾ, ಓಮಿಕ್ರಾನ್ ಕೇಸ್ ಗಳಿಂದಾಗಿ 3ನೇ ಅಲೆ ಆರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ ಅವರಿಗೆ ಸೋಂಕು ದೃಢಪಟ್ಟಿದ್ದು, ಕುಟುಂಬದವರು ಪರೀಕ್ಷೆ ಮಾಡಿಸಿದ್ದಾರೆ.ಈ ವೇಳೆ ಪುತ್ರ ಭರತ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಭರತ್ ಟ್ವೀಟ್ ಮಾಡಿದ್ದು, ನನಗೆ ಕೋವಿಡ್ ಸೋಂಕು ತಗುಲಿದೆ. ಸೌಮ್ಯ ಲಕ್ಷಣಗಳಿವೆ. ಮನೆಯಲ್ಲೇ ಐಸೋಲೇಟ್ ಆಗಿದ್ದೇನೆ. ನನ್ನ …

Read More »