Breaking News

ಕರ್ನಾಟಕ

ಬಕ್ರೀದ್ ಶಾಂತಿ ಸಮಾನತೆ-ಸೌಹಾರ್ದತೆಯ ಸಂದೇಶ ಸಾರುವ ಹಬ್ಬ

ಚಿಂತಾಮಣಿ: ನಗರದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ 9 ಬೆಳಗ್ಗೆ ಗಂಟೆಗೆ ಜಾಮಿಯಾ ಮಸೀದ್ ಅಹಲೇ ಸುನ್ನತುಲ್ ,ಎಲ್ಲಾ ಮುಸ್ಲಿಂ ಬಾಂಧವರು ಒಗ್ಗೂಡಿ ಬಾಗೇಪಲ್ಲಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಈದ್ ನಮಾಜ್ ಮತ್ತು ಖುತುಬಾ ಪಾರಾಯಣ ಮಾಡಿದರು .ನಂತರ ಜಾಮಿಯಾ ಮಸೀದ್ ಅಹಲೆ ಸುನ್ನತ್ ಉಲ್ ಜಮಾತ್ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಹಕೀಮ್ ರಜ್ವಿ ಭಾಷಣ ಮಾಡಿ ಮಾತನಾಡಿದ ಅವರು ಬಕ್ರೀದ್ ಅನ್ನು ಈದ್-ಅಲ್-ಅದಾ ಎ೦ದೂ ಕರೆಯುತ್ತಾರೆ. ಬಲಿದಾನ ಅಥವಾ …

Read More »

ಮಾಜಿ‌ ಸಿಎಂ ಸಿದ್ದರಾಮಯ್ಯ ಹುಟ್ಟು ಹಬ್ಬದ ನಿಮಿತ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಮಂಡ್ಯ : ಮಾಜಿ ಸಿಎಂ ಸಿದ್ಧರಾಮಯ್ಯ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕು ಕಾಂಗ್ರೆಸ್ ಸಮಿತಿಯ ವತಿಯಿಂದ ಸಾರ್ವಜನಿಕ ದುಂಡಶೆಟ್ಟ ಲಕ್ಷ್ಮಿ ಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಫಲು ವಿತರಣೆ ಮಾಡಲಾಯಿತು.ಮಾಜಿಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಮಾಜಿಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ …

Read More »

ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದೇಶ್ವರ ಸ್ವಾಮಿಜಿ

ಚಿಕ್ಕೋಡಿ: ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಪ್ರವಾಹ ಪೀಡಿತ ಗ್ರಾಮಗಳಿಗೆ ಶ್ರೀ ಸಿದ್ದೇಶ್ವರ ಸ್ವಾಮಿಜಿ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಿದರು. ವಿಜಯಪೂರದ ಜ್ಞಾನ ಯೋಗಾಶ್ರಮದ ಪ್ರಸಿದ್ಧ ಸ್ವಾಮಿಜಿಯಾದ ಸಿದ್ದೇಶ್ವರ ಸ್ವಾಮಿಜಿ ಅವರು ಕಾಗವಾಡ ತಾಲೂಕಿನ ಶಿರಗುಪ್ಪಿ , ಮಂಗಸುಳಿ, ಕವಲಗುಡ್ಡ ಸೇರಿದಂತೆ ಹಲವಾರು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು. ಸ್ವಾಮಿಜಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ‌,‌ ಕಾಗವಾಡ್ ಮಾಜಿ ಶಾಸಕ‌ ರಾಜು ಕಾಗೆ ಸಾಥ್ ನೀಡಿದರು. ಇದೇ ವೇಳೆ ಸಂತ್ರಸ್ತರು …

Read More »

ಸುಪ್ರೀಂ ಕೋರ್ಟ್ ನ ನ್ಯಾಯಧೀಶರಾದ ಬಿ.ಆರ್. ಗವಾಯಿ ಅವರನ್ನು ಆದರದಿಂದ ಸ್ವಾಗತಿಸಿದ ಮಂಡ್ಯ ಜಿಲ್ಲಾಡಳಿತ

ಮಂಡ್ಯ : ಸುಪ್ರೀಂ ಕೋರ್ಟ್ ನ ನ್ಯಾಯಧೀಶರಾದ ಬಿ.ಆರ್. ಗವಾಯಿ ಅವರು ಕಾರ್ಯ ನಿಮಿತ್ತವಾಗಿ ಕುಟುಂಬ ಸದಸ್ಯರು ಸಾಂಸ್ಕೃತಿಕ ನಗರ ಮೈಸೂರಿಗೆ ಆಗಮಿಸಿದ್ದರು ಇಂದು ಬೆಂಗಳೂರಿಗೆ ಹೊರಡುತ್ತಿದ್ದ ಅವರನ್ನು ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಬರಮಾಡಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಎಂ.ವಿ. ವೆಂಕಟೇಶ್ , ಪೋಲಿಸ್ ವರಿಷ್ಠಾಧಿಕಾರಿ ಪರಶುರಾಮು , ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ವಿಜಯಲಕ್ಷ್ಮಿ , ಮದ್ದೂರಿನ ಹಿರಿಯ ನ್ಯಾಯಾಧೀಶ …

Read More »

ನೆರೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಆರ್ಥಿಕ ನೆರವು: ಯಡಿಯೂರಪ್ಪ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶ ಗಳಿಗೆ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು .ಬಳಿಕ ಮಾತನಾಡಿದ ಅವರು, ನೆರೆ ಯಿಂದ ಹಾನಿಗೊಳಗಿರುವ ಸಂತ್ರಸ್ತರಿಗೆ ಸರಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.ತಾತ್ಕಾಲಿಕ ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರಸಂಪೂರ್ಣ ಹಾನಿ ಯಾದ ಮನೆಗೆ ಹೊಸಮನೆ ನಿರ್ಮಾಣ ಭರವಸೆ ನೀಡಿದರು.ನೆರೆ ಹಾವಳಿಯಿಂದ 321 ಮನೆ ಭಾಗಶಃ ಹಾನಿಗೊಳಗಾಗಿದ್ದು, 275 ಮನೆ …

Read More »

ಮಂಡ್ಯ ಜಿಲ್ಲೆಯ ದೊದ್ದನಕಟ್ಟೆ ಸೇತುವೆಯ ಬಳಿ ಅಪರಿಚಿತ ಪುರುಷನ ಶವ ಪತ್ತೆ

ಮಂಡ್ಯ: ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಡ್ಯ ಜಿಲ್ಲೆಯ ದೊದ್ದನಕಟ್ಟೆ ಸೇತುವೆಯ ಬಳಿ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.40-45 ವರ್ಷ ವಯಸ್ಸಿನ ಪುರುಷನ ಶವವನ್ನು ದೊದ್ದನಕಟ್ಟೆ ಬಳಿಯ ಸೇತುವೆಯ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ.ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಮೃತ ದೇಹವನ್ನು ತಂದು ಬಿಸಾಕಿ ಹೋಗಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ.ಮೃತ ವ್ಯಕ್ತಿಯ ಬಗ್ಗೆ ತಿಳಿದವರು ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಅಥವಾ ಗ್ರಾಮಾಂತರ ಪೋಲಿಸ್ …

Read More »

ನದಿ ಪಾತ್ರದಲ್ಲಿರುವ ಗ್ರಾಮಗಳ ಜನ,ಜಾನುವಾರು ರಕ್ಷಣೆ ಹಾಗೂ ನಿರ್ವಹಣೆಗೆ ನೋಡಲ್ ಅಧಿಕಾರಿಗಳ ನೇಮಕ : ಪರಿಹಾರ ಕೇಂದ್ರ ಸ್ಥಾಪನೆ

ಚಾಮರಾಜನಗರ: ಕಬಿನಿ ಜಲಾಶಯದಿಂದ ಹೆಚ್ಚಾಗಿ ನದಿಗೆ ನೀರು ಹೊರ ಬಿಡಲಾಗುತ್ತಿರುವ ಹಿನ್ನಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ನದಿ ಪಾತ್ರದ ಗ್ರಾಮಗಳ ಜನರು, ಜಾನುವಾರಗಳ ರಕ್ಷಣೆಗಾಗಿ ಮುಂಜಾಗರೂಕತೆ ಕ್ರಮ ವಹಿಸಲು ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಗ್ರಾಮವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.ಒಟ್ಟು ಎಂಟು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನದಿಗೆ ನೀರನ್ನು ಬಿಡುವ ಬಗ್ಗೆ ಮಾಹಿತಿ ಪಡೆದು ಪ್ರವಾಹದ ಎಚ್ಚರಿಕೆಯ …

Read More »

ಅರ್ಥಪೂರ್ಣ ಅಂತರಾಷ್ಟ್ರೀಯ ಆನೆಗಳ ದಿನಾಚರಣೆ ಆಚರಣೆ.

ಆನೇಕಲ್: ಇಂದು ಅಂತರಾಷ್ಟ್ರೀಯ ಆನೆಗಳ ದಿನದ ಅಂಗವಾಗಿ ಆನೆ ಮರಿಯೊಂದಕ್ಕೆ ನಾಮಕರಣ ಮಾಡಿ ಪ್ರತಿದಿನ ಆನೆಗಳನ್ನು ಸಾಕಿ ಸಲಹಿದಂತ ಮಾವುತರ ಮಕ್ಕಳ ಕೈನಲ್ಲಿ ಮಣ್ಣಿನಿಂದ ಎಲ್ಲಾ ರೀತಿಯ ಪ್ರಾಣಿಗಳನ್ನು ಮಾಡಿಸಿ ಸಾರ್ವಜನಿಕರ ಪ್ರದರ್ಶನಕ್ಕಿಡುವ ಮೂಲಕ ವಿನೂತನವಾಗಿ ಅಂತರಾಷ್ಟ್ರೀಯ ಆನೆಗಳ ದಿನಾಚರಣೆಯನ್ನು ಆಚರಿಸಿದ್ದಾರೆ,ಹೌದು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ಇಂದು ಅಂತರಾಷ್ಟ್ರೀಯ ಆನೆಗಳ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದು ಮಾವುತರ ಮಕ್ಕಳ ಕೈನಿಂದ ಬಿದಿರಿನ ವಸ್ತುಗಳನ್ನು ಹಾಗೆ ಮಣ್ಣಿನಿಂದ …

Read More »

ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ

ಮಂಡ್ಯ: ಜನನಾಯಕ.ದೀನ ದಲಿತರ ನಾಯಕˌಶೋಷಿತ ಸಮಾಜ ದಿಟ್ಟ ನಾಯಕˌಕರ್ನಾಟಕದ ಮಾಜಿ ಮುಖ್ಶಮಂತ್ರಿˌಕರ್ನಾಟಕದ ಸಮಸ್ತ ಬಡಜನರ ಅಚ್ಚುಮೆಚ್ಚಿನ ಜನ ಸೇವಕ ಬಡವರ ಪಾಲಿನ ಅನ್ನದಾನ ಪ್ರಭುವಾದ.ಕರ್ನಾಟಕ ಎರಡನೇ ದೇವರಾಜು ಅರಸು ಎಂಬ ಖ್ಶಾತರಾಗಿರುವ ಸನ್ಮಾನ್ಶ ಸಿದ್ಧರಾಮಯ್ಶನವರಿಗೆ ಹುಟ್ಟು ಹಬ್ಬದ ಶುಭಾಷಯಗಳು.ಬುದ್ದ .ಬಸವಣ್ಣ. ಅಂಬೇಡ್ಕರ. ಕನಕದಾಸ. ಕುವೇಂಪು.ಶಾಹು ಮಹರಾಜ್.ನಾಲ್ಟಡಿ ಕೃಷ್ಣರಾಜ ಒಡೆಯರ್.ನಾರಾಯಣ್ ಗುರು.ತಂದೆ ಪರಿಯಾರ್ ರಾಮಸ್ಟಾಮಿ.ದಾದಾ ಸಾಹೇಬ್ ಕಾನ್ಸಿರಾಂ ಇನ್ನು ಮುಂತಾದ ಬಹುಜನ ಸಮಾಜದ ಪೂರ್ವಿಕರ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು …

Read More »

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವಾಹನ ಸಂಚಾರ ಪ್ರಾರಂಭ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದ ಪರಿಣಾಮ ಕೃಷ್ಣಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ ನದಿಗಳ ಒಳಹರಿವಿನಲ್ಲಿ ಇಳಿತ ಕಂಡು ಬಂದಿದೆ. ಸತತ ಮಳೆಯಿಂದಾಗಿ ಕಳೆದ ಒಂದು ವಾರದಿಂದ ಬಂದ್ ಆಗಿದ್ದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಈಗ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಮತ್ತೆ ಸಂಚಾರ ಆರಂಭಗೊಂಡಿದೆ. ಬೆಳಗಾವಿ ಯಿಂದ ಕುಗನೊಳ್ಳಿ ವರೆಗೂ ರಾಷ್ಟ್ರೀಯ ಹೆದ್ದರಿ 4 ಸಂಚಾರಕ್ಕೆ ಮುಕ್ತವಾಗಿದೆ. ಸಂಕೇಶ್ವರ, ಯಮಗರ್ಣಿ, ಕಾಕತಿ ಬಳಿ ನೀರು ಬಂದು ಹೆದ್ದಾರಿ ಬಂದ್ …

Read More »