Breaking News

ಬಕ್ರೀದ್ ಶಾಂತಿ ಸಮಾನತೆ-ಸೌಹಾರ್ದತೆಯ ಸಂದೇಶ ಸಾರುವ ಹಬ್ಬ

ಚಿಂತಾಮಣಿ: ನಗರದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ 9 ಬೆಳಗ್ಗೆ ಗಂಟೆಗೆ ಜಾಮಿಯಾ ಮಸೀದ್ ಅಹಲೇ ಸುನ್ನತುಲ್ ,ಎಲ್ಲಾ ಮುಸ್ಲಿಂ ಬಾಂಧವರು ಒಗ್ಗೂಡಿ ಬಾಗೇಪಲ್ಲಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಈದ್ ನಮಾಜ್ ಮತ್ತು ಖುತುಬಾ ಪಾರಾಯಣ ಮಾಡಿದರು .ನಂತರ ಜಾಮಿಯಾ ಮಸೀದ್ ಅಹಲೆ ಸುನ್ನತ್ ಉಲ್ ಜಮಾತ್ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಹಕೀಮ್ ರಜ್ವಿ ಭಾಷಣ ಮಾಡಿ ಮಾತನಾಡಿದ ಅವರು ಬಕ್ರೀದ್ ಅನ್ನು ಈದ್-ಅಲ್-ಅದಾ ಎ೦ದೂ ಕರೆಯುತ್ತಾರೆ. ಬಲಿದಾನ ಅಥವಾ ತ್ಯಾಗದ ಈದ್ ಎ೦ದು ಕರೆಯಲಾಗುತ್ತೆ ಎಂದರು.ಈ ಹಬ್ಬವನ್ನು ಅತ್ಯ೦ತ ಸ೦ಭ್ರಮ ಹಾಗೂ ಸಡಗರದಿ೦ದ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಈದ್-ಅಲ್-ಅದಾ ಹಬ್ಬವನ್ನು ಮುಸ್ಲಿಂ ಬಾಂಧವರು ಝುಲ್-ಹಿಜ್ಜಾದ ಹತ್ತನೆಯ ದಿನದ೦ದು ಆಚರಿಸುತ್ತಾರೆ ಎಂದರು .ಈ ದಿನವನ್ನು ಪ್ರವಾದಿ ಇಸ್ಮಾಯೀಲರು ನೀಡಿದ ಬಲಿದಾನದ ರೂಪದಲ್ಲಿ ಆಚರಿಸಲಾಗುತ್ತದೆ. ತಮ್ಮ ಮಗನನ್ನೇ ದೇವರ ಇಚ್ಛೆಯಂತೆ ಬಲಿದಾನ ನೀಡಲು ಸಿದ್ಧವಾಗಿದ್ದ ಇಸ್ಮಾಯೀಲರ ಭಕ್ತಿಯನ್ನು ಮೆಚ್ಚಿ ಕುರಿಯ ಬಲಿಯನ್ನು ಪಡೆಯಲಾಗಿತ್ತು. ಈ ವಿಧಿಯನ್ನೇ ಕುರ್ಬಾನಿ ಎಂದು ಕರೆಯಲಾಗುತ್ತದೆ ಎಂದರು .ಹಬ್ಬದ ಪ್ರಯುಕ್ತ ಡಿವೈಎಸ್ಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪೊಲೀಸ್ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು,ಇನ್ನೂ ಜಮೀಯಾ ಮಸೀದಿ ಅದ್ಯಕ್ಷ ಮಾತನಾಡಿ ಪ್ರವಾಹ ಪೀಡಿಯ ಉತ್ತರ ಕರ್ನಾಟಕದ ಜನತೆ ಕ್ಷೇಮಾವಾಗಿರಲಿ ಎಂದು ಪ್ರಾರ್ಥನೆ ಮಾಡಿದ್ದೇವೆ , ಅವರಿಗೆ ಸಹಾಯಾಸ್ತವಾಗಿ ದೇಣಿಗೆಯನ್ನು ಸಹಾ ಸಂಗ್ರಹ ಮಾಡಿದ್ದೇವೆ ಎಂದರು ,

Share News

About admin

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *