Breaking News

ಕರ್ನಾಟಕ

ರಿಪೇರಿ ವೇಳೆ ಏಕಾಏಕಿ ಹೊತ್ತಿ ಉರಿದ ಮೊಬೈಲ್

ಕೋಲಾರ: ಮೊಬೈಲ್ ರಿಪೇರಿ ಮಾಡುವ ವೇಳೆ ಮೊಬೈಲ್ ಸ್ಫೋಟಗೊಂಡ ಘಟನೆ ಕೋಲಾರದ ಮಾಲೂರು ಪಟ್ಟಣದ ಸಾಯಿರಾಂ ಎಂಟರ್ ಪ್ರೈಸಸ್ ಶಾಪ್ ನಲ್ಲಿ ನಡೆದಿದೆ.ಮಾಲೂರು ಸುರೇಶ್ ಎಂಬುವರಿಗೆ ಸೇರಿದ ಮೊಬೈಲ್ ಶಾಪ್ ಇದಾಗಿದ್ದು, ಎಂ.ಐ ಕಂಪನಿಗೆ ಸೇರಿದ ಮೊಬೈಲ್ ನ್ನು ರಿಪೇರಿ ಮಾಡುವ ವೇಳೆ ಏಕಾಏಕಿ ಮೊಬೈಲ್ ಸ್ಪೋಟಗೊಂಡು ಬೆಂಕಿ ಹತ್ತಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ನಡೆದಿಲ್ಲ.

Read More »

ರಾಜ್ಯದಲ್ಲಿ ಬಿಜೆಪಿಯ ಆಡಳಿತದ ಬಗ್ಗೆ ವಿಶ್ವಾಸವಿದೆ: ಅನಿತಾ ಕುಮಾರಸ್ವಾಮಿ

ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಯಾರಿಗೂ ತೊಂದರೆ ಮಾಡಿಲ್ಲ. ಆದರೆ ಮೈತ್ರಿ ಸರ್ಕಾರದಿಂದ ಸಣ್ಣ ರಾಜಕೀಯ ಮಾಡಲಾಯಿತು. ಆದರೆ ಈಗ ಬಿಜೆಪಿಯವರು ಆ ರೀತಿಯ ಸಣ್ಣರಾಜಕೀಯ ಮಾಡುವುದಿಲ್ಲವೆಂಬ ವಿಶ್ವಾಸವಿದೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು. ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ದಿಗೆ ತೊಂದರೆಯಾಗುವ ವಿಚಾರದ ಕುರಿತು ಮಾತನಾಡಿ, ಕ್ಷೇತ್ರದ ಅಭಿವೃದ್ದಿಯನ್ನು ಮುಂದಿನ ದಿನಗಳಲ್ಲಿ ನೀವೆ ನೋಡಿ ಎಂದರು. ಅತೃಪ್ತರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ನಿಖಿಲ್ …

Read More »

ಗಂಡನಿಂದಲೇ ಪತ್ನಿಯ ಭೀಕರ ಕೊಲೆ

ಆನೇಕಲ್ : ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ಕಲಹ ಏರ್ಪಟ್ಟು, ಹೆಂಡತಿಯ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದೆ.‌ಶಿಕಾರಿಪಾಳ್ಯ ದ ಮಲ್ಲಣ್ಣ ಎಂಬುವರ ಬಾಡಿಗೆ ಮನೆಯಲ್ಲಿ ಮೂರು ವರ್ಷಗಳಿಂದ ವಾಸವಾಗಿದ್ದವೆಸ್ಟ್ ಬೆಂಗಲ್ ಮೂಲದ ಶೇಕ್ ಮತ್ತು ಮೀನಾ ಕಥನ್ ದಂಪತಿಗಳ ನಡುವೆ ಅಡುಗೆ ವಿಚಾರಕ್ಕೆ ಗಲಾಟೆ‌ ನಡೆದು ,ಕೊಲೆ ನಡೆದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿಕಾರಿಪಾಳ್ಯ ದಲ್ಲಿ ನಡೆದಿದೆ. ‌ಮೀನಾ ಕಥನ್ ಕೊಲೆಯಾದ ದುರ್ದೈವಿ.ಕೊಲೆ ಅರೋಪಿ ಶೇಕ್ …

Read More »

ರಾಶಿ ಭವಿಷ್ಯ

ಮೇಷ: ನಿಮ್ಮ ಜೀವನದ ಸರಿಯಾದ ಸಮಯ ನಿಮಗೆ ದೊರೆಯಲಿದೆ; ಅದೂ ನೀವು ಸರಿಯಾದ ಯೋಜನೆಗಳನ್ನು ಮಾಡಿದರೆ ಮಾತ್ರ. ಕೆಲಸದಲ್ಲಿ ಸಾಮಾನ್ಯವಾದ ಏರಿಳಿತಗಳಿರುತ್ತವೆ. ಆದರೆ, ಸಂಜೆಯನ್ನು ಚೆನ್ನಾಗಿ ಯೋಜಿಸಿ, ಮತ್ತು ನೀವು ನಿಮ್ಮನ್ನೇ ಆಶ್ಚರ್ಯಗೊಳಿಸಿಕೊಳ್ಳುತ್ತೀರಿ.ವೃಷಭ: ಇಂದು ಖಂಡಿತಾ ಅದು ಸಾಧ್ಯವಿದೆ, ನೀವು ಹೊಸ ಜಂಟಿ ಸಹಯೋಗಗಳ ಕುರಿತು ನಿರ್ಣಾಯಕ ಮತ್ತು ಬದ್ಧರಾಗಿರುತ್ತೀರಿ. ಮಧ್ಯಾಹ್ನದಲ್ಲಿ ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗಿಂತ ಕುಸಿಯಬಹುದು. ನಿಮ್ಮ ಪ್ರಿಯತಮೆಯೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಮೂಲಕ ಒತ್ತಡವನ್ನು ಹೊಡೆದೂಡಿ.ಮಿಥುನ: ನಿಮ್ಮ …

Read More »

ಅದ್ದೂರಿಯಾಗಿ ಜರುಗಿದ ಸಪ್ತಮಾತ್ರಿಕಾ ಹೋಮ, ದಯಾನಂದಪುರಿ ಮಹಾಸ್ವಾಮೀಜಿಗಳ ಬೆಳ್ಳಿ ಪಲ್ಲಕ್ಕಿ ಉತ್ಸವ

ಮಂಡ್ಯ: ಜಿಲ್ಲೆಯ ಕೊರಟಿಕೆರೆ ಗ್ರಾಮದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ 4ನೇ ವರ್ಷದ ಭೀಮನ ಅಮವಾಸ್ಯೆ ಕಾರ್ಯಕ್ರಮದ ಅಂಗವಾಗಿ ಸಪ್ತಮಾತ್ರಿಕಾ ಹೋಮ, ದೇವಾಂಗ ಜಗದ್ಗುರುಗಳಾದ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಗಳಿಗೆ ಗುರುವಂದನೆ, ಶ್ರೀಗಳ ಬೆಳ್ಳಿಪಲ್ಲಕಿ ಉತ್ಸವ, ಭಕ್ತಿ ಸುಧೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.ಕೊರಟಿಕೆರೆ ಗ್ರಾಮಕ್ಕೆ ಆಗಮಿಸಿದ ಶ್ರೀಗಳ ಮೇಲೆ ಪುಷ್ಪವೃಷ್ಠಿ ಮಾಡಿ, ಕ್ರೇನ್ ಮೂಲಕ ಭಾರೀ ಗಾತ್ರದ ಗುಲಾಬಿ ಹೂವಿನ ಹಾರವನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ …

Read More »

ದುರಂತ ಅಂತ್ಯ ಕಂಡ ಕಾಫಿ ಉದ್ಯಮಿ ಸಿದ್ದಾರ್ಥ ದೇಶದ ದುರಂತ ವ್ಯವಸ್ಥೆಯ ಬಗ್ಗೆ ಚಿತ್ರಣ ನೀಡಿದ ಸಿದ್ದಾರ್ಥ ಬರೆದ ಪತ್ರ

ಒಂದು ಕಾಫಿಯಿಂದ ಏನು ಬೇಕಾದ್ರೂ ಆಗಬಹುದು.ಒಂದು ವ್ಯವಸ್ಥೆಯ ಸಣ್ಣ ಬಿರುಕು ಏನು ಬೇಕಾದರೂ ಮಾಡಬಹುದು. ನಾನು ಯಾವತ್ತೂ ಈ ವ್ಯಕ್ತಿ ಬಗ್ಗೆ ತಿಳಿದುಕೊಂಡವನಲ್ಲ.ಯಾವತ್ತೂ ಭೇಟಿ ಆದವನಲ್ಲ. ಮಾತಾಡಿದವನೂ ಅಲ್ಲ.ನೆಂಟರಲ್ಲ. ಬಂಧುವೂ ಅಲ್ಲ. ಸ್ನೇಹಿತರೂ ಅಲ್ಲ. ಆದರೂ ನನ್ನನ್ನು ಇವರ ವಿಷಯ ಕಾಡಿತ್ತು. ಇವತ್ತು ಯಾವುದೋ ವಾಟ್ಸಫ್ ನಲ್ಲಿ ಸಿದ್ಧಾರ್ಥ ಎಂಬ ಉದ್ಯಮಿ, ಮಾಜಿ ಮುಖ್ಯಮಂತ್ರಿಗಳ ಅಳಿಯನ ನಿಗೂಢ ಕಣ್ಮರೆ ಮತ್ತು ಅವರು ಬರೆದಿದ್ದಾರೆನ್ನಲಾದ ಪತ್ರ ದ ಸಾರಾಂಶ ಬಂದಿತ್ತು. ದೊಡ್ಡ …

Read More »

ಟಿಪ್ಪು ಜಯಂತಿ ರದ್ದುಗೊಳಿಸಿದ ಬಿಜೆಪಿ ವಿರುದ್ಧವಾಗಿ ಪ್ರತಿಭಟನೆ

ಕೋಲಾರ : ಟಿಪ್ಪು ಜಯಂತಿ ರದ್ದು ಮಾಡಿದ ಬಿಜೆಪಿ ಸರ್ಕಾರದ ವಿರುದ್ದ ಟಿಪ್ಪು ಸೆಕ್ಯೂಲರ್ ಸೇನೆ, ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ‌ ಟಿಪ್ಪು ಜಯಂತಿಯನ್ನು ರದ್ದು ಮಾಡಿರುವ ಆದೇಶವನ್ನು ವಾಪಸ್ ಪಡೆಯಲು ಆಗ್ರಹಿಸಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ‌ -ಸಿಎಂ ಯಡಿಯೂರಪ್ಪ ಧರ್ಮಗಳನ್ನ ಹೊಡೆಯುವ ಕೆಲಸಕ್ಕೆ ಕೈ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ‌ಅಲ್ಲದೆ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿ …

Read More »

5 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಮಂಡ್ಯ: ಜಿಲ್ಲೆಯ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ವರ್ಣರಂಜಿತವಾಗಿ ನಡೆಯಿತು. ಸಮ್ಮೇಳನಾಧ್ಯಕ್ಷರಾದ ಸಾಹಿತಿ, ಜ್ಞಾನಬುತ್ತಿ ಸಂಸ್ಥೆಯ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರನ್ನು ಬೆಳ್ಳಿ ಸಾರೋಟಿನಲ್ಲಿ ಜನಪದ‌ ಕಲಾತಂಡಗಳ ವರ್ಣರಂಜಿತ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು. ಸಾಹಿತ್ಯ ಸಮ್ಮೇಳನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ಗ್ರಾಮೀಣ ಜನರ ಬದುಕು ಸೇರಿದಂತೆ ಕೃಷಿ ಸಮಸ್ಯೆಗಳನ್ನು ಅನಾವರಣಗೊಳಿಸಿ ಅನ್ನದಾತನಾದ ರೈತನು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಬೇಕು. ಕನ್ನಡದ …

Read More »

ಸಂಭ್ರಮ ಸಡಗರದಿಂದ ಜರುಗಿದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯ ದಸರಾ ದರ್ಭಾರ್ ಮೆರವಣಿಗೆ

ಮಂಡ್ಯ: ಜಿಲ್ಲೆಯ ಕೊರಟಿಕೆರೆ ಗ್ರಾಮದಲ್ಲಿ 4ನೇ ವರ್ಷದ ಭೀಮನ ಅಮಾವಾಸ್ಯೆಯ ಅಂಗವಾಗಿ ತಾಯಿ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಯ ದಸರಾ ದರ್ಭಾರ್ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ‌ಮಂಡ್ಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೊರಟಿಕೆರೆ ಗ್ರಾಮದಲ್ಲಿ 4ನೇ ವರ್ಷದ ಭೀಮನ ಅಮಾವಾಸ್ಯೆಯ ಅಂಗವಾಗಿ ಸಪ್ತಮಾತ್ರಿಕಾ ಹೋಮ, ತಾಯಿ ರಾಮಲಿಂಗ ಚೌಡೇಶ್ವರಿ ಅಮ್ಮನವರ ಆನೆಯ ಅಂಬಾರಿಯ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.. ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದಿಂದ ಆಗಮಿಸಿದ್ದ ಆನೆಯು ತಾಯಿಯ ಉತ್ಸವ …

Read More »

ಮಹಾರಾಷ್ಟದಲ್ಲಿ ಮುಂದುವೆರೆದ ಮಳೆಯ ಅಬ್ಬರ

ಚಿಕ್ಕೋಡಿ:ಕಳೆದ ಕೆಲ ದಿನಗಳಿಂದ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬರಿತ್ತಿದ್ದು, ನೀರಿನ ಮಟ್ಟದಲ್ಲಿ ಇಂದು ಮತ್ತೆ ಏರಿಕೆ ಉಂಟಾಗಿದೆ. ‌ರಾಯಬಾಗ ತಾಲೂಕಿನ ಕುಡಚಿ – ಉಗಾರ ಸೇತುವೆ ಹಾಗೂ ಜಮಖಂಡಿ- ಮಿರಜ ರಾಜ್ಯ ಹೆದ್ದಾರಿ ಮೇಲಿನ ಸೇತುವೆಗಳು ಮುಳುಗಡೆಯಾಗಿದ್ದು,ಚಿಕ್ಕೋಡಿ ತಾಲೂಕಿನ ಆರು ಸೇತುವೆ ಜಲಾವೃತ ಸ್ಥಿಥಿ ಮುಂದುವರಿಕೆಯಾಗಿದೆ.ಅಲ್ಲದೇ ಕುಡಚಿ – ಉಗಾರ, ಕಲ್ಲೋಳ- ಯಡೂರ,ಮಲಿಕವಾಡ- ದತ್ತವಾಡ,ಸೇರಿದಂತೆ 7 ಸೇತುವೆಗಳು ಮುಳುಗಡೆಯಾಗಿವೆ.ದೂದಗಂಗಾ, ವೇದಗಂಗಾ, ಕೃಷ್ಣಾ , ನದಿಗೆ ಅಡ್ಡಲಾಗಿ …

Read More »