Breaking News

ಕರ್ನಾಟಕ

ಚಿರತೆ ದಾಳಿ: ಮೂವರು ಗ್ರಾಮಸ್ಥರು ಅಸ್ವಸ್ಥ.

ದಾವಣಗೆರೆ; ಆಹಾರಕ್ಕಾಗಿ ಗ್ರಾಮದೊಳಗೆ ನುಗ್ಗಿದ ಚಿರತೆಯೊಂದು ಜನರ ಮೇಲೆ ದಾಳಿ ನಡೆಸಿದ್ದು ಮೂವರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆ ಸಿರಿಗೆರೆ ಗ್ರಾಮದಲ್ಲಿ ನಡೆದಿದೆ.ಆಹಾರಕ್ಕಾಗಿ ಗ್ರಾಮದೊಳಗೆ ಚಿರತೆ ನುಗ್ಗಿದ್ದು, ಮನೆಯೊಂದರಲ್ಲಿ ಅವಿತು ಕುಳಿತಿದೆ. ಈ ವೇಳೆ ಮನೆಯಿಂದ ತಪ್ಪಿಸಿಕೊಂಡು ಹೋಗುವಾಗ ಮೂವರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿಮೂವರು ಗಾಯಗೊಂಡಿದ್ದು ಗಾಯಗೊಂಡವರನ್ನು ಹರಿಹರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇದೀಗ ಚಿರತೆ ಪೊದೆಯೊಳಗೆ ಅವಿತು ಕುಳಿತಿದೆ ಎ‌ನ್ನಲಾಗುತ್ತಿದೆ. ಸ್ಥಳಕ್ಕೆ ಹರಿಹರ …

Read More »

ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸವಲ್ಲಿ ಬದ್ದತೆ ತೋರಲು ಅಧಿಕಾರಿಗಳಿಗೆ ಸೂಚನೆ.‌

ಮಂಡ್ಯ: ಸರ್ಕಾರದ ಯೋಜನೆಗಳ ಫಲವನ್ನು ಅರ್ಹ ಫಲಾನುಭವಿಗಳಿಗೆ ಹಾಗೂ ರೈತರಿಗೆ ತಲುಪಿಸುವ ಕೆಲಸವನ್ನು ಕೃಷಿ, ತೋಟಗಾರಿಕೆ, ಎಪಿಎಂಸಿ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಸಮಾಜದ ಅಧ್ಯಕ್ಷ ಜಾನಕೀರಾಂ ಸೂಚನೆ ನೀಡಿದರು.ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆಯಲ್ಲಿ ಇಂದು‌ ನಡೆದ ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಬೆಳೆ ವಿಮೆ ಸೇರಿದಂತೆ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ಸೌಲಭ್ಯಗಳನ್ನು ರೈತರು …

Read More »

ಕುತೂಹಲ ಮೂಡಿಸಿರುವ ಎಂ.ಬಿ. ಪಾಟೀಲ ಗೌಪ್ಯಸಭೆ.

ಬೆಳಗಾವಿ: ಮೈತ್ರಿ ಸರ್ಕಾರದ ಇಬ್ಬರು ಶಾಸಕರು ರಾಜಿನಾಮೇ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಗೆ ಆಗಮಿಸಿದ ಗೃಹ ಸಚಿವ ಡಾ.ಎಂ.ಬಿ.ಪಾಟೀಲ ಅವರು ಜಿಲ್ಲೆಯ ಕಾಂಗ್ರೇಸ್‍ನ ಎಲ್ಲ ಶಾಸಕರು ಮತ್ತು ನಾಯಕರೊಂದಿಗೆ ಗೌಪ್ಯ ಸಭೆ ನಡೆಸಿದರು.ಆದರೆ ಸಭೆಯ ಬಳಿಕ ಹೊರ ಬಂದ ನಾಯಕರ ಮುಖವೂ ಸಹ ಗಂಭೀರತೆಯಿಂದ ಕೂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಬೆಳಗಾವಿಗೆ ಆಗಮಿಸಿದ ಗೃಹ ಸಚಿವ ಡಾ.ಎಂ.ಬಿ.ಪಾಟೀಲ ಅವರು ನಗರದ ಸಕ್ರ್ಯೂಟ್‍ಹೌಸ್‍ನಲ್ಲಿ ಜಿಲ್ಲೆಯ ಕಾಂಗ್ರೇಸ್‍ನ ಎಲ್ಲ ಶಾಸಕರು ಮತ್ತು ನಾಯಕರೊಂದಿಗೆ ಗೌಪ್ಯ …

Read More »

ಸಚಿವ ಸ್ಥಾನ ತ್ಯಾಗದ ಸುಳಿವು ನೀಡಿದ ಪಾಟೀಲ.

ಚಿತ್ರದುರ್ಗ: ರಮೇಶ ಜಾರಕಿಹೊಳಿ‌ ಅವರ ರಾಜೀನಾಮೆ ವಿಚಾರವಾಗಿ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ . ರಾಜೀನಾಮೆ ಕುರಿತು ನಾನೇನು ಮಾತನಾಡುವದಿಲ್ಲ.‌ ಈ ಕುರಿತು ರಮೇಶ ಅವರನ್ನೇ ಕೇಳಿದರೆ ಗೊತ್ತಾಗುತ್ತದೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಗಣಿ ಮತ್ತು ಭೂ ವಿಜ್ಞಾನ ಮಂತ್ರಿ ರಾಜಶೇಖರ್ ಪಾಟೀಲ ಹೇಳಿದರು. ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಆನಂದ ಸಂಪೂರ್ಣ ಸಿಂಗ್ ಅವರೂ ರಾಜೀನಾಮೆ ನೀಡಿದ್ದಾರೆ ಎಂದು ಕೇಳಿಬರುತ್ತಿದೆ. ಆನಂದ್ ಸಿಂಗ್ …

Read More »

ಇಬ್ಬರ ಪ್ರಾಣ ತೆಗೆದುಕೊಂಡ ಬುಲೆರೋ, ಲಾರಿ ಅಪಘಾತ

ಮಂಗಳೂರು: ಮಹೀಂದ್ರಾ ಬೊಲೆರೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಸಂಭವಿಸಿದೆ.ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಬೊಲೆರೋ ನಡುವೆ ನೆಲ್ಯಾಡಿಯ ಬೆಥನಿ ವಿದ್ಯಾಸಂಸ್ಥೆಯ ಬಳಿ ಹಳ್ಳ ಸೇತುವೆ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಬೊಲೆರೋದಲ್ಲಿದ್ದ ಸತ್ತಾರ್ ಮೊರಂಕಾಲ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಸಾಂಮ್ಸನ್ ಹಾಗೂ ಸೈರಸ್ …

Read More »

ಗಂಡನಿಂದ ದೂರಾಗಿ ತಮ್ಮನ ಮನೆಗೆ ಹೋಗಿ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ನೋವೇನಿತ್ತು?

ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಲ್ಲಸಂದ್ರದಲ್ಲಿ ಸೋಮವಾರ ಸಂಜೆ ನಡೆದಿದೆ.ಗೀತಾ(30) ಮೃತಪಟ್ಟ ಮಹಿಳೆ. ವೃತ್ತಿಯಲ್ಲಿ ಬಿಎಂಟಿಸಿ ಡ್ರೈವರ್ ಆಗಿರುವ ಭೀಮಣ್ಣ 14 ವರ್ಷಗಳ ಹಿಂದೆ ಗೀತಾಳನ್ನು ವರಿಸಿದ್ದ. ಮೂಲತಃ ಬೀದರ್​ನವರಾಗಿದ್ದ ದಂಪತಿ, 5 ವರ್ಷಗಳ ಹಿಂದೆ ನಗರದ ನಲ್ಲಸಂದ್ರದಲ್ಲಿ ವಾಸವಿದ್ದರು.ಕಳೆದ ಮೂರು ದಿನಗಳ ಹಿಂದೆ ಪತಿ ಭೀಮಣ್ಣ, ಗೀತಾಳಿಗೆ ಹಲ್ಲೆ ಮಾಡಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗೀತಾ ಗಂಡನ …

Read More »

ಜಿಲ್ಲಾ ‌ಆರೋಗ್ಯ ಅಧಿಕಾರಿ ರವಿಶಂಕರ್ ಅಮಾನತ್ತು.

ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಅಮಾನತು ಮಾಡಿದ್ದಾರೆ.ರವಿಶಂಕರ್ ಆಡಳಿತ ವೈಖರಿ ಖಂಡಿಸಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಹರೀಶ್‌ ಅವರು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಆಯುಕ್ತರಿಗೆ ಮತ್ತು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತ್ಯನಾರಾಯಣರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ರೆಡ್ಡಪ್ಪ ಅವರು ಜಿಲ್ಲಾಧಿಕಾರಿ …

Read More »

ಬಸ್ ಕಂಡಕ್ಟರ್ ಮೇಲೆ‌ ಹಲ್ಲೆ ನಡೆಸಿ ಸಾವಿರಾರು ರೂಪಾಯಿ ದೋಚಿದ ದರೋಡೆಕೋರರು.

ಉಡುಪಿ : ಉಡುಪಿಯಿಂದ ಶಿವಮೊಗ್ಗ ಕ್ಕೆ ತೆರಳುತ್ತಿದ್ದ ಬಸ್ಸೊಂದನ್ನ ಗುಂಪೊಂದು ಅಡ್ಡಗಟ್ಟಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಕಂಡಕ್ಟರ್ ಬಳಿಯಿದ್ದ ಸಾವಿರಾರು ರೂಪಾಯಿ ಹಣವನ್ನು ದೋಚಿದ ಘಟನೆ ಅಂಗುಂಬೆ -ತೀರ್ಥಹಳ್ಳಿ ಬಳಿಯ ಮಂಡಗದ್ದೆ ಬಳಿ ನಡೆದಿದೆ.ನಿಶಾನ್ ಟ್ರಾವೆಲ್ಸ್ ಎನ್ನುವ ಬಸ್ಸು ಮಧ್ಯಾಹ್ನ ೩.೧೫ ಕ್ಕೆ ಉಡುಪಿಯಿಂದ ಹೊರಟ್ಟಿತ್ತು.ಹೆಬ್ರಿ ಸೀತಾನದಿ ಬಳಿ ಕಾರೊಂದರಲ್ಲಿ ಬಂದಿದ್ದ ಗುಂಪು ಸ್ಥಳೀಯರಿಗೆ ಹಲ್ಲೆ ನಡೆಸುತ್ತಿದ್ದ ನ್ನು‌ ಕಂಡು ಚಾಲಕ ಬಸ್ಸು ನಿಲ್ಲಿಸಿದ್ದಾನೆ.ಈ ಸಂಧರ್ಭದಲ್ಲಿ ಕಂಡಕ್ಟರ್ ಗಣೇಶ್ …

Read More »

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ.

ಆನೇಕಲ್: ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಕೊಳೆತ ಶವವು ಬೆಂಗಳೂರು ಹೊರವಲಯ ಆನೇಕಲ್ನ ನಾರಾಯಣಪುರದ ಮನೆಯೊಂದರಲ್ಲಿ ಪತ್ತೆಯಾಗಿದೆ. ಚೌಡಪ್ಪ (45) ಮೃತ ದುರ್ದೈವಿ. ಮೃತ ಚೌಡಪ್ಪ ನಾರಾಯಣ ಪುರದ ಮನೆಯಲ್ಲಿ ಒಬ್ಬನೇ ಇರುತ್ತಿದ್ದ.‌ ಒಂದು ವರ್ಷದ ಹಿಂದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ. ಹಾಗೂ ಇದ್ದ ಒಬ್ಬ ಮಗನು ಸಹ ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದ.‌ ವ್ಯಕ್ತಿ‌ ಒಮ್ಮಿಂದೊಮ್ಮೆಲೆ ಶವವಾಗಿ ಪತ್ತೆಯಾಗಿರುವದು ಅನುಮಾನಕ್ಕೆ ಎಡೆ ಮಾಡಿದೆ. ಕಳೆದ ಎರಡು ದಿನಗಳಿಂದ …

Read More »

ಮೊಬೈಲ್ ಟವರ್ ಮೇಲಿನಿಂದ ಹಾರಿ ಯುವಕ ಆತ್ಮಹತ್ಯೆ.‌

ಮಂಡ್ಯ: ಮಂಡ್ಯ ಪಟ್ಟಣದ ಸಿಂದಘಟ್ಟ ಗ್ರಾಮದಲ್ಲಿ ಮೊಬೈಲ್ ಟವರ್ ಮೇಲಿನಿಂದ ಕೆಳಕ್ಕೆ ಹಾರಿ ಪುಟ್ಟಯ್ಯ ಅವರ ಪುತ್ರ ವಿಜಯಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಿಂದಘಟ್ಟ ಗ್ರಾಮದ ಗ್ರಾಮಪಂಚಾಯಿತಿ ಮಾಜಿಸದಸ್ಯೆ ಗೌರಮ್ಮ ಅವರ ಪುತ್ರನಾದ ವಿಜಯಕುಮಾರ್(29) ಇಂದು ಮುಂಜಾನೆ ಮೊಬೈಲ್ ಟವರ್ ಹತ್ತಿ ಕೆಳಕ್ಕೆ ಹಾರಿದಾಗ ಕೈಕಾಲುಗಳು ಮುರಿದಿದ್ದವು..ಕೂಡಲೇ ರಕ್ತಸ್ರಾವ ದಿಂದ ಬಳಲುತ್ತಿದ್ದ ಈತನನ್ನು ಗ್ರಾಮದ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಸಾವಿಗೆ ಶರಣಾಗಿದ್ದನುಎಂದು ಗ್ರಾಮದ ಮುಖಂಡ ಎಪಿಎಂಸಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ. ವಿಜಯಕುಮಾರ್ ಆತ್ಮಹತ್ಯೆಗೆ …

Read More »