Breaking News

ಸಚಿವ ಸ್ಥಾನ ತ್ಯಾಗದ ಸುಳಿವು ನೀಡಿದ ಪಾಟೀಲ.

ಚಿತ್ರದುರ್ಗ: ರಮೇಶ ಜಾರಕಿಹೊಳಿ‌ ಅವರ ರಾಜೀನಾಮೆ ವಿಚಾರವಾಗಿ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ . ರಾಜೀನಾಮೆ ಕುರಿತು ನಾನೇನು ಮಾತನಾಡುವದಿಲ್ಲ.‌ ಈ ಕುರಿತು ರಮೇಶ ಅವರನ್ನೇ ಕೇಳಿದರೆ ಗೊತ್ತಾಗುತ್ತದೆ.
ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಗಣಿ ಮತ್ತು ಭೂ ವಿಜ್ಞಾನ ಮಂತ್ರಿ ರಾಜಶೇಖರ್ ಪಾಟೀಲ ಹೇಳಿದರು.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಆನಂದ ಸಂಪೂರ್ಣ ಸಿಂಗ್ ಅವರೂ ರಾಜೀನಾಮೆ ನೀಡಿದ್ದಾರೆ ಎಂದು ಕೇಳಿಬರುತ್ತಿದೆ.
ಆನಂದ್ ಸಿಂಗ್ ರಾಜೀನಾಮೆ ಹೇಳಿದ್ದಾರೆ. ಕಾಂಗ್ರೇಸ್ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ದ ಎಂದು ಪಾಟೀಲ ಒಪ್ಪಿಕೊಂಡರು.‌ಹೊಸಪೇಟೆ ಜಿಲ್ಲೆ ಮಾಡಬೇಕು. ಜೊತೆಗೆ ಜಿಂದಾಲ್ ಭೂ ಪರಭಾರೆ ಆಗಬಾರದು ಅಂತ ಎರಡು ಕಂಡಿಷನ್ ಹಾಕಿದ್ದಾರೆ ಅಂತ ಕೇಳಿದ್ದೇನೆ ಎಂದರು. ‌
ಮೈತ್ರಿ ಸರ್ಕಾರದ ಪತನದ ವಿಚಾರವಾಗಿ ಮಾತನಾಡಿ, ದಸರಾ, ದೀಪಾವಳಿ, ಹುಣ್ಣಿಮೆ, ಅಮಾವಾಸ್ಯೆ ಬರುತ್ತೆ ಹೋಗುತ್ತೆ.‌ಸರ್ಕಾರ ಹೋಗುತ್ತೆ ಅಂತ ಹೇಳುವದನ್ನು ಬಹಳ ದಿನಗಳಿಂದ ನೋಡಿದ್ದೇವೆ. ಏನಾಗುತ್ತೆ ಅಂತ ಕಾದುನೋಡೋಣ ಎಂದು ತಿಳಿಸಿದರು. .

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *