Breaking News

ಮೊಬೈಲ್ ಟವರ್ ಮೇಲಿನಿಂದ ಹಾರಿ ಯುವಕ ಆತ್ಮಹತ್ಯೆ.‌

ಮಂಡ್ಯ: ಮಂಡ್ಯ ಪಟ್ಟಣದ ಸಿಂದಘಟ್ಟ ಗ್ರಾಮದಲ್ಲಿ ಮೊಬೈಲ್ ಟವರ್ ಮೇಲಿನಿಂದ ಕೆಳಕ್ಕೆ ಹಾರಿ ಪುಟ್ಟಯ್ಯ ಅವರ ಪುತ್ರ ವಿಜಯಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸಿಂದಘಟ್ಟ ಗ್ರಾಮದ ಗ್ರಾಮಪಂಚಾಯಿತಿ ಮಾಜಿಸದಸ್ಯೆ ಗೌರಮ್ಮ ಅವರ ಪುತ್ರನಾದ ವಿಜಯಕುಮಾರ್(29) ಇಂದು ಮುಂಜಾನೆ ಮೊಬೈಲ್ ಟವರ್ ಹತ್ತಿ ಕೆಳಕ್ಕೆ ಹಾರಿದಾಗ ಕೈಕಾಲುಗಳು ಮುರಿದಿದ್ದವು..ಕೂಡಲೇ ರಕ್ತಸ್ರಾವ ದಿಂದ ಬಳಲುತ್ತಿದ್ದ ಈತನನ್ನು ಗ್ರಾಮದ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಸಾವಿಗೆ ಶರಣಾಗಿದ್ದನುಎಂದು ಗ್ರಾಮದ ಮುಖಂಡ ಎಪಿಎಂಸಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ. ವಿಜಯಕುಮಾರ್ ಆತ್ಮಹತ್ಯೆಗೆ ಶರಣಾದ ಮೊಬೈಲ್ ಟವರ್ ಬಳಿ ಜನಜಾತ್ರೆಯೇ ನೆರೆದಿದೆ. ಕುಟುಂಬದ ಸದಸ್ಯರ ಆಕ್ರಂದನವು ಮುಗಿಲು ಮುಟ್ಟಿದೆ.ಸಿಂದಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ಚಿದಂಬರ್ ಯುವಕ ವಿಜಯಕುಮಾರ್ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *