ಗೋಕಾಕ : ಇಡೀ ಜಾರಕಿಹೊಳಿ ಕುಟುಂಬ ಕೂಡಿ ಸರ್ಕಾರ ಉರುಳಿಸಿದ್ದಾರೆ ಎಂದು ಭಾಷಣಕಾರರು ಹೇಳಿದ್ದಾರೆ. ಜಾರಕಿಹೊಳಿ ಕುಟುಂಬ ಕೂಡಿ ಯಾವುದೇ ರೀತಿ ಸರ್ಕಾರ ಉರುಳಿಸಿಲ್ಲ. ಇದರಲ್ಲಿ ನನಗೂ, ಬಾಲಚಂದ್ರ ಹಾಗೂ ಲಖನ್‌ಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು
ನಗರದ ಹಿಲ್‌ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದ ಅವರು, ಸರ್ಕಾರ ಬೀಳಿಸುವಲ್ಲಿ ಯಾರ ಪಾತ್ರವಿದೆಯೋ ಅವರಿಗೆ ಮಾತ್ರ ಆ ಮಾತು ಹೋಗಲಿ. ಅದನ್ನು ಬಿಟ್ಟು ಸರ್ಕಾರ ಬೀಳಿಸುವುದರಲ್ಲಿ ಇಡೀ ಜಾರಕಿಹೊಳಿ ಕುಟುಂಬವಿದೆ ಎಂದು ಹೇಳುವುದು ಸರಿಯಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ಇಂಥ ಮಾತುಗಳಾಡುವ ಮೊದಲು ಸರಿಯಾಗಿ ಮಾತನಾಡಬೇಕು. ರಾಜ್ಯ ರಾಜಕಾರಣದಲ್ಲಿ ನಾಲ್ವರೂ ಸಹೋದರರು ರಾಜಕೀಯದಲ್ಲಿ ಇದ್ದೇವೆ. ನಾಲ್ವರೂ ಒಂದೇ ಎಂದು ಭಾವಿಸಬೇಡಿ. ನಾಲ್ವರ ಕೆಲಸವೂ ಬೇರೆ ಬೇರೆ ಇದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

