admin
September 12, 2019
ಕರ್ನಾಟಕ, ಸುದ್ದಿ
ಚಳ್ಳಕೆರೆ : ಕ್ರೂಷರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ. ತಾಲ್ಲೂಕಿನ ಲಕ್ಷ್ಮಿಪುರದ ಅಜಿತ್ (23) ಸ್ಥಳದಲ್ಲೆ ಮೃತ ಪಟ್ಟ ಯುವಕ.ಲಕ್ಷ್ಮಿ ಪುರದಿಂದ ಗೊಪನಹಳ್ಳಿ ಕಡೆ ಹೋಗುತ್ತಿದ್ದಾಗ ಹಿರಿಯೂರು ಕಡೆಯಿಂದ ಬಂದ ಕ್ರೂಷರ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಕ್ರೂಷರ್ ನಲ್ಲಿ ಇದ್ದವರು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಪಿಎಸ್ಐ ಕೆ ಸತೀಸ್ ನಾಯ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕೇಸ್ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ:ಆಧಾರ ಕಾರ್ಡ್ ಮಾಡಸಿಕೊಳ್ಳಲು ಮಧ್ಯರಾತ್ರಿಯೇ ನಾಗರೀಕರು ಮಕ್ಕಳು ಮರಿಗಳೊಂದಿಗೆ ಆಗಮಿಸಿ ಜಾಗರಣೆ ನಡೆಸಿ ರಾತ್ರಿಯಿಡೀ ಬ್ಯಾಂಕ್ ಬಳಿ ಕಾದು ಆಧಾರ ಮಾಡಿಸಲು ಟೋಕನ್ ಪಡೆಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.ಒಂದು ದಿನಕ್ಕೆ ಕೇವಲ 20 ಜನರಿಗೆ ಮಾತ್ರ ಆಧಾರ್ ಕಾರ್ಡ್ ಮಾಡುತ್ತಿರುವುದರಿಂದ ನೂರಾರು ಜನರು ಆಧಾರ್ ಕಾರ್ಡಿಗೆ ಪರದಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.ಮಂಡ್ಯ ಕೆ.ಆರ್.ಪೇಟೆ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂದೆ ಪ್ರತಿದಿನವೂ ಆಧಾರ್ ಕಾರ್ಡ್ ಗೋಳನ್ನು ಕೇಳಿ ಪರಿಹಾರ ನೀಡುವವರೇ …
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ರಾಜ್ಯ ರಾಜಕೀಯದಲ್ಲಿ ಸಿಎಂ ಪದವಿಗಾಗಿ ನಡೆಯುತ್ತಿರುವ ಹೈಡ್ರಾಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಂದಿ ನಾಯಿಗಳನ್ನು ಕರೆತಂದು ಪ್ರತಿಭಟನೆ ನಡೆಸಿದರು. ರಾಜ್ಯದ ಶಾಸಕರನ್ನು ಹಂದಿನಾಯಿಗಳಿಗೆ ಹೋಲಿಸಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ರೈತರಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ 224 ಶಾಸಕರನ್ನು ಅನರ್ಹತೆ ಮಾಡಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದರು. ಸಿಎಂ ಪದವಿಗಾಗಿ ಹಂದಿನಾಯಿಗಳಂತೆ ಕಚ್ಚಾಡುತ್ತಿರುವ ಶಾಸಕರುಗಳು ಭಾವಚಿತ್ರಕ್ಕೆ ಸಗಣಿ ಎರಚಲಾಯಿತು. ಮತ ಪಡೆದು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ:ದುರ್ಗದಬೈಲ್ ಎಂಬಲ್ಲಿ ನಡೆದ ಬೆಳ್ಳಿ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧ ಇಬ್ಬರು ಅಂತರರಾಜ್ಯ ಕಳ್ಳರನ್ನು ಶಹರ್ ಠಾಣೆಯ ಪೋಲಿಸರು ಅರೆಸ್ಟ್ ಮಾಡಿದ್ದಾರೆ.ಹುಬ್ಬಳ್ಳಿಯ ದುರ್ಗದಬೈಲ್ ನ ನಾರಾಯಣ ಇಳಕಲ್ ಎಂಬುವವರ ಅಂಗಡಿಯಲ್ಲಿ ಸುಮಾರು 3 ಲಕ್ಷ 50 ಸಾವಿರ ನಗದು, 39 ಕೆಜಿ ಬೆಳ್ಳಿ ಆಭರಣ ಕಳ್ಳತನ ಪ್ರಕರಣ ನಡೆದಿತ್ತು. ಈ ಸಂಬಂಧ ನಗರದ ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನಟ್ಟಿದ ಪೋಲಿಸರು ಹುಬ್ಬಳ್ಳಿಯ ಗಬ್ಬರೂ ಬಳಿ ಕಳ್ಳರನ್ನು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಆರ್ಟಿಒ ಕಚೇರಿಯಲ್ಲಿ ಏಜೆಂಟ್ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ನೇರವಾಗಿ ಸರ್ಕಾರಿ ಸೇವೆಗಳನ್ನು ಪಡೆಯಲು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಗಬ್ಬೂರು ಆರ್ಟಿಒ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆರ್ಟಿಒ ಅಧಿಕಾರಿಗಳು ಹಣದ ಆಸೆಗೆ ಬಲಿಯಾಗದೇ ಸಾರ್ವಜನಿಕರಿಗೆ ಶೀಘ್ರವಾಗಿ ಸೇವೆಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಆರ್ಟಿಒ ಕಚೇರಿ ಆವರಣದಲ್ಲಿದ್ದ ಏಜೆಂಟ್ ಬಳಿಯಿದ್ದ ದಾಖಲೆಗಳನ್ನೂ ಪರಿಶೀಲನೆ ಮಾಡಿದ್ರು. …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಜನಪ್ರಿಯ ಶಾಸಕರು, ಜನಪರ ಹೋರಾಟಗಾರರು, ಆತ್ಮೀಯ ಬಂಧುಗಳಾದ, ಡಾ.ಕೆ.ಸಿ.ನಾರಾಯಣಗೌಡ ಅವರ 57ನೇ ಹುಟ್ಟು ಹಬ್ಬದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ನಾರಾಯಣಗೌಡ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಹಾಗೂ ಶಾಸಕರ ನಿವಾಸದ ಆವರಣದಲ್ಲಿ ಅಭಿಮಾನಿಗಳಿಂದ ಹುಟ್ಟು ಹಬ್ಬದ ಕೇಕ್ ಕತ್ತರಿಸಿ ವಿತರಿಸುವ ಕಾರ್ಯಕ್ರಮವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ: ಜಿಲ್ಲಾಡಳಿತ ನಗರಸಭೆ ಮತ್ತು ಕೆಲ ಸಂಸ್ಥೆಗಳ ಸಹಯೋಗದಲ್ಲಿ ಚಿತ್ರದುರ್ಗದ ಕೆಂಚಮಲ್ಲಪ್ಪನ ಬಾವಿಯನ್ನು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯವನ್ನು ನೆರವೇರಿಸಲಾಯಿತು.ಯುವಜನತೆ ಉತ್ಸಾಹದಿಂದ ಬಾವಿಯ ಸ್ವಚ್ಚತೆಯಲ್ಲಿ ತೊಡಗಿದ್ದರ ಫಲವಾಗಿ ಇಂದು ಬಾವಿ ಕಳೆ ತುಂಬಿದೆ.ಅಕ್ಕಪಕ್ಕದಲ್ಲಿ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದವರು ಇಂದು ಯಾವುದೇ ತೊಂದರೆ ಇಲ್ಲದೆ ಓಡಾಡುವಂತಾಗಿದೆ.ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಷುಷ್ಕರ್ಣಿಯು ಕಳೆತುಂಬಲಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಜಿಲ್ಲೆಯ ಶೀಳನೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗುರುಲಿಂಗೇಗೌಡ ಮತ್ತು ಉಪನ್ಯಾಸಕ ಕತ್ತರಘಟ್ಟ ವಾಸು ಅವರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಹಾಗೂ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ವಿಂಗಡಿಸಿ ಬೇಧಭಾವ ಮಾಡಿ ಮಾನಸಿಕ ಕಿರುಕುಳ ನೀಡುತ್ತಾ ಹಿಂಸೆ ನೀಡುತ್ತಿರುವ ಪ್ರಾಂಶುಪಾಲ ಮತ್ತು ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದಾರೆ. ಬಡವರು ಶ್ರೀಮಂತರು ಮತ್ತು ಪ್ರಭಾವಿಗಳ ಮಕ್ಕಳೆಂದು ತಾರತಮ್ಯ ಮಾಡುವ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ಕೈಗೊಂಡು …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಶಾಸಕ ಡಾ. ನಾರಾಯಣಗೌಡ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳುಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಂಭ್ರಮಿಸಿದರು.ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ನೇತೃತ್ವದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶಾಸಕರ ಮನೆಯ ಮುಂಭಾಗದಲ್ಲಿ ಕೇಕ್ ಕತ್ತರಿಸಿ ಶಾಸಕರಿಗೆ ಶುಭಕೋರಿದರು. ಮೆಚ್ಚಿನ ಶಾಸಕನ ಹುಟ್ಟು ಹಬ್ಬದ ಕಾರಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ …
Read More »
admin
September 12, 2019
ಕರ್ನಾಟಕ, ಸುದ್ದಿ
ಕೋಲಾರ: ಬಿಜೆಪಿಯ ಮೂವರು ಮುಖಂಡರು ಆಪರೇಷನ್ ಕಮಲ ಬಾಬತ್ತು ಐದು ಕೋಟಿ ಆಮಿಷ ಒಡ್ಡಿದ್ದು ನಿಜ.ಎಸಿಬಿ ಅಧಿಕಾರಿಗಳ ಒತ್ತಡದಿಂದ ಬಿಜೆಪಿ ವಿರುದ್ದದ ಆಮಿಷ ಆರೋಪವನ್ನು ನಿರಾಕರಿಸಿದ್ದೇನೆ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು. ಕೋಲಾರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರು ಐದು ಕೋಟಿ ರುಪಾಯಿ ಆಮಿಷ ಒಡ್ಡಿದ್ದರು. ಇದೀಗ ಸದನದಲ್ಲಿ ಸರ್ಕಾರಕ್ಕೆ ತೊಂದರೆ ಆದಾಗ ನೋಡಿಕೊಂಡಿರಲು ಸಾಧ್ಯವಿಲ್ಲ. ಎಸಿಬಿ ಅಧಿಕಾರಿಗಳ ಬಲವಂತದಿಂದ ನಾನು ದೂರನ್ನು ನಿರಾಕರಿಸದ್ದೇನೆ. ನನ್ನ …
Read More »