ಕೋಲಾರ: ರಾಜ್ಯ ರಾಜಕೀಯದಲ್ಲಿ ಸಿಎಂ ಪದವಿಗಾಗಿ ನಡೆಯುತ್ತಿರುವ ಹೈಡ್ರಾಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಂದಿ ನಾಯಿಗಳನ್ನು ಕರೆತಂದು ಪ್ರತಿಭಟನೆ ನಡೆಸಿದರು.
ರಾಜ್ಯದ ಶಾಸಕರನ್ನು ಹಂದಿನಾಯಿಗಳಿಗೆ ಹೋಲಿಸಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ರೈತರಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ 224 ಶಾಸಕರನ್ನು ಅನರ್ಹತೆ ಮಾಡಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದರು.
ಸಿಎಂ ಪದವಿಗಾಗಿ ಹಂದಿನಾಯಿಗಳಂತೆ ಕಚ್ಚಾಡುತ್ತಿರುವ ಶಾಸಕರುಗಳು ಭಾವಚಿತ್ರಕ್ಕೆ ಸಗಣಿ ಎರಚಲಾಯಿತು.
ಮತ ಪಡೆದು ಜನರನ್ನು ವಂಚಿಸಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ.ಹಂದಿ ನಾಯಿಗಳಂತೆ ಜಗಳ ಮಾಡುತ್ತಿರುವ ಪಕ್ಷಗಳ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





