Breaking News

ಸುದ್ದಿ

ಅಕ್ರಮ ಗಾಂಜಾ ಮಾರಾಟಗಾರರ ಬಂಧನ 52.6 ಕೆ ಜಿ ಗಾಂಜಾ, ಕಾರ್ ಜಪ್ತಿ

ಹುಬ್ಬಳ್ಳಿ: ಅಕ್ರಮವಾಗಿ ಅಪಾರ ಪ್ರಮಾಣದ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಹಾಗೂ ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿಹುಬ್ಬಳ್ಳಿಯ ಅಶೋಕ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬೀದರ ಮೂಲದ ಸಿದ್ದರಾಮ ವಿಶ್ವನಾಥ ಗುಂಡೆ (29) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 10 ಲಕ್ಷ ಮೌಲ್ಯದ 52.6 ಕೆ ಜಿ ಗಾಂಜಾ ಒಂದು ಕಾರ್, ಮೊಬೈಲ್ ಜಪ್ತಿ ಮಾಡಲಾಗಿದೆ.ಬೀದರ್ ನ ಬಾಲ್ಕಿಯಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ‌ ಮೇರೆಗೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ‌. ಬಾಲ್ಕಿಯಿಂದ …

Read More »

ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆಗೈದ ಆರೋಪಿಗಳ‌ ಬಂಧನ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆಹುಬ್ಬಳ್ಳಿಯ ನೇಕಾರ ನಗರದ ರಣದಮ್ಮಾ ಕಾಲೋನಿಯ ನಿವಾಸಿ ಅಮನುಲ್ಲಾ ಬಡಾಯಿ ಎಂಬ ಯುವಕನನ್ನು ಬರ್ಬರ್ ಹತ್ಯೆ ಗೈದು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಸಬಾಪೇಟೆ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸಿದ ಕಸಬಾಪೇಟೆ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಕುಂಬಾರ, ತಲೆ ಮರಿಸಿಕೊಂಡಿದ್ದ ರುದ್ರೇಶ ವಡ್ಡರ್, ನಾಗರಾಜ ಪೂಜಾರ ನ್ನು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣವೇ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದ್ದು. ಬಂಧಿತರಿಂದ ಹತ್ಯೆಗೆ …

Read More »

ಕೈಕೊಟ್ಟ ಮುಂಗಾರು, ಶೇಂಗಾ ಬೆಳೆಗಾರರು ಕಂಗಾಲು.

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕೊನಲ್ಲಿ ಶೇಂಗಾ ಬೆಳೆ ಸಂಪೂರ್ಣ ನೆಲಕ್ಕಚಿದೆ.ಸಾಂಪ್ರದಾಯಿಕವಾಗಿ ಮಳೆ ಆಧಾರಿತ ಬೆಳೆಯಾದ ಸೇಂಗಾ ಬೆಳೆಗೆ ಬೇಕಾಗುವಷ್ಟು ಮಳೆ ಬಂದಿಲ್ಲ ಆದ್ದರಿಂದ ಈ ಮೊದಲು ಮಳೆಗೆ ಹಾಕಲಾದ ಸೇಂಗಾ ಬೆಳೆಯು ಸಂಪೂರ್ಣ ನೆಲಕ್ಕಚಿದೆ.ಈ ಎರಡೂ ತಾಲೂಕಿನ ಹಲವಾರು ಕಡೆ ಹಾಕಿದ್ದ ಸೇಂಗ ಕಲವೊಂದು ಕಡೆ ಮೊಳಕೆಯೇ ಹೊಡೆದಿಲ್ಲ ಕಲವೊಂದು ಕಡೆ ಬೆಳೆಯು ಕುಂಟಿತವಾಗಿದೆ.ನೂರಾರು ರೈತ ಆರ್ಥಿಕ ಚಟುವಟಿಕೆಯ ಮೂಲವಾಗಿದ್ದ ಬೆಳೆ ಕೈಕೊಟ್ಟಿರೋದು ರೈತರ ಜೀವನಕ್ಕೆ ತೊಂದರೆಯಾಗಲಿದೆ.

Read More »

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಸೊಸೆ ಪಿಎಸ್ ಐ ಮಗನಿಗೆ 7 ವರ್ಷ ಜೈಲು

ದಾವಣಗೆರೆ: ಮಹಿಳೆಗೆ ಏನಾದರೂ ತೊಂದರೆ ಆದರೆ ಮಹಿಳಾ ಪಡೆ ರಕ್ಷಣೆಗೆ ನಿಲ್ಲುತ್ತದೆ. ಆದರೆ, ಇಲ್ಲೋರ್ವ ಮಹಿಳಾ ಠಾಣೆ ಪಿಎಸ್​ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದಾಳೆ. ಪ್ರಕರಣ ಸಾಬೀತಾದ ಹಿನ್ನೆಲೆ ಪಿಎಸ್​ಐ ಹಾಗೂ ಇವರ ಪುತ್ರ ಜೈಲು ಪಾಲಾಗಿದ್ದಾರೆ.ಘಟನೆ ಹಿನ್ನೆಲೆ: ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್​ಐ ಲೀಲಾವತಿ ಎಂಬುವರ ಮಗನಾದ ನವೀನ್ ಕುಮಾರ್, ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಎಂಜಿನಿಯರ್ ಬಸಪ್ಪ …

Read More »

ಧರ್ಮ ಪ್ರಚಾರಕ್ಕೆ ಆಗಮಿಸಿದ ವಿದ್ಯಾ ತಾಯಿ

ಚಿಕ್ಕೋಡಿ: ಕಲಿಯುಗದಲ್ಲಿ ಸುವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಧರ್ಮ ಪ್ರಚಾರಕ್ಕಾಗಿ ಗುಜರಾತ್ ವಿದ್ಯಾ ತಾಯಿ ಜೊನಲ್ ಇನ್ ಚಾರ್ಜ್ಆಗಮಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂತ ನಿರಂಕಾರಿ ಮಂಡಳದ ಅಥಣಿ ವಿಜಯಪುರ ಸೆಕ್ಟರ್ ಸಂಯೋಜಕ ರಾಜೇಂದ್ರ ಸಾತಪುತೆ ಹೇಳಿದರು.ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಸಂತ ನಿರಂಕಾರಿ ಮಂಡಳದ ವತಿಯಿಂದ ಸತ್ಸಂಗ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದ್ದು ನಾಳೆ ದಿನಾಂಕ ಹದಿನಾಲ್ಕರಂದು ಗುಜರಾತ್ ನ ವಿದ್ಯಾ ಬಹೆನಜಿ ಅವರು ಪ್ರಮುಖವಾಗಿ ಭಕ್ತಿಯ …

Read More »

14 ರಂದು ಗದಗನಲ್ಲಿ ರಾಜ್ಯ ಮಟ್ಟದ ವಧು-ವರರ ಪರಸ್ಪರ ಪರಿಚಯ ಸಮಾವೇಶ

ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್‌ ಹಾಗೂ ಕರ್ನಾಟಕ ವೀರಶೈವ ವಧು- ವರರ ಅನ್ವೇಷಣಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಹಾಗೂ ಪಾಲಕರ ಬೃಹತ್ ಸಮಾವೇಶವನ್ನು ಇದೇ 14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಗದಗನ ಚೇಂಬರ್ ಆಫ್ ಕಾಮರ್ಸ ಏ.ಪಿ.ಎಮ್.ಸಿ. ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರವಿ ಹಂದಿಗೋಳ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿಂದು …

Read More »

ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಚಿತ್ರದುರ್ಗ: ರಾಜ್ಯ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಘಟಕಕ್ಕೆ ಬೆಳಗ್ಗೆಯಿಂದ ಮತದಾನ ಪ್ರಾರಂಭವಾಗಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಜಿಲ್ಲಾಧ್ಯಕ್ಷ ಖಜಾಂಶಿ ಕಾರ‍್ಯದರ್ಶಿ ಮತ್ತು ರಾಜ್ಯ ಸಂಘಕ್ಕೆ ಜಿಲ್ಲಾ ಪ್ರತಿನಿಧಿ ಆಯ್ಕೆ ಇಂದು ನಡೆಯಲಿದೆ.1ಘಂಟೆ ವರೆಗೂ ಚುನಾವಣೆ ನಡೆಯಲಿದ್ದು , 4 ಘಂಟೆಯಿಂದ ಮತಎಣಿಕೆ ನಡೆಯಲಿದೆ.

Read More »

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ

ಮಂಗಳೂರು: ಶಾರ್ಟ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿರುವ ಘಟನೆಮಂಗಳೂರಿನ ಪಂಪ್ ವೆಲ್ ನಂತೂರು ಬಳಿ ನಡೆದಿದೆ. ‌ ನವೀನ್ ತಾರೆತೋಟ ಎಂಬವವರಿಗೆ ಸೇರಿದ ಮನೆ ಇದಾಗಿದ್ದು, ರಾತ್ರಿ 12 ಗಂಟೆ ವೇಳೆ ನಡೆದ ಘಟನೆ ನಡೆದಿದೆ.‌ ಘಟನೆಯಲ್ಲಿ ಮನೆ ಸುಟ್ಟಿದ್ದು ಸುಮಾರು 4 ಲಕ್ಷ ನಷ್ಟ ಉಂಟಾಗಿದೆ.ಬೆಂಕಿ ನಂದಿಸುವಲ್ಲಿ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Read More »

ಎಡೆಬಿಡದೇ ಸುರಿಯುತ್ತಿರುವ ಮೇಘರಾಜ ಜನಜೀವನ ಅಸ್ತವ್ಯಸ್ತ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ .ಮಂಗಳವಾರ ಮಧ್ಯಾಹ್ನ ಆರಂಭಗೊಂಡ ಮಳೆ ಎಡೆ ಬಿಡದೆ ಸುರಿಯುತ್ತಿದೆ .ನಗರದ ಹೊರವಲಯದ ಆಕಾಶಭವನ ಎಂಬಲ್ಲಿ ಭೂ ಕುಸಿತ ಉಂಟಾಗಿದೆ .ಎರಡು ಮನೆಗಳಿಗೆ ಹಾನಿಯಾಗಿದೆ .ಮಂಗಳೂರು ಮಹಾನಗರ ಪಾಲಿಕೆ ಪರಿಹಾರ ಕಾರ್ಯಾಚರಣೆ ಆರಂಭಿಸಿದೆ .ಪುತ್ತೂರು ತಾಲೂಕಿನ ನರಿಮೊಗರು ಸರಕಾರಿ ಶಾಲೆಯ ಶೌಚಾಲಯದ ಮೇಲೆ ಮರ ಉರುಳಿ ಬಿದ್ದ ಕಾರಣ ಹಾನಿ ಆಗಿದ್ದು ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾರೆ .ನಿರಂತರ ಮಳೆ ಆಗುತಿರುವುದರಿಂದ …

Read More »

ಸರ್ಕಾರ ಮೇಡಿಕಲ್ ಕಾಲೇಜ್ ಕೈಬಿಟ್ಟಿರುವುದನ್ನು ವಿರೋಧಿಸಿ ಬಂದ್ ಕರೆ

ಯಾದಗಿರಿ: ಉದ್ದೇಶಿತ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಇಂದು ಯಾದಗಿರಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಕರೆ ನೀಡಿರುವ ಈ ಬಂದ್ ಗೆ, ಕನ್ನಡಪರ ಸಂಘಟನೆ ಸೇರಿದಂತೆ ಒಟ್ಟು 61 ಸಂಘಟನೆಗಳಿಂದ ಬಂದ್ ಬೆಂಬಲ ನೀಡಲಾಗಿದೆ. ಇನ್ನೂ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಹ ಬಂದ್ ಗೆ ಕೈ ಜೋಡಿಸಿದ್ದು, ನಗರದಲ್ಲಿ ವ್ಯಾಪಾರ- ವಹಿವಾಟು, ಆಟೋ ಮತ್ತು ಸರಕಾರಿ ಬಸ್ ಗಳ ಸಂಚಾರ …

Read More »