ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ಹಾಗೂ ಕರ್ನಾಟಕ ವೀರಶೈವ ವಧು- ವರರ ಅನ್ವೇಷಣಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು-ವರರ ಹಾಗೂ ಪಾಲಕರ ಬೃಹತ್ ಸಮಾವೇಶವನ್ನು ಇದೇ 14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಗದಗನ ಚೇಂಬರ್ ಆಫ್ ಕಾಮರ್ಸ ಏ.ಪಿ.ಎಮ್.ಸಿ. ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರವಿ ಹಂದಿಗೋಳ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯ ಪ್ರಕಾರ ವಿವಾಹ ಮಾಡುವ ಸದುದ್ದೇಶದಿಂದ ಈ ಒಂದು ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಜಂಗಮ ಲಿಂಗಾಯತ, ಬಣಜಿಗ, ಪಂಚಮಸಾಲಿ, ಬಣಗಾರ, ಶಿವಶಿಂಪಿ, ನೇಕಾರ, ಕುರವಿನಶೆಟ್ಟಿ ಸಾಧರು, ಗಾಣಿಗೇರ, ಲಿಂಗಾಯತ ರೆಡ್ಡಿ, ಪಾಕನರೆಡ್ಡಿ, ನಾಮದರೆಡ್ಡಿ, ಒಕ್ಕಲಿಗ ಕುಡವಕ್ಕಲಿಗ, ಹಡಪದ, ಹೂಗಾರ, ತೋಟಗಾರ ಸಮುದಾಯದ ಉನ್ನತ ವ್ಯಾಸಂಗವನ್ನು ಹೊಂದಿದ ಹಾಗೂ ಸರ್ಕಾರಿ, ಅರೇಸರ್ಕಾರಿ, ಬ್ಯಾಂಕ್ ಹಾಗೂ ಖಾಸಗಿ ಕಂಪನಿಯ ನೌಕರಸ್ಥರು, ಉದ್ಯಮದಾರರು ಭಾಗವಹಿಸಲಿದ್ದಾರೆ. ಪ್ರವೇಶ ದರ 600 ನಿಗದಿಪಡಿಸಲಾಗಿದೆ.
ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವವರು ಎರಡು ಫೋಟೋ ಜಾತಕದೊಂದಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ. 7204139739, 9686927111 ಗೆ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ ಹಿರೇಮಠ, ಶಕುಂತಲಾ ನಂದಿಮಠ , ಜ್ಯೋತಿ ಹಿರೇಮಠ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





