Breaking News

ಸುದ್ದಿ

ಅಕ್ರಮ ಹಸು ಸಾಗಾಣೆ ಇಬ್ಬರ ಬಂಧನ.

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಹಸು ಸಾಗಿಸುತ್ತಿದ್ದ ವಾಹನವನ್ನ ಅಡ್ಡಗಟ್ಟಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಫ್ರದಾನ ಕಾರ್ಯದರ್ಶಿ ಸುರೇಶ್ , ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನ ಇಡಿದು ಪೋಲಿಸರಿಗೆ ಒಪ್ಪಿಸಿದ್ದು‌, ಮೂವತಕ್ಕು ಹೆಚ್ಚು ಹಸುಗಳನ್ನ ರಕ್ಷಣೆ‌ಮಾಡಲಾಗಿದೆ. ಈ ಸಂಬಂದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಪಾಗಿದ್ದು. ಪರಾರಿಯಾಗಿರುವ ಮತ್ತಿಬ್ಬರ ವ್ಯಕ್ತಿಗಳಿಗಾಗಿ ‌ಹುಡುಕಾಟ ನಡೆಸಿದ್ದಾರೆ.

Read More »

ಮುಸ್ಲಿಂ ಸಮುದಾಯ ರಕ್ಷಿಸಲು ಆಗ್ರಹಿಸಿ ಎಸ್.ಡಿ.ಪಿ.ಐ ಪ್ರತಿಭಟನೆ

ಚಾಮರಾಜನಗರ: ಗುಂಪು ಹತ್ಯೆಕೋರರನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಹಾಗೂ ದೇಶಾದ್ಯಂತ ಮುಸ್ಲಿಂ ಸಮುದಾಯ ರಕ್ಷಣೆಗಾಗಿ ವಿಶೇಷ ಕಾನೂನು ರೂಪಿಸುವಂತೆ ಒತ್ತಾಯಿಸಿ ಎಸ್ ಡಿ ಪಿ ಐ ಕಾರ್ಯಕರ್ತರು ಚಾಮರಾಜನಗರ ದಲ್ಲಿ ಪ್ರತಿಭಟನೆ ನಡೆಸಿದರು. ‌ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತ ಭವನ ತಲುಪಿದ ಪ್ರತಿಭಟನಾಕಾರರು ಅಲ್ಲಿ ಕೆಲಕಾಲ ಧರಣಿ ನಡೆಸಿದರು.ಈ …

Read More »

ಸಾಲಬಾಧೆ ತಾಳಲಾರದೆ ನೇಣಿನ ಕುಣಿಕೆಗೇರಿದ ಅನ್ನದಾತ.

ಚಿಕ್ಕೋಡಿ: ಸಾಲ ಭಾದೆ ತಾಳಲಾರದೇ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ‌ಮಹಾದೇವ ಅಂಭಿ ೪೮ ನೇಣಿಗೆ ಶರಣಾಗಿರುವ ರೈತ.ಖಾಸಗಿ ಸರ್ಕಾರಿ ಬ್ಯಾಂಕ್ ಕೈಗಡ ಸೇರಿದಂತೆ ೧೦ ಲಕ್ಷ ಸಾಲ ಮಾಡಿದ್ದ ರೈತ ಸಾಲವನ್ನು ತೀರಿಸಲಾಗದೇ ಇಂದು ಬೆಳಗಿನ ಜಾವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ‌ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

Read More »

ಮಲಪ್ರಭಾ ನೀರು ಪೂರೈಕೆಗಾಗಿ ಪ್ರಧಾನಿ ಜೊತೆ ಚರ್ಚೆ

ಹುಬ್ಬಳ್ಳಿ: ಕಾಳಿ ನದಿ‌ ನೀರನ್ನು ಏತ ನೀರಾವರಿ ಯೋಜನೆ ಮೂಲಕ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಿಗೆ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆ ಜಾತಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯರನ್ನು ಜುಲೈ. 4 ರಂದು ದೆಹಲಿಯಲ್ಲಿ ಭೇಟಿಯಾಗಿ ಮನವರಿಕೆ ಮಾಡಲಾಗುವದು ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದ ನದಿಗಳ ‌ಜೋಡಣೆಗೆ ಕೇಂದ್ರ ಸರ್ಕಾರ …

Read More »

ಬೇಟೆಗಾರರ ವಕ್ರದೃಷ್ಟಿಗೆ ಬಲಿಯಾಗುತ್ತಿರುವ ಬಾವಲಿಗಳ ಸಂತತಿ

ಆನೇಕಲ್ : ಹಲವು ದಶಕಗಳಿಂದ ಆ ಗ್ರಾಮದ ಜನರಲ್ಲಿ ಒಬ್ಬರಂತೆ ಗ್ರಾಮದಲ್ಲೇಲ್ಲ ಒಡಾಡಿಕೊಂಡು ಗ್ರಾಮದ ಕೆರೆಯ ಮರಗಳಲ್ಲಿ ಆಶ್ರಯ ಪಡೆದು ಜೀವಿಸುತ್ತಿದ್ದ ಆ ಪಕ್ಷಿಗಳು ಗ್ರಾಮದಲ್ಲಿ ಯಾರಿಗೂ ತೊಂದರೆ ಕೊಡದೆ ಗ್ರಾಮಸ್ಥರ ಹಾಗು ಪ್ರಾಣಿ ಪಕ್ಷಿ ಪ್ರಿಯರಿಗೆ ಹಕ್ಕಿಗಳು ಅಚ್ಚುಮೆಚ್ಚಿನ ಪಕ್ಷಿಗಳಾಗಿ ನೋಡಲು ಸುಂದರವಾದ ತಾಣವಾಗಿದ್ದ ಸ್ಥಳ ಇದೀಗ ಭೇಟೆಗಾರರ ಕಣ್ಣಿಗೆ ಬಿದ್ದು ಪ್ರತಿನಿತ್ಯ ಭೇಟೆಯಾಡುತ್ತಾ ಪಕ್ಷಿಗಳ ಅವನತಿಯ ಹಂಚಿಗೆ ತಲುಪುವಂತಾಗಿದೆ.‌ಹೀಗೆ ಮರಗಳ ಮೇಲೆ ನೇತಾಡುತ್ತ ಶಬ್ದ ಮಾಡಿಕೊಂಡು ಹರಡುತ್ತಿರುವ …

Read More »

ಬೈಕ್ ಚಾಲಕನನ್ನು ಹೊತ್ತೊಯ್ದ ಜವರಾಯ

ಬೆಳಗಾವಿ: ಇಲ್ಲಿನ ಸಾಂಬ್ರಾ ಮಾರ್ಗದಲ್ಲಿ ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಂದು ಮಧ್ಯಾನ್ಹದ ವೇಳೆ ಬೆಳಗಾವಿಯ ಸಾಂಬ್ರಾ ಮಾರ್ಗ ಪೋತದಾರ ಶಾಲೆಯ ಹತ್ತಿರ ಟೆಂಪೋ ಮತ್ತು ಬೈಕ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ.ಪರಿಣಾಮ ಸ್ಥಳದಲ್ಲೇ ಬೈಕ್ ಚಾಲಕ ಸಾವನ್ನಪ್ಪಿದ್ದಾನೆ. ಮೃತನನ್ನ ಸಾಂಬ್ರಾದ ಮಾರುತಿ ಗಲ್ಲಿ ರಹವಾಸಿ ಸುನೀಲ ಯಡ್ಡಿ ಎಂದು ಗುರುತಿಸಲಾಗಿದೆ. ರಾಂಗ್ ರೂಟಿನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವೆಂದು …

Read More »

ತಮಿಳುನಾಡು ಮೂಲದ ಸರಕು ಸಾಗಣಿಕೆ ಲಾರಿ ಪಲ್ಟಿ.‌

ಕೋಲಾರ: ತಮಿಳುನಾಡಿಗೆ ಸೇರಿದ ಸರಕು ಸಾಗಾಣೆ ಲಾರಿ ಆಯತಪ್ಪಿ ಪಲ್ಟಿಯಾಗಿ ಉರುಳಿದ ಘಟನೆ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಬಳಿ ಸಂಭವಿಸಿದೆ. ‌ ಲಾರಿ ಚಾಲಕ‌ ಅಜಯ ಪತ್ರ ಎಂಬುವವನು ಕುಡಿದ ಮತ್ತಿನಲ್ಲಿ ವಾಹನ‌ ಚಲಾಯಿಸಿರುವದರಿಂದ ಅಪಘಾತ‌ ಸಂಭವಿಸಿದೆ. ಲಾರಿ ಉರುಳಿದ್ದರಿಂದ ಚಾಲಕ ಅದರಲ್ಲಿಯೇ ಸಿಲುಕಿ ಹಾಕಿಕೊಂಡಿದ್ದ.‌ ಗ್ರಾಮಸ್ಥರು‌‌ ಅರ್ಧ ಗಂಟೆಗೂ ಹೆಚ್ಚು ಕಾಲ‌ ಹರಸಾಹಸ ಪಟ್ಟು ಕೊನೆಗೂ ಚಾಲಕನನ್ನು ಹೊರ ತೆಗೆದಿದ್ದಾರೆ. ಜೊತೆಗಿದ್ದ ವಾಹನದ ಕ್ಲೀನರ್ ಓಂಕಾರ ಅಪಾಯದಿಂದ ಪಾರಾಗಿದ್ದಾನೆ. …

Read More »

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ನಗರಸಭಾ ಆಯುಕ್ತ ಪುಟ್ಟಸ್ವಾಮಿ

ರಾಮನಗರ: ಖಾತೆ ಮಾಡಿಕೊಡುವದಾಗಿ ಹೇಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭಾ ಆಯುಕ್ತ ಹಾಗೂ ಕೇಸ್ ವರ್ಕರ್ ಎಸಿಬಿ ಅಧಿಕಾರಿಗಳ ತೆಕ್ಕೆಗೆ ಬಿದ್ದಿದ್ದಾರೆ.‌ನಗರಸಭಾ ಆಯುಕ್ತ ಪುಟ್ಟಸ್ವಾಮಿ ಹಾಗೂ ಕೇಸ್ ವರ್ಕರ್ ಮೋಹನ್ ಎಸಿಬಿ ಬಲೆಗೆ ಬಿದ್ದಿರುವ ಆರೋಪಿಗಳು.‌ನಗರಸಭಾ ಆಯುಕ್ತ ಪುಟ್ಟಸ್ವಾಮಿ ಸಿದ್ದಿಖ್ ಎಂಬುವವರ ಬಳಿ ಖಾತೆಗಾಗಿ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ.‌ ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ನಗರಸಭೆ ಮೇಲೆ ಏಕಾಏಕಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿಸಿದ್ದಿಖ್ ಅವರಿಂದ 15ಸಾವಿರ …

Read More »

ವಿದ್ಯುತ್ ತಂತಿ ತಗುಲಿ ಯುವಕ ದುರ್ಮರಣ.

ಚಿತ್ರದುರ್ಗ: ನುಗ್ಗೆ ಸೊಪ್ಪು ಕೀಳಲು ಹೋಗಿ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಸಂಭವಿಸಿದೆ. ಸೋಮಶೇಖರ್ (21) ಮೃತ ದುದೈವಿ.ಬೆಸ್ಕಾಂ ಅಧಿಕಾರಿಗಳ ನಿಲ್ಯಕ್ಷವೇ ಘಟನೆಗೆ ಕಾರಣವಾಗಿದೆ ಎಂದು ಯುವಕನ ಪೋಷಕರುಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.‌

Read More »

ಮೊಬೈಲ್ ಕಳ್ಳರಿಗೆ ಗೂಸಾ ನೀಡಿದ ಗ್ರಾಮಸ್ಥರು.

ಚಿಕ್ಕಬಳ್ಳಾಪುರ: ಸಾರ್ವಜನಿಕರನ್ನು ಯಾಮಾರಿಸಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರಿಗೆ ಸಾರ್ವಜನಿಕರಿಂದ ಗೂಸಾ ಬಿದ್ದಿರುವ ಚಿಂತಾಮಣಿ ತಾಲ್ಲೂಕಿನ ಹಿರೇಪಾಳ್ಯದಲ್ಲಿ ನಡೆದಿದೆ. ‌ ಹಿರೇಪಾಳ್ಯ ಗೇಟ್ ನಲ್ಲಿ ಯುವಕನ ಬಳಿ ಮೊಬೈಲ್ ಕಾಲ್ ಮಾಡಿ ಕೊಡುತ್ತೇನೆಂದು ಮೊಬೈಲ್ ತೆಗೆದುಕೊಂಡು ಪರಾರಿಯಾಗುತಿದ್ದ ಕತರ್ನಾಕ್ ಗ್ಯಾಂಗ್ ನ್ನು ಹಿಡಿದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರು ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

Read More »