ಕೋಲಾರ: ತಮಿಳುನಾಡಿಗೆ ಸೇರಿದ ಸರಕು ಸಾಗಾಣೆ ಲಾರಿ ಆಯತಪ್ಪಿ ಪಲ್ಟಿಯಾಗಿ ಉರುಳಿದ ಘಟನೆ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಬಳಿ ಸಂಭವಿಸಿದೆ.
ಲಾರಿ ಚಾಲಕ ಅಜಯ ಪತ್ರ ಎಂಬುವವನು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿರುವದರಿಂದ ಅಪಘಾತ ಸಂಭವಿಸಿದೆ.
ಲಾರಿ ಉರುಳಿದ್ದರಿಂದ ಚಾಲಕ ಅದರಲ್ಲಿಯೇ ಸಿಲುಕಿ ಹಾಕಿಕೊಂಡಿದ್ದ. ಗ್ರಾಮಸ್ಥರು ಅರ್ಧ ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಕೊನೆಗೂ ಚಾಲಕನನ್ನು ಹೊರ ತೆಗೆದಿದ್ದಾರೆ.
ಜೊತೆಗಿದ್ದ ವಾಹನದ ಕ್ಲೀನರ್ ಓಂಕಾರ ಅಪಾಯದಿಂದ ಪಾರಾಗಿದ್ದಾನೆ.
ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




