ಆನೇಕಲ್ : ಹಲವು ದಶಕಗಳಿಂದ ಆ ಗ್ರಾಮದ ಜನರಲ್ಲಿ ಒಬ್ಬರಂತೆ ಗ್ರಾಮದಲ್ಲೇಲ್ಲ ಒಡಾಡಿಕೊಂಡು ಗ್ರಾಮದ ಕೆರೆಯ ಮರಗಳಲ್ಲಿ ಆಶ್ರಯ ಪಡೆದು ಜೀವಿಸುತ್ತಿದ್ದ ಆ ಪಕ್ಷಿಗಳು ಗ್ರಾಮದಲ್ಲಿ ಯಾರಿಗೂ ತೊಂದರೆ ಕೊಡದೆ ಗ್ರಾಮಸ್ಥರ ಹಾಗು ಪ್ರಾಣಿ ಪಕ್ಷಿ ಪ್ರಿಯರಿಗೆ ಹಕ್ಕಿಗಳು ಅಚ್ಚುಮೆಚ್ಚಿನ ಪಕ್ಷಿಗಳಾಗಿ ನೋಡಲು ಸುಂದರವಾದ ತಾಣವಾಗಿದ್ದ ಸ್ಥಳ ಇದೀಗ ಭೇಟೆಗಾರರ ಕಣ್ಣಿಗೆ ಬಿದ್ದು ಪ್ರತಿನಿತ್ಯ ಭೇಟೆಯಾಡುತ್ತಾ ಪಕ್ಷಿಗಳ ಅವನತಿಯ ಹಂಚಿಗೆ ತಲುಪುವಂತಾಗಿದೆ.ಹೀಗೆ ಮರಗಳ ಮೇಲೆ ನೇತಾಡುತ್ತ ಶಬ್ದ ಮಾಡಿಕೊಂಡು ಹರಡುತ್ತಿರುವ ಸಾವಿರಾರು ಬಾವಲಿ ಪಕ್ಷಿಗಳ ದೃಶ್ಯ ಕಂಡು ಬರೋದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಿಮ್ಮಸಂದ್ರ ,ಹಾಗು ಸಮ್ಮಂದೂರು ಗ್ರಾಮದಲ್ಲಿ.ಹೌದು ಈ ತಿಮ್ಮಸಂದ್ರ ಹಾಗು ಸಮಂದೂರು ಗ್ರಾಮದಲ್ಲಿ ಸುಮಾರು ದಶಕಗಳಿಂದ ಹತ್ತು ಸಾವಿರಕ್ಕಿಂತ ಹೆಚ್ಚು ಬಾವಲಿ ಪಕ್ಷಿಗಳು ಇಲ್ಲಿನ ಗ್ರಾಮದ ಕೆರೆಯಲ್ಲಿನ ಮರಗಳಲ್ಲಿ ವಾಸ ಮಾಡುತ್ತಿದ್ದು ಗ್ರಾಮಕ್ಕಾಗಲಿ ಗ್ರಾಮದ ಜನಕ್ಕಾಗಲಿ ಯಾವುದೇ ತೊಂದರೆ ಕೊಡದ ಸಾವಿರಾರು ಸಂಖ್ಯೆಯ ಬಾವಲಿಗಳು ಗ್ರಾಮದ ಜನರ ಪ್ರೀತಿ ಪಾತ್ರವಾಗಿದೆ.ಇನ್ನು ಈ ಬಾವಲಿ ಹಕ್ಕಿಗಳನ್ನು ರಾತ್ರಿ ಹಕ್ಕಿಗಳು ಎಂದು ಕರೆಯುತ್ತಾರೆ ರಾತ್ರಿ ವೇಳೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಕಡೆಗಳಲ್ಲಿ ಓಡಾಡುತ್ತ ಆಹಾರವನ್ನು ಸೇವಿಸಿಕೊಂಡು ಹಗಲು ವೇಳೆಯಲ್ಲಿ ಮರಗಳ ಮೇಲೆ ನೇತು ಬಿದ್ದು ಕಲರವರಿಸುತ್ತಾ ಹಾರಾಡುತ್ತಿರುವ ದೃಶ್ಯಗಳನ್ನು ನೋಡುವುದಕ್ಕೆ ಪಕ್ಷಿ ಪ್ರಿಯರು ಹಾಗು ಕೆಲ ಗ್ರಾಮಸ್ಥರು ಅವುಗಳನ್ನು ನೋಡಿ ಸಂತಸ ಪಡುತ್ತಾರೆ.ಇನ್ನು ಈ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯ ಬಾವಲಿಗಳು ಗ್ರಾಮದಲ್ಲಿದ್ದು ಜನಕ್ಕೆ ಯಾವುದೇ ತೊಂದರೆ ಕೊಡದೆ ಸಾಕಷ್ಟು ವರ್ಷಗಳಿಂದ ಗ್ರಾಮದಲ್ಲಿದೆ, ಅದ್ರೆ ಇದೀಗ ಕರ್ನಾಟಕ ತಮಿಳುನಾಡು ಗಡಿ ಭಾಗವಾಗಿರುವುದರಿಂದ ಕೆಲ ಬೇಟೆಗಾರರು ತಮಿಳುನಾಡಿನ ಕಡೆಯಿಂದ ತಂಡ ತಂಡಗಳಾಗಿ ಬಂದು ಗ್ರಾಮಸ್ಥರ ಕಣ್ಣು ತಪ್ಪಿಸಿ ರಾತ್ರಿ ಹೊತ್ತಿನಲ್ಲಿ ಬಲೆಗಳನ್ನು ಹಾಕುವ ಮೂಲಕ ಬಾವಲಿಗಳನ್ನು ಭೇಟೆಯಾಡುತ್ತಿದ್ದಾರೆ.ಇದರಿಂದ ಬಾವಲಿಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವುದು ಗ್ರಾಮದ ಹಾಗು ಪಕ್ಷಿ ಪ್ರಿಯರ ಕೆಂಗಣ್ಣಿಗೆ ಕಾರಣವಾಗಿದ್ದು ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಗಮನ ಹರಿಸಿ ಭೇಟೆಗಾರರ ವಿರುದ್ಧ ಕ್ರಮ ಜರುಗಿಸಿ ಭೇಟೆಗಾರರಿಗೆ ಕಡಿವಾಣ ಹಾಕಿ ಬಾವಲಿಗಳ ಬಗ್ಗೆ ಜನಕ್ಕೆ ಹರಿವು ಮೂಡಿಸುವಂತಹ ಕೆಲಸವನ್ನು ಸಂಬಂಧ ಪಟ್ಟ ಅಧಿಕಾರಿಗಳು ಮಾಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.ಒಟ್ಟಿನಲ್ಲಿ ದಿನ ಕಳೆದಂತೆ ಪ್ರಾಣಿ ಪಕ್ಷಿಗಳ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗುತ್ತುರುವ ದಿನಗಳಲ್ಲಿಯೂ ಸಹ ಈ ಗ್ರಾಮದಲ್ಲಿ ಸಾವಿರಾರು ಬಾವಲಿ ಹಕ್ಕಿಗಳ ಸಂತತಿಯನ್ನು ಉಳಿಸಿಕೊಂಡು ಬರುತ್ತಿದ್ದ ಗ್ರಾಮಸ್ಥರಿಗೆ ಇದೀಗ ಭೇಟೆಗಾರರ ಹಾವಳಿ ಜಾಸ್ತಿಯಾಗಿದ್ದು ಭೇಟೆಗಾರರ ಕಡಿವಾಣಕ್ಕೆ ಅರಣ್ಯ ಸಿಬ್ಬಂದಿಯಾಗಲಿ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಪಕ್ಷಿಗಳ ಉಳಿವಿಗಾಗಿ ಭೇಟೆಗಾರರ ವಿರುದ್ಧ ಕ್ರಮ ಜರುಗಿಸುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ ಎಂದು ಗ್ರಾಮಸ್ಥರಾದ ಮಧು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





