ಬೆಳಗಾವಿ: ಇಲ್ಲಿನ ಸಾಂಬ್ರಾ ಮಾರ್ಗದಲ್ಲಿ ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಂದು ಮಧ್ಯಾನ್ಹದ ವೇಳೆ ಬೆಳಗಾವಿಯ ಸಾಂಬ್ರಾ ಮಾರ್ಗ ಪೋತದಾರ ಶಾಲೆಯ ಹತ್ತಿರ ಟೆಂಪೋ ಮತ್ತು ಬೈಕ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ.ಪರಿಣಾಮ ಸ್ಥಳದಲ್ಲೇ ಬೈಕ್ ಚಾಲಕ ಸಾವನ್ನಪ್ಪಿದ್ದಾನೆ. ಮೃತನನ್ನ ಸಾಂಬ್ರಾದ ಮಾರುತಿ ಗಲ್ಲಿ ರಹವಾಸಿ ಸುನೀಲ ಯಡ್ಡಿ ಎಂದು ಗುರುತಿಸಲಾಗಿದೆ. ರಾಂಗ್ ರೂಟಿನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪಂಚನಾಮೆ ನಡೆಸಿ, ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





