Breaking News

ಸುದ್ದಿ

ಕಾರು ಮತ್ತು ಸರ್ಕಾರಿ ಬಸ್‌ನ ನಡುವೆ ಮುಖಾಮುಖಿ ಡಿಕ್ಕಿ…

ಕಾರವಾರ: ಕಾರು ಮತ್ತು ಸರ್ಕಾರಿ ಬಸ್‌ನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲದಲ್ಲಿ ನಡೆದಿದೆ. ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್‌ ಕುಮಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿದೆ. ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಮೃತರ ಪೈಕಿ ನಾಲ್ವರು ಮಂಗಳೂರು ಮೂಲದವರಾಗಿದ್ದು, ಒಂದೇ ಕುಟುಂಬದವರು ಎಂದು ತಿಳಿದು …

Read More »

ದಸರಾದಲ್ಲಿ ಭಾಗಿಯಾದ ಅನೇಕ ಆನೆಗಳು ಅಕಾಲಿಕವಾಗಿ ಸಾವು…

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಂಚಲನ ಮೂಡಿಸಿದ ಘಟನೆಯೆಂದರೆ ದಸರಾ ಆನೆ ಅರ್ಜುನನ ಸಾವು. ನಾಡಹಬ್ಬ ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಬಲಿಷ್ಠ ಆನೆ ಅರ್ಜುನ ಕಾಡಾನೆ ಒಂಟಿ ಸಲಗನ ದಾಳಿಯಿಂದ ಅರಣ್ಯ ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗರ ಕಣ್ಣೇದುರೇ ಸಾವನ್ನಪ್ಪಿತ್ತು. ಅರ್ಜುನನ ಸಾವು ಅನ್ಯಾಯದ ಸಾವು ಈ ಬಗ್ಗೆ ತನಿಖೆಯಾಗಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಲೇ ಇದೆ. ಬಲಿಷ್ಠನಾಗಿದ್ದ ಅರ್ಜುನ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾನೆ ಎನ್ನುವುದು ನಂಬಲಾಗದ …

Read More »

ಇಲ್ಲೊಬ್ಬರು ಚಿನ್ನ ಹಾಗೂ ಪ್ಲಾಟಿನಂನಿಂದ ವಿವಾರ ನೌಕೆಯನ್ನು ತಯಾರಿ….

ಕೈಯಲ್ಲಿ ದುಡ್ಡಿದ್ದರೆ ಏನು ಮಾಡಕ್ಕಾಗಲ್ಲ ಅಲ್ವಾ? ಇಲ್ಲೊಬ್ಬರು ಚಿನ್ನ ಹಾಗೂ ಪ್ಲಾಟಿನಂನಿಂದ ವಿವಾರ ನೌಕೆಯನ್ನು ತಯಾರಿಸಿದ್ದರೆ. ಈ ನೌಕೆಯನ್ನು ತಯಾರಿಸಲು 10,000 ಕೆಜಿ ಚಿನ್ನ ಬಳಸಿದ್ದಾರೆ, ಜೊತೆಗೆ ಪ್ಲಾಟಿನಂ ಕೂಡ ಬಳಸಿದ್ದಾರೆ ಇದರ ಬೆಲೆ ಎಷ್ಟಿದೆ ಎಂಬುವುದನ್ನು ನೀವೇ ಊಹಿಸಬಹುದು. ಇದು ಪ್ರಪಂಚದ ಅತ್ಯಂತ ದುಬಾರಿ ನೌಕೆಯಾಗಿದೆ. ಬ್ರಿಟನ್‌ನ ಗ್ಯಾಡ್ಜೆಟ್‌ ಗುರುಯಾಗಿರುವ ಸ್ಟುವರ್ಟ್ ಹ್ಯೂಸ್ ಐಪ್ಯಾಡ್‌ ತಯಾರಿಯಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ತಯಾರಿಸಿದ ನೌಕೆ ಇದಾಗಿದೆ. ಇದರ ಬೆಲೆ $4.8 …

Read More »

ಫೈನಲ್ ಪಂದ್ಯ ಆಡಿದ ಪಿಚ್‌ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ‘ಸರಾಸರಿ’ ರೇಟಿಂಗ್ ನೀಡಿದೆ….

ಭಾರತ ತಂಡ ತವರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿತ್ತು. ಅಲ್ಲದೆ ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಫೈನಲ್‌ ಹಂತವನ್ನು ಪ್ರವೇಶಿಸಿತ್ತು. ಭಾರತ ಮೂರನೇ ಬಾರಿ ವಿಶ್ವಕಪ್‌ ಗೆಲ್ಲಲಿದೆ ಎಂದು ಕ್ರಿಕೆಟ್‌ ಪಂಡಿತರೂ ಸಹ ಭವಿಷ್ಯ ನುಡಿದಿದ್ದರು. ನವೆಂಬರ್‌ 19 ಆ ದಿನ ಭಾರತದ ಪರವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪ್ಲೇಯರ್ಸ್‌ ಫೈನಲ್ ಪಂದ್ಯದಲ್ಲಿ ಮಕಾಡೆ ಮಲಗಿದರು. ಆಸೀಸ್‌ …

Read More »

ತೆಲಂಗಾಣ ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಮಲ್ಲು ಗುರುವಾರ (ಡಿಸೆಂಬರ್ 7) ಪ್ರಮಾಣ ವಚನ ಸ್ವೀಕರಿಸಿದ್ದಾರೆ….

ಹೈದರಾಬಾದ್‌: ತೆಲಂಗಾಣ ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಮಲ್ಲು ಗುರುವಾರ (ಡಿಸೆಂಬರ್ 7) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗಿಂತ ಮೊದಲು ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕರ್ನಾಟಕ ಮಾದರಿ ಕ್ಯಾಬಿನೆಟ್‌ಗೆ ಮುನ್ನಡಿ ಬರೆದಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ತೆಲಂಗಾಣ ಚುನಾವಣೆಯಲ್ಲಿ ಖಮ್ಮಂ ಜಿಲ್ಲೆಯ ಮಧಿರಾ ವಿಧಾನಸಭಾ ಕ್ಷೇತ್ರದಿಂದ 35,452 ಮತಗಳಿಂದ ಜಯಗಳಿಸಿದ ಭಟ್ಟಿ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಚೊಚ್ಚಲ ವಿಜಯವನ್ನು ದಾಖಲಿಸಿದ ನಂತರ ಇಂದು …

Read More »

ಸದನದಲ್ಲಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್‌ ವಿತರಣೆ ಕುರಿತು ಚರ್ಚೆ….

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಾಕಷ್ಟು ವಿಚಾರಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಗುರುವಾರ ಸದನದಲ್ಲಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್‌ ವಿತರಣೆ ಕುರಿತು ಚರ್ಚೆ ನಡೆಯಿತು. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಕಾರ್ಯಕ್ರಮ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ತಿಳಿಸಿದರು. ವಿಧಾನಸಭೆಯಲ್ಲಿ ಸದಸ್ಯ ಪ್ರದೀಪ್ …

Read More »

ಮೆಟ್ರೋದಲ್ಲಿ ಇಬ್ಬರು ಪುರುಷರು ಸೀಟಿಗಾಗಿ ಹೊಡೆದಾಡಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ…

ನವದೆಹಲಿ: ಮೆಟ್ರೋಗಳಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಪ್ರೇಮಿಗಳು ಕಿಸ್‌ ಮಾಡುವುದು, ರೀಲ್ಸ್‌ ಮಾಡುವುದು ಸೇರಿದಂತೆ ಇನ್ನಿತರ ಘಟನೆಗಳು ನಡೆದಿವೆ. ಅಲ್ಲದೆ ಇತ್ತೀಚೆಗಷ್ಟೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿದ ಹಾಗೂ ರೀಲ್ಸ್‌ ಮಾಡಿ ಪೇಚಿಗೆ ಸಿಲುಕಿದ್ದು, ನಂತರ ಅವರ ವಿರುದ್ಧ ಬಿಎಂಆರ್‌ಸಿಎಲ್‌ ಕ್ರಮ ಜರುಗಿಸಿತ್ತು. ಇದೀಗ ಮೆಟ್ರೋದಲ್ಲಿ ಇಬ್ಬರು ಪುರುಷರು ಸೀಟಿಗಾಗಿ ಹೊಡೆದಾಡಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೆಟ್ರೋ ಹಲವು ವಿಚಾರಗಳಿಗೆ ದೇಶದ …

Read More »

ಸದನ ಆರಂಭವಾಗುತ್ತಿದ್ದಂತೆ ಸಮಯಕ್ಕೆ ಸರಿಯಾಗಿ ಬಂದ ಸದಸ್ಯರ ಹೆಸರನ್ನು ಸ್ಪೀಕರ್ ಯು.ಟಿ ಖಾದರ್ ಓದಿದರು….

ಬೆಳಗಾವಿ: ಗುರುವಾರ ಸದನ ಆರಂಭ ಆಗುತ್ತಿದ್ದಂತೆ ಸದನಕ್ಕೆ ಸರಿಯಾದ ಸಮಯಕ್ಕೆ ಬಂದ ಸದಸ್ಯರ ಹೆಸರನ್ನು ಸ್ಪೀಕರ್ ಯು ಟಿ ಖಾದರ್‌ ಓದಿ ಹೇಳಿದರು. ಆದರೆ ಇದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನಕ್ಕೆ ನಾವೂ ಬೇಗ ಬಂದಿದ್ದೇವೆ, ನಮ್ಮನ್ನೇಕೆ ಗುರುತಿಸಲ್ಲ ? ಎಂದು ಪ್ರಶ್ನಿಸಿದರು. ನಾವೂ ಟೈಂಗೆ ಸರಿಯಾಗಿ‌ ಬಂದಿದ್ದೇವೆ ನಮ್ಮ ಹೆಸರು ಏಕಿಲ್ಲ? ಎಂದು ಆರಗ ಜ್ಞಾನೇಂದ್ರ ಸೇರಿದಂತೆ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸ್ಪೀಕರ್ ಖಾದರ್ …

Read More »

ರಾಜ್ಯ ಸರ್ಕಾರದ ಬಳಿ ರೈತರಿಗೆ ಕೊಡೋಕೆ ಹಣ ಇಲ್ಲ, ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡುತ್ತೇವೆ ಅಂತಾ ಹೇಳುತ್ತಾರೆ.

ಬೆಳಗಾವಿ: ರಾಜ್ಯ ಸರ್ಕಾರದ ಬಳಿ ರೈತರಿಗೆ ಕೊಡೋಕೆ ಹಣ ಇಲ್ಲ, ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡುತ್ತೇವೆ ಅಂತಾ ಹೇಳುತ್ತಾರೆ. ಇದೇನಾ ನ್ಯಾಯ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.‌ ನಗರದಲ್ಲಿ ಗುರುವಾರ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲವಿದೆ, ಆದರೆ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಒಣಮೇವು, ಹಸಿ ಮೇವಿನ ಅಭಾವ ಉಂಟಾಗಿದ್ದು, …

Read More »

ದೇಶದ ಸಂಪತ್ತಿನ ವಿಚಾರ & ಮುಸ್ಲಿಂ ಸಮುದಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಭಾರಿ ಆಕ್ರೋಶ….

ದೇಶದ ಸಂಪತ್ತಿನ ವಿಚಾರ & ಮುಸ್ಲಿಂ ಸಮುದಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ಮೊಳಗುತ್ತಿದೆ. ಅದರಲ್ಲೂ ಬಿಜೆಪಿ ಸೇರಿದಂತೆ ವಿರೋಧ ಪಕ್ಷ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆರೋಪವನ್ನ ಮಾಡುತ್ತಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಫುಲ್ ಗರಂ ಆಗಿದ್ದಾರೆ. ಅರೆ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದು ಏಕೆ? ಅಂದಹಾಗೆ ಕಳೆದ ಕೆಲವು ದಿನದಿಂದ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ …

Read More »