ಹೈದರಾಬಾದ್: ತೆಲಂಗಾಣ ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಮಲ್ಲು ಗುರುವಾರ (ಡಿಸೆಂಬರ್ 7) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗಿಂತ ಮೊದಲು ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕರ್ನಾಟಕ ಮಾದರಿ ಕ್ಯಾಬಿನೆಟ್‌ಗೆ ಮುನ್ನಡಿ ಬರೆದಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ತೆಲಂಗಾಣ ಚುನಾವಣೆಯಲ್ಲಿ ಖಮ್ಮಂ ಜಿಲ್ಲೆಯ ಮಧಿರಾ ವಿಧಾನಸಭಾ ಕ್ಷೇತ್ರದಿಂದ 35,452 ಮತಗಳಿಂದ ಜಯಗಳಿಸಿದ ಭಟ್ಟಿ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಚೊಚ್ಚಲ ವಿಜಯವನ್ನು ದಾಖಲಿಸಿದ ನಂತರ ಇಂದು ಉಪನಾಯಕರಾಗಿ ಗುರುತಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





