Shaikh BIG TV NEWS, Hubballi
October 11, 2018
ದೇಶ-ವಿದೇಶ, ಸುದ್ದಿ
ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಶರತ್ಗುಂಡ್ ಬಾಲಾದ ಬಳಿ ಎನ್ಕೌಂಟರ್ ನಡೆಯುತ್ತಿದ್ದು, ಇಬ್ಬರು ಅಥವಾ ಮೂವರು ಉಗ್ರರು ಸೆರೆಯಾಗಿದ್ದಾರೆಂದು ತಿಳಿದುಬಂದಿದೆ. ಉಗ್ರನಾಗಿ ಬದಲಾದ ಆಲಿಘಡ್ ಮುಸ್ಲಿಂ ಯೂನಿವರ್ಸಿಟಿಯ ವಿದ್ಯಾರ್ಥಿ ಮನಾನ್ ವಾಣಿ ಕೂಡ ಸೆರೆಯಾಗಿರುವ ಉಗ್ರರಲ್ಲಿ ಒಬ್ಬನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಪ್ರದೇಶದಲ್ಲಿ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದ್ದು, ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಭದ್ರತಾ ಪಡೆಯ …
Read More »
Shaikh BIG TV NEWS, Hubballi
October 11, 2018
ದೇಶ-ವಿದೇಶ, ಸುದ್ದಿ
ಚಂಡೀಗಢ: ಕೊಲೆ ಹಾಗೂ ದೇಶ ದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿರುವ ಹರಿಯಾಣದ ಸ್ವಯಂ ಘೋಷಿತ ದೇವಮಾನವ, ಸತ್ಲೋಕ್ ಆಶ್ರಮದ ಮುಖ್ಯಸ್ಥ ಬಾಬಾ ರಾಮ್ಪಾಲ್ ಪ್ರಕರಣದ ತೀರ್ಪು ಇಂದು ಹೊರ ಬೀಳಲಿದೆ. ತಿಸಾರ್ ಕೋರ್ಟ್ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸಲಿದ್ದು, ಮುಂಜಾಗ್ರತಾ ಕೃಮವಾಗಿ ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್ನಿಂದ ತಿಸಾರ್ಗೆ ಹೋಗುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. 2006ರಲ್ಲಿ ಸತ್ಲೋಕ್ ಆಶ್ರಮದಲ್ಲಿ ನಡೆದ ಕೊಲೆ, ವಂಚನೆ ಕೇಸ್ಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತನಾಗಿ 2014 …
Read More »
Shaikh BIG TV NEWS, Hubballi
October 11, 2018
ಕರ್ನಾಟಕ, ಸುದ್ದಿ
ಮೈಸೂರು: ಜಾನಪದ ಕಲೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಮತ್ತೆ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ನಂತರ ವೇದಿಕೆ ಮುಂಭಾಗ ಆಸೀನರಾಗಿ, ಜಾನಪದ ಗಾಯನ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ವೀಕ್ಷಿಸಿದ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು. ತಮ್ಮ ಕಲೆಗೆ ಮುಖ್ಯಮಂತ್ರಿಗಳು ಇಷ್ಟು ಖುಷಿಪಟ್ಟಿದನ್ನು ನೋಡಿದ ಜಾನಪದ ಕಲಾವಿದರು, ಹರ್ಷಚಿತ್ರರಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು. ದಸರಾ ಮಹೋತ್ಸವದ ಅರಮನೆ ವೇದಿಕೆ …
Read More »
Shaikh BIG TV NEWS, Hubballi
October 11, 2018
ದೇಶ-ವಿದೇಶ, ಸುದ್ದಿ
ಸಿಡ್ನಿ: ನ್ಯೂ ಬ್ರಿಟನ್ ಪಪುವಾ ನ್ಯೂ ಗಿನಿಯಾ ದ್ವೀಪದಲ್ಲಿ ಗುರುವಾರ 7.0 ರಷ್ಟು ಭೂಕಂಪನ ಸಂಭವಿಸಿದೆ, ಇದು ಸುನಾಮಿ ಎಚ್ಚರಿಕೆ ನೀಡಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಕೆಲವು ತೀವ್ರತರವಾದ ಸುನಾಮಿ ಅಲೆಗಳು ಏರಿಕೆಯಾಗಬಹುದೆಂದು ವರದಿ ಮಾಡಿದೆ. ಪಿಎನ್ಜಿ ಮತ್ತು ಸೊಲೊಮನ್ ದ್ವೀಪಗಳ ತೀರದಲ್ಲಿ 0.3 ಮೀಟರುಗಳಿಗಿಂತಲೂ ಕಡಿಮೆಯಿರುವ ಸುನಾಮಿಯ ಅಲೆಗಳು ಏರಿಕೆಯಾಗುತ್ತವೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಚೇರಿಯ ವಕ್ತಾರರು ಯಾವುದೇ ರೀತಿಯ ಹಾನಿ ಇಲ್ಲ …
Read More »
Shaikh BIG TV NEWS, Hubballi
October 10, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಛೋಟಾ ಮುಂಬೈ ಅನ್ನೋ ಕುಖ್ಯಾತಿಯ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರ ಕೋಡಿ ಹರಿದಿದೆ. ಒಂದೇ ದಿನ ಇಬ್ಬರು ಯುವಕರು ಹೆಣವಾಗಿದಾರೆ. ಕ್ಷುಲ್ಲಕ ಕಾರಣಕ್ಕೆ ಒಬ್ಬನನ್ನ ಕೊಚ್ಚಿದ್ರೇ, ಹಳೇ ವೈಷಮ್ಯ ಇಟ್ಕೊಂಡು ಇನ್ನೊಬ್ಬನನ್ನ ರಸ್ತೆ ಅಪಘಾತ ಅಂತ ಸೀನ್ ಕ್ರಿಯೇಟ್ ಮಾಡಿ ಕತೆ ಮುಗಿಸಿದಾರ ಹುಬ್ಬಳ್ಳಿ ಹೂಬಳ್ಳಿಯಂತಿರ್ಕೇಕಲ್ವೇ.. ಆದ್ರೇ, ಇಲ್ಲಿ ನಿತ್ಯ ಬೆಳಗಾದ್ರೇ ಅಪರಾಧ ಕೃತ್ಯಗಳಿಂದ ಇದು ಕ್ರೈಮ್ ಸಿಟಿಯಾಗ್ತಿದೆಯೇನೋ ಅನಿಸದೋ ಇರಲ್ಲ. ಯಾಕಂದ್ರೇ, ಬಾಳಿ ಬದುಕ್ಬೇಕಿದ್ದ ಇಬ್ಬರು ಯುವಕರು ಒಂದೇ ದಿನ …
Read More »
Shaikh BIG TV NEWS, Hubballi
October 10, 2018
ದೇಶ-ವಿದೇಶ, ಸುದ್ದಿ
ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿರುವ ಹಿನ್ನಲೆಯಲ್ಲಿ ಅವರು ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ನವದೆಹಲಿ: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದಿರುವ ಹಿನ್ನಲೆಯಲ್ಲಿ ಅವರು ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಈಗ ಕೇಂದ್ರ ಸಚಿವ ಅಕ್ಬರ್ ಮೇಲೆ ಬಂದಿರುವ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ” ಕೇಂದ್ರ ಸಚಿವರು ಈ …
Read More »
Shaikh BIG TV NEWS, Hubballi
October 10, 2018
ಕರ್ನಾಟಕ, ಸುದ್ದಿ
ದಾವಣಗೆರೆ: ಮದ್ಯವ್ಯಸನಿ ಒಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿರೋ ಪ್ರಕರಣ ನಗರದ ಹದಡಿ ರೋಡ್ ಬಳಿ ನಡೆದಿದೆ. ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ರುದ್ರೇಶ್ ಎಂಬುವವರು ಮದ್ಯ ಸೇವನೆ ಮಾಡಿ, ಹೆಲ್ಮಟ್ ಧರಿಸದೆ ಗಾಡಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಅವರು ರುದ್ರೇಶ್ ಅವರ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. …
Read More »
Shaikh BIG TV NEWS, Hubballi
October 10, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಹೆಸರನ್ನೂ ಚಾರ್ಜ್ ಶೀಟ್ನಲ್ಲಿ ಸೇರಿಸಲಾಗಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ನಿರ್ವಹಣಾ ವಿಭಾಗದಲ್ಲಿ ಈ ಹಿಂದೆ ನಡೆದಿದೆ ಎನ್ನಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 31ರಂದು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಿರಾಗ್ ಪಟ್ನಾಯಕ್ ಎಂಬ ಆರೋಪಿಯನ್ನು ಬಂಧಿಸಿದ್ದರು. ತನಿಖೆಯ ನಂತರ ಇದೀಗ ಪೊಲೀಸರು ಪಟಿಯಾಲಾ ಕೋರ್ಟ್ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಗಮನಾರ್ಹವೆಂದರೆ, ಪ್ರಕರಣ …
Read More »
Shaikh BIG TV NEWS, Hubballi
October 10, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ರಫೇಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ದಾಳಿ ನಡೆಸುತ್ತಿರುವ ಹೊತ್ತಲ್ಲೇ, ಇದೀಗ ಸುಪ್ರೀಂ ಕೋರ್ಟ್ ರಫೇಲ್ ಒಪ್ಪಂದದ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದೆ. ಅಕ್ಟೋಬರ್ 29ರೊಳಗೆ ಸೀಲ್ ಮಾಡಿದ ಕವರ್ನಲ್ಲಿ ರಫೇಲ್ ಒಪ್ಪಂದದ ಮಾಹಿತಿ ನೀಡಬೇಕು ಎಂದು ಕೋರ್ಟ್ ಹೇಳಿದೆ. ಆದ್ರೆ ಜೆಟ್ಗಳ ಬೆಲೆ ಅಥವಾ ಸೂಕ್ತತೆ ಬಗ್ಗೆ ವಿವರಣೆಗೆ ಹೋಗಬೇಡಿ ಎಂದು ಸ್ಪಷ್ಟಪಡಿದಿದೆ. ನಾವು ಸರ್ಕಾರಕ್ಕೆ ನೋಟಿಸ್ ನೀಡುತ್ತಿಲ್ಲ. …
Read More »
Shaikh BIG TV NEWS, Hubballi
October 10, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 13 ರಂದು ಬೆಂಗಳೂರಿನ ಎಚ್ಎಎಲ್ ಗೆ ಭೇಟಿ ನೀಡಲಿದ್ದಾರೆ.ಆ ಮೂಲಕ ಈಗ ರಫೇಲ್ ಒಪ್ಪಂದಲ್ಲಿ ಎಚ್ಎಎಲ್ ನ್ನು ಯಾಕೆ ತಿರಸ್ಕರಿಸಲಾಯಿತು ಎನ್ನುವುದರ ಬಗ್ಗೆ ಗ್ರೌಂಡ್ ರಿಪೋರ್ಟ್ ಮೂಲಕ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ರಾಫೆಲ್ ಒಪ್ಪಂದದ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ರಾಹುಲ್ ಗಾಂಧಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ …
Read More »