Breaking News

ಸುದ್ದಿ

ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ; ಉಪಮುಖ್ಯಮಂತ್ರಿ ಭರವಸೆ..

ತುಮಕೂರು: ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ‌ ನಿರ್ಮಾಣವಾಗುತ್ತಿದ್ದು, ಇಲ್ಲಿನ ಕೈಗಾರಿಕೆಗಳಿಗೆ ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸ್ಥಳೀರಿಗೆ ಮೊದಲ ಆದ್ಯತೆ‌ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಕೋರಾ ಗ್ರಾಮ ಪಂಚಾಯತಿಯಲ್ಲಿ‌ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಂದ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಎಲ್ಲ ಗ್ರಾಮಗಳಲ್ಲಿ ರಸ್ತೆ, ದೇವಸ್ಥಾನ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ‌, ಶಿಥಿಲಗೊಂಡ ಶಾಲಾ ಕಟ್ಟಡ ಮರು ನಿರ್ಮಾಣ ಬಗ್ಗೆ ಪಟ್ಟಿ ಮಾಡಲು ಆಯಾ ಗ್ರಾಮ …

Read More »

ರಾಯ್ಬರೇಲಿ ಬಳಿ ಹಳಿ ತಪ್ಪಿದ ರೈಲು; 7 ಮಂದಿ ಸಾವು..

ನವದೆಹಲಿ: ಮಾಲ್ಡಾ ಟೌನ್ ನಿಂದ ದೆಹಲಿಗೆ ಬರುವ ಮಾರ್ಗದಲ್ಲಿ ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರಾಯ್ಬರೇಲಿಯ ಹರ್ಚಂದ್ಪುರ್ ರೈಲ್ವೆ ನಿಲ್ದಾಣದ ಬಳಿ ಬೆಳಿಗ್ಗೆ 6.05 ಕ್ಕೆ ಅಪಘಾತಕ್ಕೀಡಾಗಿದೆ. ಹರ್​ಚಂದ್ ರೈಲು ನಿಲ್ದಾಣ 50 ಮೀಟರ್​ ದೂರವಿರುವಾಗ ರೈಲಿನ ಇಂಜಿನ್​ ಹಾಗೂ ರೈಲಿನ ಆರು ಬೋಗಿಗಳು ಹಳಿತಪ್ಪಿವೆ. ಈ ಅವಘಡದಿಂದ ಏಳು ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಸ್ತುತ, ಅಪಘಾತದ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ. ಲಕ್ನೋ ಮತ್ತು ವಾರಣಾಸಿಯ ರಕ್ಷಣಾ …

Read More »

ನನ್ ಹೋರಾಟ ಸರ್ಕಾರದ ವಿರುದ್ಧ ಅಲ್ಲ ಅನ್ಯಾಯದ ವಿರುದ್ಧ- ಗೌಡರ ಫ್ಯಾಮಿಲಿ ಮೇಲೆ ಎ.ಮಂಜು ಗುಡುಗು

ಹಾಸನ ಬ್ರೇಕಿಂಗ್ ಲೋಕೋಪಯೋಗಿ ಸಚಿವ ಹೆಚ್.ಡಿ‌.ರೇವಣ್ಣ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪ ಅವರು ಸರ್ಕಾರಿ ಬೀಳು ಒತ್ತುವರಿ ಮಾಡಿರೋದು 54 ಎಕರೆಯಲ್ಲ, 69.19 ಎಕರೆ  ಹಾಸನ ತಾಲೂಕಿನ ಸೋಮನಹಳ್ಳಿ ಕಾವಲು ಬಳಿ ಅಕ್ರಮವಾಗಿ ಕಬಳಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಮಾಜಿ ಪ್ರಧಾನಿ‌ ಹೆಚ್ಡಿಡಿ ಕುಟುಂಬದ ವಿರುದ್ಧ ದೂರಿದ ಮಾಜಿ ಸಚಿವ ಎ.ಮಂಜು ಇಷ್ಟು ಜಮೀನನ್ನು ಪ್ರಜ್ವಲ್ ರೇವಣ್ಣ ಮತ್ತು ದೇವೇಗೌಡರ ಅತ್ತೆ ಹೆಸರಿಗೆ ಮಾಡಿಸಿ ಕೊಂಡಿದ್ದಾರೆ ಈ‌ ಸಂಬಂಧ ಸರಕಾರ …

Read More »

ಅ. ೧೨ ರಿಂದ ಮೂರು ದಿನ ಭಾರತೀಯ ಆಭರಣ ಉತ್ಸವ, ಮಾರಾಟ‌ ಮೇಳ.

ಹುಬ್ಬಳ್ಳಿಯಲ್ಲಿ ಅ.12ರಿಂದ ದ ಜ್ಯುವೆಲರಿ ಷೋ ಪ್ರದರ್ಶನ ಮತ್ತು ಮಾರಾಟ ಹುಬ್ಬಳ್ಳಿ: ಮುಂಬರಲಿರುವ ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮೆರಗು ನೀಡುವ ಹಿನ್ನೆಲೆಯಲ್ಲಿ ನಗರದಲ್ಲಿಯೇ ಮೊದಲ ಭಾರಿಗೆ ಭಾರತೀಯ ಒಡವೆಗಳ ಉತ್ಸವವನ್ನು ಇದೇ. ಅ.12ರಿಂದ 14ರ ವರಗೆ ಡೆನಿಸನ್ಸ್ ಹೋಟೆಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಗದೀಶ ಬಿ.ಎನ್. ತಿಳಿಸಿದರು. ನಗರದ ಡೆನಿಸನ್ಸ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಮೇಳದಲ್ಲಿ 25ಕ್ಕಿಂತಲೂ …

Read More »

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗೆಲುವು ಖಂಡಿತಾ- ಸಚಿವ ಆರ್. ವಿ ದೇಶಪಾಂಡೆ ವಿಶ್ವಾಸ

ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗನೇ ಆಗುತ್ತದೆ.ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ನಮ್ಮ ಆಶಯವೂ ಕೂಡ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಅರ್ಹತೆ ಇದ್ದಾಗ್ಯೂ ಸಚಿವ ಸ್ಥಾನ ಸಿಗದ್ದೆ ಇದಲ್ಲಿ ಅಸಮಾಧಾನಗಳು ಸಹಜ.ಆದ್ರೆ ಶಾಕರುಗಳು ಯಾವುದೇ ಅಸಮಾಧಾನ ಉಂಟಾಗದಂತೆ ಸಂಪುಟ ವಿಸ್ತರಣೆ ಆಗಲಿದೆ.ಹೈಕಮಾಂಡ್ ನಿರ್ಧಾರದಂತೆ ಸಚಿವ ಸಂಪುಟ ನಡೆಯುತ್ತದೆ ಎಂದರು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 130 ಕೋಟಿಗೂ …

Read More »

ಊಟಕ್ಕೆ ಹೋಗಿ ಬಡಿದಾಡಿಕೊಂಡರು, ವಿಕೋಪಕ್ಕೆ ತೆರಳಿ ತಲ್ವಾರನಿಂದಲೇ ವ್ಯಕ್ತಿಯ ಭೀಕರ ಹತ್ಯೆ..

ಹುಬ್ಬಳ್ಳಿಯ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ನಿಂದ ಹೊಡೆದು ಯುವಕನನ್ನು ಬರ್ಭರವಾಗಿ  ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ತಬಿಬ್ ಲ್ಯಾಂಡ್ ಬಳಿ ನಡೆದಿದೆ.  ಇಮ್ತೀಯಾಜ್ ಕಣವಿ (35) ಅಲಿಯಾಸ್ ಕಾಡತೂಸ್ ಕೊಲೆಯಾದ ವ್ಯಕ್ತಿ. ದಾವೂದ್ ನದಾಫ್ ಹಾಗೂ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಊಟಕ್ಕೆಂದು ಹೊರಗಡೆ ಬಂದಾಗ ಕ್ಷುಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ‌. ಜಗಳ ವಿಕೋಪಕ್ಕೆ ತಿರುಗಿ ದಾವೂಧ್ ನದಾಫ ಹಾಗೂ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದಾರೆ.  ಸ್ಥಳಕ್ಕೆ ಶಹರ …

Read More »

ರಾಜಸ್ತಾನದಲ್ಲಿ ಭಯ ಹುಟ್ಟಿಸಿದ 29 ಜಿಕಾ ವೈರಸ್ ಪ್ರಕರಣ..

ನವದೆಹಲಿ: ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಮಂಗಳವಾರ ಒಟ್ಟು 29 ಜೀಕಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದಾರೆ.ಜೀಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು   ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ “ಒಟ್ಟು 29 ಪೊಸಿಟಿವ್  ಪ್ರಕರಣಗಳು ಇಲ್ಲಿವೆ, 150-200 ತಂಡಗಳು ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಈಗಾಗಲೇ ಒಟ್ಟು 26,000 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಮತ್ತು ಎಲ್ಲಾ …

Read More »

ಅಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೇಕೆ ಸೇರುತ್ತಿಲ್ಲ?- ಸುಪ್ರೀಂಕೋರ್ಟ್ ಪ್ರಶ್ನೆ..

ನವದೆಹಲಿ: 2015 ರಲ್ಲಿ  ಅಲಹಾಬಾದ್ ಹೈಕೋರ್ಟ್ ಸರ್ಕಾರಿ ಅಧಿಕಾರಿಗಳು,ನ್ಯಾಯಾಧೀಶರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಳಿಸುವಂತೆ ತೀರ್ಪನ್ನು ನೀಡಿತ್ತು. ಅಲ್ಲದೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಈ ಕುರಿತಾಗಿ ನಿರ್ದೇಶನವನ್ನು ಕೋರ್ಟ್ ನೀಡಿತ್ತು.ಆದರೆ ಅದು ಸಮರ್ಪಕವಾಗಿ ಜಾರಿಗೆ ಬರದ ಹಿನ್ನಲೆಯಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ಈಗ ಇದನ್ನು ಪ್ರಶ್ನಿಸಲಾಗಿದೆ. ಈ ಕುರಿತಾಗಿ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಏಕೆ ಸೇರಿಸುತ್ತಿಲ್ಲ ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿ …

Read More »

ಕುಮಾರಸ್ವಾಮಿಗೆ ಮಾನ-ಮರ್ಯಾದೆ ಇದ್ರೇ ಎಸಿಬಿ ರದ್ದುಪಡಿಸಲಿ- ಎಸ್.ಆರ್ ಹಿರೇಮಠ‌‌ ಆಕ್ರೋಶದ ನುಡಿ

ಹುಬ್ಬಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿಯವರಿಗೇ ಏನಾದ್ರೂ ನಾಚಿಕೆ ಮಾನ-ಮರ್ಯಾದೆ ಇದ್ರೇ ಕೂಡಲೇ ಕೊಟ್ಟ ಮಾತಿನಂತೆಯೇ ಎಸಿಬಿಯನ್ನ ರದ್ದುಪಡಿಸ್ಪೇಕು ಅಂತ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಕಿಡಿಕಾರಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆಯೇ ಎಸಿಬಿ ರದ್ದುಗೊಳಿಸ್ಬೇಕು. ನ್ಯಾ. ಸಂತೋಷ ಹೆಗ್ಡೆ ವರದಿಯನ್ನ ಜಾರಿಗೆ ತರೋದಕ್ಕೆ ಎಸ್ಐಟಿಗೆ ಆದೇಶಿಸ್ಪೇಕು. ಲೋಕಾಯುಕ್ತವನ್ನ ಇನ್ನಷ್ಟು ಬಲಗೊಳಿಸ್ಬೇಕು. 2013-14ರಲ್ಲಿ  ನಡೆದ ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿ ಅಕ್ರವಾಗಿದೆ. ಬೇರೆ ಬೇರೆ ಕೋರ್ಟ್ …

Read More »

ಭಿಲಾಯಿ ಉಕ್ಕು ಘಟಕದಲ್ಲಿ ಸ್ಫೋಟ: 9 ಕಾರ್ಮಿಕರ ಸಜೀವ ದಹನ..

ರಾಯ್​ಪುರ (ಛತ್ತೀಸ್‍ಗಢ): ಇಲ್ಲಿನ ಭಿಲಾಯಿ ಉಕ್ಕು ಉತ್ಪಾದನಾ ಘಟಕದಲ್ಲಿ ಅನಿಲ ಕೊಳವೆ ಮಾರ್ಗದಲ್ಲಿ ಸ್ಫೋಟ ಸಂಭವಿಸಿದ್ದು, 9 ಮಂದಿ ಕಾರ್ಮಿಕರು ಅಸುನೀಗಿದ್ದಾರೆ. 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಭಿಲಾಯಿ ಪಟ್ಟಣದಲ್ಲಿರುವ ಕಲ್ಲಿದ್ದಲು ಕುಲುಮೆಯಲ್ಲಿ ಇಂದು ಮಧ್ಯಾಹ್ನ ಸ್ಫೋಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸರು ಮತ್ತು ಭಾರಿ ಸಂಖ್ಯೆಯಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 6 ಮಂದಿ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ಸ್ವಾಮ್ಯದ ಭಾರತೀಯ ಉಕ್ಕು …

Read More »