Breaking News

ಸುದ್ದಿ

ವಿಚಾರಣೆಗೆ ಗೈರಾಗಿ ಹಳೇ ಚಾಳಿ ಸ್ವಾಮಿ ನಿತ್ಯಾನಂದ

ರಾಮನಗರ: ರಾಸಲೀಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಬಿಡದಿ ನಿತ್ಯಾನಂದ ಸ್ವಾಮಿ ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದಾನೆ. ಕೋರ್ಟ್​ಗೆ ಹಾಜರಾಗದೇ ಮೇಲ್ಮನವಿ ಸಲ್ಲಿಸಿಕೊಂಡು ದಿನ ದೂಡುತ್ತಿದ್ದಾನೆ ಅಂತಾ ಸರ್ಕಾರಿ ಪರ ವಕೀಲ ವಡವಡಗಿ ಮಾಹಿತಿ ನೀಡಿದ್ದಾರೆ. ಕಳೆದ ಮೂರು ವಿಚಾರಣೆಗೆ ನಿತ್ಯಾನಂದ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಇನ್ನು ಹೈಕೋರ್ಟ್ ಆದೇಶದಂತೆ ರಾಮನಗರ ಜಿಲ್ಲಾ ಸತ್ರ ನ್ಯಾಯಲಯದಲ್ಲಿ ಇಂದು ವಿಚಾರಣೆ ನಡೆಯಬೇಕಿತ್ತು. ಆದ್ರೆ ನಿತ್ಯಾನಂದ ಸೇರಿದಂತೆ …

Read More »

ಮುಂದಿನ 3 ದಿನ ಒಂದೂವರೆ ಮೀಟರ್ ಎತ್ತರಕ್ಕೆ ಅಬ್ಬರಿಸಲಿವೆಯಂತೆ ಸಮುದ್ರದ

ಮಂಗಳೂರು:  ಸಮುದ್ರದ ಅಲೆಗಳು ಒಂದೂವರೆ ಮೀಟರ್ ಎತ್ತರಕ್ಕೆ ಅಬ್ಬರಿಸುವ ಸಾಧ್ಯತೆಯಿದೆ ಎಂದು ಭಾರತೀಯ ಸಾಗರ ಮಾಹಿತಿ ಕೇಂದ್ರ ಜಿಲ್ಲಾಡಳಿಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ, ಪೂರ್ವ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ. ಸಮುದ್ರ ತೀರದಲ್ಲಿ ಮೀನುಗಾರರು ಬೋಟ್ ಚಲಾಯಿಸದಂತೆ ಎಚ್ಚರಿಕೆ ನೀಡಲಾಗಿದೆ. ಹಾಗೂ ಬೀಚ್​ಗಳಲ್ಲಿ ಮನರಂಜನಾ ಆಟಗಳನ್ನು ರದ್ದುಪಡಿಸಲು ಸೂಚನೆ ನೀಡಲಾಗಿದೆ.

Read More »

ಗಂಗಾಂಬಿಕೆ ನೂತನ ಮೇಯರ್‌?: ಡಿಸಿಎಂ ಪರಮೇಶ್ವರ್‌ಗೆ ಮುಖಭಂಗ.

ಬೆಂಗಳೂರು: ಕುತೂಹಲ ಕೆರಳಿಸಿದ್ದ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿ ಆಯ್ಕೆ ಗೊಂದಲ ಕೊನೆಗೆ ಬಗೆಹರಿದಿದೆ. ಪಕ್ಷೇತರ ಪಾಲಿಕೆ ಸದಸ್ಯರು ಸೇರಿದಂತೆ, ರಾಮಲಿಂಗಾರೆಡ್ಡಿ ಬೆಂಬಲಿತ ಶಾಸಕರು ಗಂಗಾಂಬಿಕೆ ಪರ ಬ್ಯಾಟಿಂಗ್ ಮಾಡುತ್ತಿರುವುದರಿಂದ ಮೇಯರ್​ ಪಟ್ಟ ಶಾಸಕ ರಾಮಲಿಂಗ ರೆಡ್ಡಿ ಬೆಂಬಲಿತ ಜಯನಗರ ಕಾರ್ಪೊರೇಟರ್​ ಗಂಗಾಂಬಿಕೆಗೆ ಬಹುತೇಕ ಖಚಿತ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಸರನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಎರಡನೇ ಬಾರಿಯೂ ಶಾಂತಿನಗರ ವಾರ್ಡ್‌ ಕಾರ್ಪೋರೇಟರ್‌ …

Read More »

ಅಶೋಕ್‌ಗೆ ಶಾ ಕ್ಲಾಸ್‌: ಮೇಯರ್‌ ಎಲೆಕ್ಷನ್‌ನಿಂದ ಹಿಂದಕ್ಕೆ ಸರಿದ ಕಮಲ.

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣಾ ಅಖಾಡದಿಂದ ಬಿಜೆಪಿ ಹಿಂದೆ ಸರಿದಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಲಾಗಿದೆ. ಇದುವರೆಗೆ ಆಗಿರುವ ಮುಖಭಂಗವೇ ಸಾಕು. ಮೇಯರ್ ಚುನಾವಣೆಯಲ್ಲಿ ಈ ಹಿಂದೆ ಎರಡು ಬಾರಿ ಮುಖಭಂಗ ಅನುಭವಿಸಿದ್ದೀರಿ. ಜೊತೆಗೆ ರಾಜ್ಯದ ಚುಕ್ಕಾಣಿ ಹಿಡಿಯಲು ಹೋಗಿ ಪಕ್ಷದ ಮರ್ಯಾದೆ ಹಾಳಾಗಿದೆ. ಹೀಗಾಗಿ ಮೇಯರ್ ಗೋಜಿಗೆ ಹೋಗದಿದ್ದರೆ ಒಳಿತು. ಅಭ್ಯರ್ಥಿ ಕಣಕ್ಕಿಳಿಸಿ ನಿಮ್ಮ ಜೊತೆಗೆ ನಮ್ಮ ಮತ್ತು ಪಕ್ಷದ …

Read More »

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಗಿಣಿ ದ್ವಿವೇದಿ ನಿರ್ಧಾರ

ಬೆಂಗಳೂರು: ಸ್ಯಾಂಡಲ್’ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಕೆಲವು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿದ್ದು, ‘ಸರ್ಕಾರಿ ಶಾಲೆ ಉಳಿಸಿ’ ಆಂದೋಲನ ಆರಂಭಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರಿದ್ದರೂ, ಮೂಲಭೂತ ಸೌಕರ್ಯಗಳಿಲ್ಲದ ಹಿನ್ನೆಲೆಯಲ್ಲಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಹಿಂಜರಿಯುತ್ತಿದ್ದಾರೆ. ವಿಧ್ಯಾರ್ಥಿಗಳಿಗೆ ಕೂರಲು ಬೆಂಚಿಲ್ಲ, ಹಲವೆಡೆ ಶಾಲೆಗಳಲ್ಲಿ ಬೋರ್ಡೆ ಇಲ್ಲ. ಮತ್ತೊಂದೆಡೆ ಕೊಠಡಿಗಳೇ ಇಲ್ಲ. ಒಂದಲ ಎರಡಲ್ಲ, ಹಲವು …

Read More »

ಮುಕೇಶ್ ಅಂಬಾನಿ ಚಾಲಕನ ಸಂಬಳ ಎಷ್ಟು ಗೊತ್ತಾ?

ನವದೆಹಲಿ: ದೇಶದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಸಂಪತ್ತು ಕಳೆದ ಒಂದು ವರ್ಷದಲ್ಲಿ 300 ಕೋಟಿ ರೂಪಾಯಿ ಹೆಚ್ಚಾಗಿದೆ. ಇದನ್ನು ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ ಲಿಸ್ಟ್ 2018 ರಲ್ಲಿ ಬಹಿರಂಗಪಡಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ್ ಅಂಬಾನಿ ಸತತ 7 ನೇ ಬಾರಿಗೆ ಭಾರತದ ಅತ್ಯಂತ ಶ್ರೀಮಂತರಾಗಿ ಅಗ್ರ ಸ್ಥಾನ ಪಡೆದಿದ್ದಾರೆ. 3 ಲಕ್ಷ, 71 ಸಾವಿರ ಕೋಟಿಗಳ ಆಸ್ತಿಯೊಂದಿಗೆ ಮುಕೇಶ್ ಅಂಬಾನಿ ಕುಟುಂಬವು …

Read More »

ಇಲ್ಲಿ ಪೆಟ್ರೋಲ್ ಖರೀದಿಸಿದರೆ ಸಿಗಲಿದೆ 40ರೂ. ರಿಯಾಯಿತಿ, ಏನ್ ಮಾಡಬೇಕು ಗೊತ್ತಾ?

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಇದೆ. ನಿರಂತರವಾಗಿ ಅದರ ಬೆಲೆಯನ್ನು ಕಡಿಮೆ ಮಾಡಲು ಬೇಡಿಕೆ ಇದೆ. ಆದರೆ, ತೈಲ ಕಂಪೆನಿಗಳು ಸಾಮಾನ್ಯ ಮನುಷ್ಯನ ಮೇಲೆ ಭಾರವನ್ನು ಹೆಚ್ಚಿಸುತ್ತಿವೆ. ಅದೇ ಸಮಯದಲ್ಲಿ ಸರ್ಕಾರವು ಯಾವುದೇ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ, ಸಾಮಾನ್ಯ ಜನರಿಗೆ ಪರಿಹಾರವನ್ನು ಒದಗಿಸುತ್ತಾ, ಈ-ವ್ಯಾಲೆಟ್ ಕಂಪನಿಯು ಫೋನ್-ಪೇ ನಲ್ಲಿ ಬಂಪರ್ ಪ್ರಸ್ತಾಪವನ್ನು ತಂದಿದೆ. ಈ ಪ್ರಸ್ತಾಪದ ಅಡಿಯಲ್ಲಿ, ಪೆಟ್ರೋಲ್ ಮೇಲೆ 40 ರೂಪಾಯಿಗಳ ಕ್ಯಾಶ್ ಬ್ಯಾಕ್ …

Read More »

ವ್ಯಭಿಚಾರ ಕಾನೂನು ಅಸಂವಿಧಾನಿಕ,ಸುಪ್ರೀಂ ತೀರ್ಪು: ಸೆಕ್ಷನ್ 497 ಐಪಿಸಿ ..

ನವದೆಹಲಿ:  ಗುರುವಾರದಂದು ಐಪಿಸಿ ಸೆಕ್ಷನ್ 497 ನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಆ ಮೂಲಕ  ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಅತಿ ಹಳೆಯ ಕಾನೂನಾಗಿದ್ದ ಸೆಕ್ಷನ್ 497 ವ್ಯಭಿಚಾರವನ್ನು ಕಾನೂನು ಬಾಹಿರ ಎಂದು ಹೇಳುತ್ತಿದ್ದ ಕಾಯ್ದೆಗೆ ಈಗ ತೆರೆಬಿದ್ದಿದೆ. ಭಾರತದ ಮುಖ್ಯ ನ್ಯಾಯಾಧೀಶರಾದ ದಿಪಕ್ ಮಿಶ್ರಾ ಪ್ರಕಾರ, ವ್ಯಭಿಚಾರವು ಆತ್ಮಹತ್ಯೆಗೆ ತುತ್ತಾಗದ ಹೊರತು ಅಪರಾಧವಲ್ಲ. ಐಪಿಸಿಯಲ್ಲಿ ವ್ಯಭಿಚಾರ ಕಾನೂನನ್ನು ವ್ಯಾಖ್ಯಾನಿಸುವ ಸೆಕ್ಷನ್ 497 …

Read More »

ರಾಮಮಂದಿರ್ ವಿವಾದದ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ: ಅಯೋಧ್ಯೆ ರಾಮ ಮಂದಿರ ವಿವಾದವು ಭಾರತದಲ್ಲಿ ರಾಜಕೀಯ, ಐತಿಹಾಸಿಕ ಮತ್ತು ಸಾಮಾಜಿಕ-ಧಾರ್ಮಿಕ ಚರ್ಚೆಯ ಕೇಂದ್ರವಾಗಿದೆ. ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿರುವ ಅಯೋಧ್ಯಾ ನಗರವು ಈ ವಿವಾದದ ಕೇಂದ್ರ ಬಿಂದು. ಬಾಬ್ರಿ ಮಸೀದಿಯ ಇದ್ದ ಜಾಗದಲ್ಲಿ ಶ್ರೀರಾಮನು ಜನಿಸಿದ್ದು ಆದರೆ ಮಸೀದಿ ನಿರ್ಮಿಸಲು ಈ ಜಾಗದಲ್ಲಿನ  ಹಿಂದು ದೇವಾಲಯವನ್ನು ತೆರವುಗೊಳಿಸಲಾಗಿತ್ತು ಎಂದು ಎನ್ನುವ ವಾದವಿದೆ. ಡಿಸೆಂಬರ್ 6, 1992 ರಂದು ಬಾಬ್ರಿ ಮಸಿದಿಯನ್ನು ಧ್ವಂಸಗೊಳಿಸಿದ ಫಲವಾಗಿ ಅದು ಗಲಭೆಯಾಗಿ ಮಾರ್ಪಟ್ಟಿತು. ಇದಾದ …

Read More »

ಗಂಡ ಹೆಂಡತಿಗೆ ಮಾಲೀಕನಲ್ಲ, ಸ್ತ್ರೀ-ಪುರುಷ ಇಬ್ಬರೂ ಸಮಾನರು: ಸುಪ್ರೀಂಕೋರ್ಟ್..

ನವದೆಹಲಿ: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ. ಸೆಕ್ಷನ್ 497 ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ 150 ವರ್ಷಗಳ ಹಳೆಯ ಕಾನೂನನ್ನು ಅಸಾಂವಿಧಾನಿಕ ಎಂದಿರುವ ಕೋರ್ಟ್ ಗಂಡ ಹೆಂಡತಿಗೆ ಮಾಲೀಕನಲ್ಲ, ಸ್ತ್ರೀ-ಪುರುಷ ಇಬ್ಬರೂ ಸಮಾನರು ಎಂದು ಹೇಳಿದೆ. ಅನೈತಿಕ ಸಂಬಂಧದ ಕುರಿತು ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾನೂನಿನ ಪ್ರಕಾರ,  ಗಂಡನೇ ಎಲ್ಲದಕ್ಕೂ ಮುಖ್ಯಸ್ಥನಲ್ಲ, ಗಂಡ ಹೆಂಡತಿಗೆ ಮಾಲೀಕನಲ್ಲ. ಮಹಿಳೆ, ಪುರುಷ ಇಬ್ಬರೂ …

Read More »