Breaking News

ಅಶೋಕ್‌ಗೆ ಶಾ ಕ್ಲಾಸ್‌: ಮೇಯರ್‌ ಎಲೆಕ್ಷನ್‌ನಿಂದ ಹಿಂದಕ್ಕೆ ಸರಿದ ಕಮಲ.

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣಾ ಅಖಾಡದಿಂದ ಬಿಜೆಪಿ ಹಿಂದೆ ಸರಿದಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಲಾಗಿದೆ. ಇದುವರೆಗೆ ಆಗಿರುವ ಮುಖಭಂಗವೇ ಸಾಕು. ಮೇಯರ್ ಚುನಾವಣೆಯಲ್ಲಿ ಈ ಹಿಂದೆ ಎರಡು ಬಾರಿ ಮುಖಭಂಗ ಅನುಭವಿಸಿದ್ದೀರಿ. ಜೊತೆಗೆ ರಾಜ್ಯದ ಚುಕ್ಕಾಣಿ ಹಿಡಿಯಲು ಹೋಗಿ ಪಕ್ಷದ ಮರ್ಯಾದೆ ಹಾಳಾಗಿದೆ. ಹೀಗಾಗಿ ಮೇಯರ್ ಗೋಜಿಗೆ ಹೋಗದಿದ್ದರೆ ಒಳಿತು. ಅಭ್ಯರ್ಥಿ ಕಣಕ್ಕಿಳಿಸಿ ನಿಮ್ಮ ಜೊತೆಗೆ ನಮ್ಮ ಮತ್ತು ಪಕ್ಷದ ಮರ್ಯಾದೆ ಕೂಡಾ ಕಳೆಯಬೇಡಿ ಅಂತಾ ಆರ್.ಅಶೋಕ್​ಗೆ ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮೇಯರ್ ಪಟ್ಟಕ್ಕೆ ಅಭ್ಯರ್ಥಿಯನ್ನ ಘೋಷಿಸಿಲ್ಲ ಎನ್ನಲಾಗಿದೆ.

Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *