Breaking News

ಗಂಗಾಂಬಿಕೆ ನೂತನ ಮೇಯರ್‌?: ಡಿಸಿಎಂ ಪರಮೇಶ್ವರ್‌ಗೆ ಮುಖಭಂಗ.

ಬೆಂಗಳೂರು: ಕುತೂಹಲ ಕೆರಳಿಸಿದ್ದ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿ ಆಯ್ಕೆ ಗೊಂದಲ ಕೊನೆಗೆ ಬಗೆಹರಿದಿದೆ. ಪಕ್ಷೇತರ ಪಾಲಿಕೆ ಸದಸ್ಯರು ಸೇರಿದಂತೆ, ರಾಮಲಿಂಗಾರೆಡ್ಡಿ ಬೆಂಬಲಿತ ಶಾಸಕರು ಗಂಗಾಂಬಿಕೆ ಪರ ಬ್ಯಾಟಿಂಗ್ ಮಾಡುತ್ತಿರುವುದರಿಂದ ಮೇಯರ್​ ಪಟ್ಟ ಶಾಸಕ ರಾಮಲಿಂಗ ರೆಡ್ಡಿ ಬೆಂಬಲಿತ ಜಯನಗರ ಕಾರ್ಪೊರೇಟರ್​ ಗಂಗಾಂಬಿಕೆಗೆ ಬಹುತೇಕ ಖಚಿತ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಸರನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಎರಡನೇ ಬಾರಿಯೂ ಶಾಂತಿನಗರ ವಾರ್ಡ್‌ ಕಾರ್ಪೋರೇಟರ್‌ ಸೌಮ್ಯ ಶಿವಕುಮಾರ್‌ ಅವರಿಗೆ ಮೇಯರ್ ಸ್ಥಾನ ತಪ್ಪಿದೆ. ಇದರಿಂದ ಡಿಸಿಎಂ ಪರಮೇಶ್ವರ್​ಗೆ ಮುಖಭಂಗವಾಗಿದ್ದು, ಶಾಸಕ ರಾಮಲಿಂಗ ರೆಡ್ಡಿ ಮೇಲುಗೈ ಸಾಧಿಸಿದ್ದಾರೆ

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *