Breaking News

ಸುದ್ದಿ

ಯುವಕನಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳ ಗುಂಪು

ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಗರದ ಗ್ಲಾಸ್ ಹೌಸ್ ಬಳಿ ನಡೆದಿದೆ.  ವಾಶೀಮ್ ಎಂಬ ಯುವಕನೇ ಚಾಕುವಿನಿಂದ ಹಲ್ಲೆಗೊಳಗಾದ ಯುವಕನಾಗಿದ್ದು, ಗಾಯಾಳು ಯುವಕನನ್ನು ಚಿಕಿತ್ಸೆಗಾಗಿ  ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ದಾವೂದ್ ಸೇರಿದಂತೆ ಐದು ಜನರ ಗುಂಪು ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದ ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಘಟನೆ …

Read More »

ವಡಾಪಾವ್ ಖರೀದಿಸಿದ ಮಹಿಳೆಗೆ ಅದರಲ್ಲಿ ಕಂಡದ್ದೇನು ಗೊತ್ತೇ?

ಸೇಟ್ ಅಂಬರ್ ನಾಥ್ ಪ್ರದೇಶದಲ್ಲಿರುವ ವಡಾಪಾವ್ ಕೇಂದ್ರದಲ್ಲಿ ತಯಾರಾದ ವಡಾಪಾವ್’ನಲ್ಲಿ ಹಲ್ಲಿ ಇದ್ದುದು ಕಂಡು ಬಂದಿದೆ.    ಮುಂಬೈ: ಇಲ್ಲಿಗೆ ಸಮೀಪದ ಸೇಟ್ ಅಂಬರ್ ನಾಥ್ ಪ್ರದೇಶದಲ್ಲಿರುವ ವಡಾಪಾವ್ ಕೇಂದ್ರದಲ್ಲಿ ತಯಾರಾದ ವಡಾಪಾವ್’ನಲ್ಲಿ ಹಲ್ಲಿ ಇದ್ದುದು ಕಂಡು ಬಂದಿದೆ.  ಇಂದು ಬೆಳಿಗ್ಗೆ ಕಚೇರಿಗೆ ಹೋಗುವ ಸಮಯದಲ್ಲಿ ಮಹಿಳೆಯೊಬ್ಬರು ಪ್ರಸಿದ್ಧವಾದ ಬಬನ್ ವಡಾಪಾವ್ ಸೆಂಟರ್’ನಿಂದ ವಡಾಪಾವ್ ಖರೀದಿಸಿದ್ದಾರೆ. ನಂತರ ತಿನ್ನುವ ಮೊದಲು ಅದನ್ನು ಮುರಿದಿದ್ದಾರೆ. ಆ ಕೂಡಲೇ ಅವರಿಗೆ ಅದರಲ್ಲಿ ಕಂಡದ್ದು …

Read More »

ಹವಾಮಾನ ಇಲಾಖೆ 16 ರಾಜ್ಯಗಳ ಭಾರೀ ಮಳೆಯಾಗುವ ಸಾಧ್ಯತೆ

ನವದೆಹಲಿ ಹವಾಮಾನ ಇಲಾಖೆ ಬುಧವಾರ(ಆಗಸ್ಟ್ 22), ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ 16 ರಾಜ್ಯಗಳ ಕೆಲವು ಭಾಗಗಳಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇದೇ ಎಂದು ಹೇಳಿತ್ತು.  ನವದೆಹಲಿ: ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ ಮಳೆರಾಯ ತಂಪೆರೆದಿದ್ದಾನೆ.  ಕಳೆದ ಕೆಲವು ದಿನಗಳ ಮಳೆಯೇ ಇಲ್ಲದೆ ಬಿಸಿಲಿಗೆ ಬೇಗೆಗೆ ಬೇಸತ್ತಿದ್ದ ಜನರಿಗೆ ವರುಣನ ಸಿಂಚನದಿಂದ ಸಂತಸ ಉಂಟಾಗಿದೆ.  ದೆಹಲಿ, ಘಾಜಿಯಾಬಾದ್, ನೋಯ್ಡಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ …

Read More »

ಹಿರಿಯ ಪತ್ರಕರ್ತ ಕುಲ್ದಿಪ್ ನಯ್ಯರ್ ಇನ್ನಿಲ್ಲ..

ಕುಲ್ದೀಪ್ ನಯ್ಯರ್ ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ದಿ ಸ್ಟೇಟ್ಸ್ಮನ್ ಪತ್ರಿಕೆಯ ಸಂಪಾದಕರಾಗಿದ್ದರು. ನವದೆಹಲಿ: ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ಬುಧವಾರ (ಆಗಸ್ಟ್ 22) ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. 95 ವರ್ಷ ವಯಸ್ಸಿನ ನಯ್ಯರ್ ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಲೋಧಿ ರಸ್ತೆಯ ಸ್ಮಶಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುಲದೀಪ್ …

Read More »

ಕೆಎಸ್‌ಆರ್‌ಟಿಸಿಯ ವಿವಿಧ ನೇಮಕಾತಿಗಳ ಲಿಖಿತ ಪರೀಕ್ಷೆ ..

ಇದೇ ತಿಂಗಳ 25 ಮತ್ತು 26 ರಂದು ನಡೆಯಬೇಕಿದ್ದ, ಕೆಎಸ್‌ಆರ್‌ಟಿಸಿ ಇಲಾಖೆಯ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ.   ಬೆಂಗಳೂರು: ಕರಾವಳಿ ಪ್ರದೇಶ ಮತ್ತು ಕೊಡಗು ಜಿಲ್ಲೆಯ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ, ಜನರ ಪ್ರತಿನಿಧಿಗಳು ಮತ್ತು ಅಭ್ಯರ್ಥಿಗಳು ಮೇಲ್ವಿಚಾರಣೆ ಮತ್ತು ತಾಂತ್ರಿಕ ಪೋಸ್ಟ್ಗಳ ನೇಮಕಾತಿಗಾಗಿ ಆಗಸ್ಟ್ 25 ಮತ್ತು 26 ರಂದು ನಿಗದಿಪಡಿಸಿದ ಪರೀಕ್ಷೆಗಳನ್ನು ಮುಂದೂಡಲು ವಿನಂತಿಸಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಇಲಾಖೆಯ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ವಿನಂತಿಯನ್ನು ಪರಿಶೀಲಿಸಿದ ಸಾರಿಗೆ ಸಚಿವರು …

Read More »

ಬಿಜೆಪಿ ನಾಯಕರಿಗೆ ಅಧಿಕಾರದ ಹಪಾಹಪಿ, ರಾಜ್ಯದ ಅಭಿವೃದ್ಧಿ ಅವರಿಗೆ ಬೇಕಿಲ್’- ದಿನೇಶ ಗುಂಡೂರಾವ್ ವಾಗ್ದಾಳಿ

ಬಿಜೆಪಿಗೆ ಯಾವುದೇ ಧರ್ಮ, ನೀತಿ ಹಾಗೂ ನೈತಿಕತೆಯೇ ಇಲ್ಲ. ಬೇರೆ ಪಕ್ಷಗಳ ಶಾಸಕರಿಗೆ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ಸೆಳೆಯೋದೆ ಕೆಲಸವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ಅಧಿಕಾರ ಮುಖ್ಯವೇ ಹೊರತು, ಅಭಿವೃದ್ಧಿಯಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ವಾಗ್ದಾಳಿ ನಡೆಸಿದಾರೆ. ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ರ 25ನೇ ಪುಣ್ಯಸ್ಮರಣೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಮಾತನಾಡಿದ ಅವ್ರು, ಈ ಹಿಂದೆ ಬಹುಮತವಿಲ್ಲದಿದ್ದರು ಸರ್ಕಾರ ರಚನೆ ಮಾಡಲು ಹೋಗಿ ಬಿಜೆಪಿ …

Read More »

ಕೇರಳ ಪ್ರವಾಹ ಮಾನವ ನಿರ್ಮಿತ, ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್

ನವದೆಹಲಿ: ಕೇರಳದಲ್ಲಿನ ಪ್ರವಾಹ ಮಾನವ ನಿರ್ಮಿತ ಎಂದು ಕಾಂಗ್ರೆಸ್ ಆರೋಪಿಸಿದೆ.ಅಲ್ಲದೆ ಇಲ್ಲಿನ ಎಡ ಸರಕಾರ ಅಣೆಕಟ್ಟುಗಳ ನಿರ್ವಹಣೆಯಲ್ಲಿ ಎಡವಿದ ಕಾರಣ ಈ ಭೀಕರ ಪ್ರವಾಹ ಉಂಟಾಗಿ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ತಿಳಿಸಿದೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿಠಳಾ ಕೇರಳದಲ್ಲಿನ ಪ್ರವಾಹ ಮಾನವ ನಿರ್ಮಿತವಾಗಿದ್ದು ಆದ್ದರಿಂದ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಆದರೆ ಕೇರಳದ ಅಣೆಕಟ್ಟುಗಳನ್ನು ನಿರ್ವಹಿಸುವ ಕೇರಳ ರಾಜ್ಯ ವಿದ್ಯುತ್ …

Read More »

ಕೇರಳಕ್ಕೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದ ಯೋಗಿ ಆದಿತ್ಯನಾಥ್…

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇರಳದ ಪ್ರವಾಹ ಪೀಡಿತ ಜನರಿಗೆ ಹೆಚ್ಚಿನ  ನೆರವು ನೀಡುವ ಭರವಸೆ ನೀಡಿದ್ದಾರೆ. ಲಕ್ನೋದಲ್ಲಿನ ಸಮಾರಂಭವೊಂದರಲ್ಲಿ ಮಾತನಾಡಿದ ಯೋಗಿ,”ಈ ಕ್ಷಣದಲ್ಲಿ ಇಡೀ ದೇಶವು ಕೇರಳ ರಾಜ್ಯದೊಂದಿಗೆ ನಿಂತಿದೆ ನಾವು ತಿನ್ನುವ ಮತ್ತು ಕುಡಿಯುವ ನೀರನ್ನು ಒಳಗೊಂಡಂತೆ 7 ಮಿಲಿಯನ್ ಟನ್ ವಸ್ತುಗಳನ್ನೊಳಗೊಂಡ 25 ಟ್ರಕ್ಗಳನ್ನು ಕಳುಹಿಸುತ್ತೇವೆ ಅವು  ವಾಯುಪಡೆಯಿಂದ ತಿರುವನಂತಪುರಕ್ಕೆ ತಲುಪಿಸಲಾಗುತ್ತದೆ.”ಎಂದು ಅವರು ತಿಳಿಸಿದ್ದಾರೆ.  ಇದೇ ಸಂದರ್ಭದಲ್ಲಿ ಪ್ರವಾಹದ ವಿಚಾರವಾಗಿ ತುರ್ತುಕ್ರಮ ಕೈಗೊಂಡ ಪ್ರಧಾನಿ …

Read More »

ಶಿಥಿಲಗೊಂಡ ಶಾಲಾ ಕಟ್ಟಡಗಳು:ಶಿಕ್ಷಣ ಇಲಾಖೆ ವಿರುದ್ಧ ಲೋಕಾಯುಕ್ತರಿಂದ ಸುಮೊಟೊ ಪ್ರಕರಣ ದಾಖಲು..

ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಬೆಂಗಳೂರು:ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿನ ಎರಡು ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಕ್ಕೆ  ಸಂಬಂಧಿಸಿದಂತೆ  ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅರಕೆರೆ ಗ್ರಾಮದ ಶಾಲೆ ಮತ್ತು   ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿನ ಮುನ್ಸಿಪಲ್  ಪ್ರೌಢಶಾಲೆಯ ಶಿಥಿಲಗೊಂಡ ಕಟ್ಟಡಗಳ ಬಗ್ಗೆ ಪತ್ರಿಕೆಯೊಂದರ ವರದಿ ಪ್ರಕಟಗೊಂಡ ನಂತರ ಲೋಕಾಯುಕ್ತರು ಈ …

Read More »

ಗೋವಾ ಸರ್ಕಾರಿ ಅಕೌಂಟೆಂಟ್‌ ಪರೀಕ್ಷೆ ಬರೆದ ಎಲ್ಲಾ 8,000 ಅಭ್ಯರ್ಥಿಗಳೂ ಫೇಲ್‌..!

ಐದು ಗಂಟೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಇಂಗ್ಲೀಷ್‌ ಮತ್ತು ಲೆಕ್ಕಶಾಸ್ತ್ರದ ಕುರಿತು 100 ಅಂಕಗಳಿಗೆ ಪ್ರಶ್ನೆಗಳನ್ನು ನೀಡಲಾಗಿದೆ.   ಪಣಜಿ: ಗೋವಾ ಸರ್ಕಾರ 80 ಅಕೌಂಟೆಂಟ್‌ ಹುದ್ದೆಗಳ ನೇಮಕಾತಿಗಾಗಿ ಈ ವರ್ಷ ಜನವರಿ 7 ರಂದು ನಡೆಸಿದ ಪರೀಕ್ಷೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 8,000 ಅಭ್ಯರ್ಥಿಗಳೂ ಅನುತ್ತೀರ್ಣರಾಗಿದ್ದಾರೆ ಎಂದು  ಗೋವಾದ ಆಕೌಂಟ್ಸ್‌ ಡೈರೆಕ್ಟರ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಗೋವಾ ಸರ್ಕಾರ 80 ಅಕೌಂಟೆಂಟ್‌ ಹುದ್ದೆಗಳ ನೇಮಕಾತಿ ಗಾಗಿ ಪರೀಕ್ಷೆ ನಡೆಸಿತ್ತು. ಪದವೀಧರರಿಗಾಗಿ ಈ ಪರೀಕ್ಷೆ …

Read More »