Breaking News

ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯ ಅರ್ಜಿಗೆ ಕೊನೆ ದಿನ ನೀರ್ಧಾರ

ಕುಂದಗೋಳ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಎಲೆಕ್ನಿಷಿಯನ್ ಕಿಟ್, ರಸ್ತೆ ಕಾಮಗಾರಿ ಮಂಡಳಿಯಿಂದ ಕಾರ್ಮಿಕರಿಗೆ ನೀಡಲು ಒದಗಿ ಬಂದಿವೆ.

ಪ್ರಸ್ತುತ ವರ್ಷ ಕಿಟ್‌ಗಳನ್ನು ಪಡೆಯಬೇಕಾದ ಅರ್ಹ ನೊಂದಾಯಿತ ಕಟ್ಟಡ ಕಾರ್ಮಿಕರು ಸಲ್ಲಿಸಬೇಕಾದ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು. ನವೀಕರಣಗೊಂಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಈ ಹಿಂದೆ ಕಿಟ್‌ಗಳನ್ನು ಪಡೆದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು.

ಈ ಎಲ್ಲಾ ದಾಖಲಾತಿಯೊಂದಿಗೆ ಹಿರಿಯ ಕಾರ್ಮಿಕ ನಿರೀಕ್ಷಕರು 4ನೇ ವೃತ್ತ, ಹುಬ್ಬಳ್ಳಿ (ಕುಂದಗೋಳ) ಕ್ಯಾಲಕೊಂಡ್ ಬಿಲ್ಡಿಂಗ್, ಕರ್ನಾಟಕ ಬ್ಯಾಂಕ್ ಹತ್ತಿರ, ಕುಂದಗೋಳ ಈ ಕಚೇರಿಗೆ ಆಗಷ್ಟ 19ರ ಒಳಗೆ ಅರ್ಜಿ ಸಲ್ಲಿಸಬೇಕು. ಅನಂತರ ಬಂದ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ ಮತ್ತು ಬಂದಂತಹ ಅರ್ಜಿಗಳಲ್ಲಿ ನಿಯಮಾನಸಾರ ಮತ್ತು ಜೇಷ್ಠತೆ ಅನುಸಾರ ಹಂಚಿಕೆ ಮಾಡಲಾಗುವುದು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *