Breaking News

ಸುದ್ದಿ

ಬುಧವಾರದ ರಾಶಿಫಲ

ಮೇಷ: ಇಂದು, ಮತ್ತೊಂದು ಒತ್ತಡದ ದಿನ. ನೀವು ಕಛೇರಿಯಲ್ಲಿ ಮತ್ತು ಮನೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಜ್ಜಾಗಿದ್ದೀರಿ. ನಿಮ್ಮ ಮೇಲಧಿಕಾರಿಗಳು ನಿಮಗೆ ಕೆಲ ರಿಯಾಯಿತಿಗಳನ್ನು ನೀಡಬಹುದು, ಮತ್ತು ಇದು ವಿಷಯಗಳನ್ನು ಕೊಂಚ ಸುಲಭಗೊಳಿಸುತ್ತದೆ. ನೀವು ಹಿರಿಯರಿಂದ ಮೌಲ್ಯಯುತ ಮಾರ್ಗದರ್ಶನ ಪಡೆಯುತ್ತೀರಿ.ವೃಷಭ: ಇಂದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆ ಇದೆ. ಆದರೆ ಈ ಪ್ರಗತಿ ನೀವು ನಿರೀಕ್ಷಿಸಿದ ದಿಕ್ಕಿನಲ್ಲಿ ಇಲ್ಲ. ಹಣಕಾಸಿನ ಅವಕಾಶಗಳು ಮತ್ತು ಯಶಸ್ಸು ನಿಮ್ಮ ಬಾಗಿಲು ತಟ್ಟುತ್ತವೆ. ನೀವು ಭೌತಿಕ …

Read More »

ಮೈ ಜುಮ್ ಎನಿಸುವ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ನಡುವಿನ ಫೈಟಿಂಗ್ ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆ

ಆನೇಕಲ್: ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು ಈ ಫೈಟಿಂಗ್ ನ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರಾಣಿ ಪ್ರಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹೌದು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು ನಿನ್ನೇ ಸಂಜೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.ಇದನ್ನು ಅಧಿಕೃತವಾಗಿ ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಪೇಜ್ ನಲ್ಲಿ ಪ್ರಕಟ …

Read More »

ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆ ತೆರೆದ ಭಾರತದ ಯಶಸ್ವಿ ಬ್ಯಾಡ್ಮಿಂಟನ್​ ಕೋಚ್​ ಪುಲ್ಲೇಲಾ ಗೋಪಿಚಂದ್

ಹೈದರಾಬಾದ್​: ಮಾಜಿ ಶೆಟ್ಲರ್​ ಹಾಗೂ ಭಾರತದ ಯಶಸ್ವಿ ಬ್ಯಾಡ್ಮಿಂಟನ್​ ಕೋಚ್​ ಪುಲ್ಲೇಲಾ ಗೋಪಿಚಂದ್ ಗಾಡಿಯಂ ಸ್ಪೋರ್ಟೋಪಿಯಾ ಎಂಬ​ ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆಯನ್ನು 18 ಎಕರೆ ಪ್ರದೇಶದಲ್ಲಿ ತೆರೆಯುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದಾರೆ.ಕ್ರೀಡೆ ಮಕ್ಕಳಲ್ಲಿ ಶಿಸ್ತು ಕಲಿಸುವುದರ ಜೊತೆಗೆ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಗೋಪಿಚಂದ್​ರ ಈ ಕ್ರೀಡಾ ಅಕಾಡೆಮಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಮಹತ್ವ ನೀಡಿ ವಿಶ್ವಮಟ್ಟದ ಕ್ರೀಡಾಪಟುಗಳನ್ನು ತಯಾರು …

Read More »

ಸಿದ್ದರಾಮಯ್ಯ ಹುಟ್ಟು ಹಬ್ಬದ ಪ್ರಯುಕ್ತ ಸಂತ್ರಸ್ತರಿಗೆ ಊಟ, ಔಷಧಿ ಸೇರಿ ದಿನ ಬಳಕೆ ವಸ್ತುಗಳ ವಿತರಣೆ

ಹುಬ್ಬಳ್ಳಿ: ಆಧುನಿಕ ದೇವರಾಜ ಅರಸು, ಹಿಂದುಳಿದ ವರ್ಗದ ಚಾಂಪಿಯನ್, ಕರ್ನಾಟಕವನ್ನು ಹಸಿವು‌ಮುಕ್ತ ರಾಜ್ಯ ಮಾಡಿದ ನೇತಾರ ಎಂದೇ ಹೆಸರುವಾಸಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ೭೨ ವಸಂತಕ್ಕೆ ಕಾಲಿರಿಸಿದ್ದಾರೆ. ಆದರೆ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ನೆರೆಯಿಂದ ಜನ ತೊಂದರೆಗೀಡಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರ ಹುಬ್ಬಳ್ಳಿಯ ಅಭಿಮಾನಿಗಳುಜನಾನುರಾಗಿಯಾದ ಸಿದ್ದರಾಮಯ್ಯ ಅವರ ಬರ್ತ್ ಡೇ ಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಬಾಗಲಕೋಟೆಯ ನೆರೆ ಪೀಡಿತ ಗ್ರಾಮ ಕೊಣ್ಣೂರಿಗೆ ತೆರೆಳಿ ಸಂತ್ರಸ್ತರಿಗೆ‌ ನೆರವಾಗಿದ್ದಾರೆ. ಊಟ, ಔಷಧಿ, ಬಟ್ಟೆ, ಹಾಸಿಗೆ …

Read More »

ಉತ್ತರ ಕರ್ನಾಟಕದಲ್ಲಿ ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯಬೇಕಿದೆ: ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೊಡಗಿನಲ್ಲಿ ಆದಂತಹ ಸ್ಥಿತಿ ಈಗ ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾಗಿದ್ದು, ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.ನಗರದ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು, ನೆರೆ ಪ್ರವಾಹದಿಂದ ಮನೆ, ಶಾಲೆ, ರಸ್ತೆ, ಸೇತುವೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು 1.5 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದು, ಸರ್ಕಾರ ಮೂಲ ಸೌಕರ್ಯ ಸೌಲಭ್ಯಗಳಿಗೆ ಆದ್ಯತೆ ಕೊಟ್ಟು ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.ದಾನಿಗಳಿಂದಲೂ ಉತ್ತಮ …

Read More »

ಉತ್ತರ ಕರ್ನಾಟಕದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಜೆಡಿಎಸ್ ಮುಖಂಡ ಎನ್.ಹೆಚ್.ಕೋನರೆಡ್ಡಿ ಆಗ್ರಹ.

ಹುಬ್ಬಳ್ಳಿ: ನೆರೆ ಹಾವಳಿಗೆ ಒಳಗಾದ ಉತ್ತರ ಕರ್ನಾಟಕ ಪ್ರದೇಶಗಳಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಜೆಡಿಎಸ್ ಮುಖಂಡ ಎನ್.ಹೆಚ್.ಕೋನರೆಡ್ಡಿ ಆಗ್ರಹಿಸಿದರು.ಮಳೆಯಿಂದಾಗಿ ಹಾನಿಯಾದ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿ ನಂತರ ಮಾತನಾಡಿದ ಅವರು, ಒಂದು ವಾರದಿಂದ ಸುರಿದ ಮಳೆಗೆ ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಳ್ನಾವರ ತಾಲೂಕುಗಳಲ್ಲಿ ಬಹಳಷ್ಟು ಹಾನಿಯಾಗಿದೆ. ಜನ ತೊಂದರೆಗೀಡಾಗಿರುವ ಹಿನ್ನೆಲೆ ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು …

Read More »

ಮಾಧ್ಯಮಗಳಲ್ಲಿ ನನ್ನ ಕುರಿತು ಆಗುವ ಟ್ರೋಲ್ ಗಳಿಗೆ ಜಗ್ಗುವದಿಲ್ಲ: ರೇಣುಕಾಚಾರ್ಯ ಕಿಡಿ

ದಾವಣಗೆರೆ; ಕಸ ಕೊಟ್ಟರು ಸಹ ರಸ ಮಾಡಿಕೊಂಡು ಕುಡಿಯೋ ಶಕ್ತಿ‌ ನನಗಿದೆ, ನನ್ನ ಬಗ್ಗೆ ಎಷ್ಟೆ ಟ್ರೋಲ್ ಮಾಡಿದರೂ ಸಹ ನಾನು ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಅನಾರೋಗ್ಯವಿದ್ದರು ಸಹ ಬೆಳಿಗ್ಗೆಯಿಂದ ಎಡೆಬಿಡದೇ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ‌ ನೀಡುತ್ತಿದ್ದೇನೆ, ಆದರೆ ಕೊನೆಯಲ್ಲಿ ಇಳಿವಯಸ್ಸಿನ ವ್ಯಕ್ತಿ ದೋಣಿ ಚಲಾಯಿಸುತ್ತಿದ್ದರು ನಾನು ಸಹ ದೋಣಿ ಚಲಾಯಿಸೋಣ …

Read More »

ಮಂಡ್ಯ ಹೇಮಾವತಿ ನೆರೆ ಸಂತ್ರಸ್ತ ಸ್ಥಳಗಳಿಗೆ ಶಾಸಕ ನಾರಾಯಣಗೌಡ ಭೇಟಿ ಪರಿಸ್ಥಿತಿಯ ಅವಲೋಕನ

ಮಂಡ್ಯ: ನೆರೆ ಪರಿಸ್ಥಿತಿ ಉಂಟಾಗಿರುವಹೇಮಾವತಿ ನದಿಯ ನೆರೆ ಪೀಡಿತ ಮಡುವಿನಕೋಡಿ, ಮಂಡ್ಯ ಜಿಲ್ಲೆಯ .ಕೆ.ಆರ್.ಪೇಟೆ. ಪಟ್ಟಣದ ಅಕ್ಕಿಹೆಬ್ಬಾಳು, ಚಿಕ್ಕಮಂದಗೆರೆ, ಮಂದಗೆರೆ, ಗೊಂದಿಹಳ್ಳಿ ಗ್ರಾಮಗಳಿಗೆ ಇಂದು ಶಾಸಕ ನಾರಾಯಣಗೌಡ ಅವರು ಭೇಟಿ ನೀಡಿ ಸಂತ್ರಸ್ತ ರೈತರ ಅಹವಾಲುಗಳನ್ನು ಆಲಿಸಿದರು.ಚಿಕ್ಕಮಂದಗೆರೆ ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಗೋಡೆ ಬಿದ್ದಿರುವ ನಾಗರಾಜು ಅವರ ಮನೆ, ಮಡುವಿನಕೋಡಿ ಗ್ರಾಮದಲ್ಲಿ ಒಡೆದ ನಾಲೆ, ಗೊಂಧಿಹಳ್ಳಿಯಲ್ಲಿ ಭೂಕುಸಿತವಾಗಿರುವ ಸೇತುವೆಯನ್ನು ಅನರ್ಹ ಶಾಸಕ ನಾರಾಯಣಗೌಡ ವೀಕ್ಷಿಸಿದರು.ಅಧಿಕಾರಿಗಳು ಶೀಘ್ರವಾಗಿ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು …

Read More »

ಮಂಡ್ಯದ ಮೈಸೂರು ದೇವರಾಜ ಮಾರುಕಟ್ಟೆಯಲ್ಲಿ ಏಕಾಏಕಿ ಬೆಂಕಿ

ಮಂಡ್ಯ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿ ಸುಮಾರು 10 ಕ್ಕೂ ಹೆಚ್ಚು ಮಳಿಗೆಗಳು ಬೆಂಕಿಗಾಗುತಿಯಾದ ಘಟನೆ ಇಲ್ಲಿನ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದೆ.ಸುಮಾರು 100 ವರ್ಷಗಳ ಇತಿಹಾಸವಿರುವ ಮೈಸೂರಿನ ದೇವರಾಜ ಮಾರುಕಟ್ಟೆಗೆ ಇಂದು ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದಿದೆ.ಗದ್ದಿಗೆ ಅಂಗಡಿ ಸೇರಿ ಹೂವಿನ ಅಂಗಡಿಗಳು ಹಾಗೂ ಹತ್ತಕ್ಕೂ ಹೆಚ್ಚು ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿ ಹೊತ್ತಿಕೊಂಡ ತಕ್ಷಣ ಮಾರುಕಟ್ಟೆಯಲ್ಲಿ ಜನರು ಚದುರಲಾರಂಭಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.ದಟ್ಟ ಹೊಗೆಯಿಂದ …

Read More »

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಡಿ.ಕೆ.ಶಿ. ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳ ವಿತರಣೆ.

ಹುಬ್ಬಳ್ಳಿ:ಮಳೆಯಿಂದ ಹಾನಿಗೊಳಗಾದ ಹಳೇ ಹುಬ್ಬಳ್ಳಿ, ಗೌಸಿಯಾ ಗಲ್ಲಿ, ಆನಂದ ನಗರ, ಮುಲ್ಲಾನಗರ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನ ವಿತರಿಸಿದ್ದಾರೆ.ಸರ್ಕಾರದಿಂದ ಪರಿಹಾರ ಒದಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತರ ಸಮಸ್ಯೆ ಆಲಿಸಿ, ಅಕ್ಕಿ, ಎಣ್ಣೆ, ಕಾಳುಗಳು, ಹಾಸಿಗೆ ನೀಡಿದರು. ಅಲ್ಲದೇ, ಸರ್ಕಾರ ಆದಷ್ಟು ಬೇಗ ಪರಿಹಾರ ನೀಡುತ್ತೆವೆ ಎಂದು ಭರವಸೆ ಕೊಟ್ಟರು. ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಡಿಕೆಶಿಗೆ ಸಾಥ್​ ನೀಡಿದರು.

Read More »