ಹೈದರಾಬಾದ್: ಮಾಜಿ ಶೆಟ್ಲರ್ ಹಾಗೂ ಭಾರತದ ಯಶಸ್ವಿ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಗಾಡಿಯಂ ಸ್ಪೋರ್ಟೋಪಿಯಾ ಎಂಬ ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆಯನ್ನು 18 ಎಕರೆ ಪ್ರದೇಶದಲ್ಲಿ ತೆರೆಯುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದಾರೆ.ಕ್ರೀಡೆ ಮಕ್ಕಳಲ್ಲಿ ಶಿಸ್ತು ಕಲಿಸುವುದರ ಜೊತೆಗೆ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಗೋಪಿಚಂದ್ರ ಈ ಕ್ರೀಡಾ ಅಕಾಡೆಮಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಮಹತ್ವ ನೀಡಿ ವಿಶ್ವಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಈ ಪ್ರಯತ್ನಕ್ಕೆ ಬರೋಬ್ಬರಿ 180 ಕೋಟಿ ಹಣ ಹೂಡಿಕೆ ಮಾಡಲಾಗಿದೆ. 45 ಕೋಟಿ ರೂಪಾಯಿ ಕಟ್ಟಡ ನಿರ್ಮಾಣಕ್ಕೆ ಖರ್ಚಾಗಿದೆ. ಈ ಅಕಾಡೆಮಿಯಲ್ಲಿ 25ಕ್ಕೂ ಹೆಚ್ಚು ಕ್ರೀಡೆಗಳಿಗೆ ಕ್ರೀಡಾ ಸಲಕರಣೆಗಳನ್ನು ಸೌಲಭ್ಯ ಒದಗಿಸಲಾಗಿದೆ. ಒಲಿಂಪಿಕ್ ಕ್ರೀಡಾಕೂಟದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗಾಗಿ 18 ಎಕರೆ ವಿಸ್ತೀರ್ಣದಲ್ಲಿ ಈ ಆಕಾಡೆಮಿ ನಿರ್ಮಿಸಲಾಗಿದೆ.ಈ ಕ್ರೀಡಾ ಶಾಲೆಯಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಟೆನ್ನಿಸ್, ಫುಟ್ಬಾಲ್, ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಸ್ಕ್ವಾಸ್, ಥ್ರೋ ಬಾಲ್, ಕ್ರಿಕೆಟ್, ಜಿಮ್ನಾಸ್ಟಿಕ್, ಬಾಕ್ಸಿಂಗ್,ಬಿಲಿಯರ್ಡ್ಸ್-ಸ್ನೂಕರ್, ಹಾಕಿ, ಈಕ್ವೆಸ್ಟ್ರಿಯನ್, ಸ್ಕೇಟಿಂಗ್, ಜೂಡೋ, ಟಿಕ್ವಾಂಡೋ, ಕರಾಟೆ, ಶೂಟಿಂಗ್, ಆರ್ಚರಿ, ಕುಸ್ತಿ, ಫೆಂಚಿಂಗ್, ಕಬಡ್ಡಿ ಹಾಗೂ ಯೋಗದ ಬಗ್ಗೆ ತರಬೇತಿ ನೀಡಲಾಗುತ್ತದೆ.ವಿವಿಧ ಕ್ರೀಡೆಗಳಲ್ಲಿ ಆಸಕ್ತಿಯುಳ್ಳ 2000ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಈ ಮೂಲಕ ಭಾರತದ ಕ್ರೀಡಾಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಈ ಪ್ರಾಜೆಕ್ಟ್ನಲ್ಲಿ ಒಲಿಂಪಿಕ್ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳು ಹಾಗೂ ಶ್ರೇಷ್ಠ ಕೋಚ್ಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





