Breaking News

ಸುದ್ದಿ

ಬಕ್ರೀದ್ ಶಾಂತಿ ಸಮಾನತೆ-ಸೌಹಾರ್ದತೆಯ ಸಂದೇಶ ಸಾರುವ ಹಬ್ಬ

ಚಿಂತಾಮಣಿ: ನಗರದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ 9 ಬೆಳಗ್ಗೆ ಗಂಟೆಗೆ ಜಾಮಿಯಾ ಮಸೀದ್ ಅಹಲೇ ಸುನ್ನತುಲ್ ,ಎಲ್ಲಾ ಮುಸ್ಲಿಂ ಬಾಂಧವರು ಒಗ್ಗೂಡಿ ಬಾಗೇಪಲ್ಲಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಈದ್ ನಮಾಜ್ ಮತ್ತು ಖುತುಬಾ ಪಾರಾಯಣ ಮಾಡಿದರು .ನಂತರ ಜಾಮಿಯಾ ಮಸೀದ್ ಅಹಲೆ ಸುನ್ನತ್ ಉಲ್ ಜಮಾತ್ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಹಕೀಮ್ ರಜ್ವಿ ಭಾಷಣ ಮಾಡಿ ಮಾತನಾಡಿದ ಅವರು ಬಕ್ರೀದ್ ಅನ್ನು ಈದ್-ಅಲ್-ಅದಾ ಎ೦ದೂ ಕರೆಯುತ್ತಾರೆ. ಬಲಿದಾನ ಅಥವಾ …

Read More »

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮುಳುಗಡೆ.

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮುಳುಗಡೆಯಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಮಂಡ್ಯ ಪಟ್ಟಣದ ಶ್ರೀರಂಗಪಟ್ಟಣ ಮತ್ತು ರಸ್ತೆಗಳು ಕಣ್ಣಿಗೆ ಕಾಣದೇ ಮಾಯವಾಗಿದೆ.ಕೆ.ಆರ್. ಎಸ್ . ಅಣೆಕಟ್ಟಿನ ನೀರು ಒಳಹರಿವನ್ನು ಬಿಡಲಾಗಿದೆ.ಇದೇನು ಜಲಪ್ರಳಯನಾ ಇಲ್ಲ ಜನಕ್ಕೆ ಪ್ರಳಯನ ಎಂಬಂತಾಗಿದೆ.

Read More »

ಮಹಾ ವರುಣನ ಆರ್ಭಟಕ್ಕೆ ತತ್ತರಿಸಿದ ಹೇಮಾವತಿ ದಡ ತೀರದ ಜನರು

ಮಂಡ್ಯ: ಗೋರೂರು ಡ್ಯಾನಿಂದ ಹೆಚ್ಚುವರಿಯಾಗಿ ಹೇಮಾವತಿ ನದಿಗೆ ಒಟ್ಟು 1 ಲಕ್ಷ ಕ್ಯೂಸೆಕ್ಸ್ ನೀರನ್ನು ಹೇಮಾವತಿ‌ ನದಿಗೆ ಬಿಟ್ಟಿರುವುದರಿಂದ ಹೇಮಗಿರಿ ದೇವಾಲದ ನದಿ ತೀರದಲ್ಲಿ ಚಾವಣಿ (ಗುಡಿಸಲು) ನಿರ್ಮಿಸಿಕೊಂಡು ವಾಸವಾಗಿದ್ದ ಮೀನುಗಾರರನ್ನು ಮುಂಜಾಗ್ರತವಾಗಿ ತಾಲೂಕಿನ ದಂಡಾಧಿಕಾರಿಗಳಾದ *ಶ್ರೀ ಶಿವಮೂರ್ತಿ* ರವರ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಈ ಸಂದರ್ಭದಲ್ಲಿ ಸ್ಥಳೀಯ ಬಂಡಿಹೊಳೆ ಗ್ರಾಮ ಪಂಚಾಯಿತಿ ಪಿಡಿಓ ಅಧಿಕಾರಿಗಳ ಶಿವಕುಮಾರ್ ಸ್ಥಳೀಯ ಮುಖಂಡರಾದ ಕುಪ್ಪಳ್ಳಿ ಅಣ್ಣಪ್ಪ ಮನುಗೌಡ ಮಾಕವಳ್ಳಿ ಮತ್ತಿತರರು ಇದ್ದರು…ಮನು …

Read More »

ವೆಸ್ಲಿ ಸೇತುವೆ ವ್ಯಾಪ್ತಿ ಪ್ರದೇಶದಲ್ಲಿ ಸಂಚಾರ ನಿಷೇಧ

ಚಾಮರಾಜನಗರ: ಕೆ.ಆರ್.ಎಸ್, ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು ನದಿಗೆ 2 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಟ್ಟಿದ್ದು ಇನ್ನು ಅಧಿಕ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ವೆಸ್ಲಿ ಸೇತುವೆ ವ್ಯಾಪ್ತಿ ಪ್ರದೇಶದಲ್ಲಿ ಆಗಸ್ಟ್ 10ರಿಂದ ಆಗಸ್ಟ್ 25ರ ವರೆಗೆ ಸಾರ್ವಜನಿಕರ ಓಡಾಟ, ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೋರಡಿಸಿದ್ದಾರೆ.ವೆಸ್ಲಿ ಸೇತುವೆಯು ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟದಿಂದ ಯಾವುದೇ ಅಹಿತಕರ ಘಟನೆಗಳು …

Read More »

ನೆರೆ ಪೀಡಿತ ಪ್ರದೇಶಗಳಿಗೆ ಡಿಸಿ ವೆಂಕಟೇಶ್ ಭೇಟಿ

ಮಂಡ್ಯ: ಜಿಲ್ಲಾಧಿಕಾರಿಗಳಾದ ವೆಂಕಟೇಶ್ ಅವರು ಕಿಕ್ಕೇರಿ ಪೊಲೀಸ್ ಠಾಣಾ ಸರಹದ್ದಿನ ಮಂದಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಹೇಮಾವತಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ‌ ನೀಡಿ ವೀಕ್ಷಣೆ ಮಾಡಿ ಗೊರೂರು ಅಣೆಕಟ್ಟೆಯಿಂದ ಸುಮಾರು 1 ಲಕ್ಷ ಕ್ಯೂಸೆಕ್ಸ್ ಕ್ಕಿಂತ ಅಧಿಕ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು.ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜಾನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಾಗಮಂಗಲ …

Read More »

ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸುತ್ತಿರುವ ಜನಪ್ರಿಯ ಶಾಸಕ ಡಾ. ನಾರಾಯಣಗೌಡ.

ಮಂಡ್ಯ: ಜನಪ್ರಿಯ ಜನನಾಯಕರು, ತಾಲ್ಲೂಕಿನ ಅಭಿವೃದ್ಧಿಯ ಹರಿಕಾರರು, ಬಡಜನರು ಧೀನ-ದಲಿತರಸೇವೆಯಲ್ಲಿ ಭಗವಂತನನ್ನು ಕಾಣುತ್ತಿರುವ ಶಾಸಕರಾದ ಡಾ. ನಾರಾಯಣಗೌಡ ಅವರು ಆಗಷ್ಟ್‌ 12ರ ಸೋಮವಾರ ಬೆಳಿಗ್ಗೆ 9ಗಂಟೆಗೆ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.ಭ್ರಮರಾಂಭ ಶ್ರೀಚೆನ್ನಮಲ್ಲಿಕಾರ್ಜುನ, ಈಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ #ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ, ಪ್ರವಾಸಿ ಮಂದಿರದಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸ-ಕಾರ್ಯಗಳ ಕುರಿತು, ತಾಲ್ಲೂಕಿನ ಅಧಿಕಾರಿಗಳ ಸಭೆ …

Read More »

ಕೆರೆಯಲ್ಲಿ ಮುಳುಗಿ ರೈತ ಆತ್ಮಹತ್ಯೆ

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿಯ ರೈತ ಶಿವರಾಮು (49) ಮದ್ದೂರು ಕೆರೆ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಾಯಿ ಸಣ್ಣಮ್ಮ ರವರ ಹೆಸರಿನಲ್ಲಿ 30. ಗುಂಟೆ ವಿಸ್ತೀರ್ಣದಲ್ಲಿ ಜಮೀನು ಹೊಂದಿದ್ದು ಕಬ್ಬು ಭತ್ತ ಹಾಗು ಬೇಸಿಗೆಯಲ್ಲಿ ರಾಗಿ ಬೆಳೆಯುತ್ತಿದ್ದರು . ವ್ಯವಸಾಯದ ಉದ್ದೇಶಕ್ಕಾಗಿ ವಳಗೆರೆಹಳ್ಳಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದಲ್ಲಿ 30 ಸಾವಿರ ರೂಪಾಯಿಗಳು .ಹಾಗು ಖಾಸಗಿ ಗಿರವಿ ಹಾಗೂ ಕೈ ಸಾಲ 2 . 50.000 …

Read More »

ಮುಂದುವರೆದ ಹೇಮಾವತಿ ನದಿಯ ಪ್ರವಾಹ.

ಮಂಡ್ಯ : ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟುಗೊರೂರು ಜಲಾಶಯದ ಒಳಹರಿವಿನ ಪ್ರಮಾಣವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದುಲಕ್ಷದ ಮುವತ್ತು ಸಾವಿರ ಕ್ಯೂಸೆಕ್ಸ್ ನಿಂದ ಒಂದು ಲಕ್ಷ ಕ್ಯೂಸೆಕ್ಸ್ ಗೆ ಹೇಮಾವತಿ ನದಿಯ ನೀರಿನ ಹೊರಹರಿವು ಇಳಿಕೆಯಾಗಿದೆ.ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಜಾತ್ರೆ ಉಂಟಾಗಿದೆ.ಮಂದಗೆರೆ ಅಣೆಕಟ್ಟೆ ಮತ್ತು ಹೇಮಗಿರಿ ಅಣೆಕಟ್ಟೆಯ ಬಳಿ ಹೇಮಾವತಿ ನದಿಯ ರೌದ್ರನರ್ತನ ಕಣ್ಣಿಗೆ ಕಟ್ಟುವಂತಾಗಿದೆ.ಆಣೆಕಟ್ಟೆಯ ಬಳಿಗೆ ಸಾರ್ವಜನಿಕರು ತೆರಳದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ. ಬೆಟ್ಟದ ಪಾದದ …

Read More »

ಕೃಷ್ಣಾ ನದಿ ಪಾತ್ರದ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಿದ್ಧತೆ

ರಾಯಚೂರು: ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ನದಿ ತೀರದ ಹಲವು ಗ್ರಾಮಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಿದ್ದತೆ ನಡೆಸಿದೆ.ಸದ್ಯ ಕೃಷ್ಣಾ ನದಿಯಲ್ಲಿ ೬.೧೫ ಲಕ್ಷ ಕ್ಯೂಸೆಕ್ಸ್ ಹರಿವು ಇದ್ದು, ಅಪಾಯ ಎದುರಾಗುವ ಮೊದಲೇಪರ್ತಾಪುರ, ಮುದ್ಗೋಟ್, ಹಿರೇರಾಯಕುಂಪಿ, ಕರಕಿಹಳ್ಳಿ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.ಈಗಾಗಲೇ ಗುರ್ಜಾಪುರ, ಹಿರೇರಾಯಕುಂಪಿಯ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.ಕ್ಷಣ ಕ್ಷಣಕ್ಕೂ ನೀರು ಹೆಚ್ಚಳ ಹಿನ್ನೆಲೆ ಅಪಾಯದ ಅಂಚಿನಲ್ಲಿರುವ ಗ್ರಾಮಗಳ ಸ್ಥಳಾಂತರ ಮಾಡಲಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರ ಸ್ಥಳಾಂತರ …

Read More »

ಪ್ರವಾಹ ಕುರಿತು ಸಿಎಂ ಜೊತೆ ಚರ್ಚಿಸುವದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ.

ಧಾರವಾಡ:ಜಿಲ್ಲೆಯಲ್ಲಿ ಪ್ರವಾಹದಿಂದ ಕೆರೆ ಒಡೆದು ನೂರಾರು ಎಕರೆ ಭೂಮಿ ಮತ್ತು ಬೆಳೆ ಹಾನಿಯಾಗಿದೆ. ಆದ್ದರಿಂದ ಇರುವ ನಿಯಮಗಳಲ್ಲಿಯೇ ಹೆಚ್ಚು ಜನರಿಗೆ ಸಹಾಯವಾಗುವ ರೀತಿಯಲ್ಲಿ ಪರಿಹಾರಕ್ಕೆ ಪರಿಗಣಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಅವರು, ಒಂದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಎರಡು ಗೋಡೆ ಬಿದ್ದರೆ ಅದನ್ನು ಶೇ‌ 50 ಪ್ರತಿಶತ ಮಾಡುತ್ತಿದ್ದಾರೆ. ಆದರೆ ಎರಡು ಗೋಡೆ ಬಿದ್ದರೂ ಅದನ್ನು …

Read More »