Breaking News

ಮುಂದುವರೆದ ಹೇಮಾವತಿ ನದಿಯ ಪ್ರವಾಹ.

ಮಂಡ್ಯ : ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟುಗೊರೂರು ಜಲಾಶಯದ ಒಳಹರಿವಿನ ಪ್ರಮಾಣವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದುಲಕ್ಷದ ಮುವತ್ತು ಸಾವಿರ ಕ್ಯೂಸೆಕ್ಸ್ ನಿಂದ ಒಂದು ಲಕ್ಷ ಕ್ಯೂಸೆಕ್ಸ್ ಗೆ ಹೇಮಾವತಿ ನದಿಯ ನೀರಿನ ಹೊರಹರಿವು ಇಳಿಕೆಯಾಗಿದೆ.ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಜಾತ್ರೆ ಉಂಟಾಗಿದೆ.ಮಂದಗೆರೆ ಅಣೆಕಟ್ಟೆ ಮತ್ತು ಹೇಮಗಿರಿ ಅಣೆಕಟ್ಟೆಯ ಬಳಿ ಹೇಮಾವತಿ ನದಿಯ ರೌದ್ರನರ್ತನ ಕಣ್ಣಿಗೆ ಕಟ್ಟುವಂತಾಗಿದೆ.ಆಣೆಕಟ್ಟೆಯ ಬಳಿಗೆ ಸಾರ್ವಜನಿಕರು ತೆರಳದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ. ಬೆಟ್ಟದ ಪಾದದ ಮೆಟ್ಟಿಲನ್ನು ಕಟ್ಟಿಕೊಂಡು ಹೇಮಾವತಿ ನದಿಯ ನೀರು ಹರಿಯುತ್ತಿದೆ.ಹೇಮಾವತಿ ನದಿ ನೀರಿನ ಪ್ರವಾಹದ ಹಿನ್ನೆಲೆಯಲ್ಲಿ ಸಾವಿರಾರು ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಕಬ್ಬು, ಭತ್ತ, ತೆಂಗು, ಅಡಿಕೆ, ಶುಂಠಿ ಬೆಳೆಗಳಿಗೆ ನುಗ್ಗಿದ ನೀರು ಕೋಟ್ಯಾಂತರ ರೂಪಾಯಿಗಳ ಬೆಳೆ ನಷ್ಟವಾಗಿದೆ.ನೀರಾವರಿ, ಕಂದಾಯ ಮತ್ತು ಅಗ್ನಿಶಾಮಕ ಅಧಿಕಾರಿಗಳು ಹೇಮಗಿರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.ಕೃಷ್ಣರಾಜಪೇಟೆ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಎರಡು ಪಂಪ್ ಹೌಸ್ ಗಳ ಪೈಕಿ ಹಳೆಯ ಪಂಪ್ ಹೌಸ್ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *