Breaking News

ಹುಬ್ಬಳ್ಳಿ

ಯುವಕರ ಮೇಲೆ ಹಲ್ಲೆ: ಬಿಹಾರಿ ಮೂಲಕ ಯುವಕರು ಜೈಲು ಪಾಲು

ಹುಬ್ಬಳ್ಳಿ : ಸಾರ್ವಜನಿಕರ ಜೊತೆ ಜಗಳ ತೆಗೆದಿದ್ದನ್ನು ಪ್ರಶ್ನಿಸಿದಕ್ಕೇ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್‌ ನಗರ ಠಾಣೆಯ ಪೊಲೀಸರು ಮೂವರನ್ನು ಜೈಲಿಗೆ ಅಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ವಡ್ಡರ್ ಓಣಿಯಲ್ಲಿ ವಾಸವಿದ್ದ ಬಿಹಾ‌ರ್ ಮೂಲದ ನಾಲೈದು ಜನ ಪ್ರತಿದಿನ ಕುಡಿದು ಸಾರ್ವಜನಿಕರ ಜೊತೆ ಗಲಾಟೆ ಮಾಡುತ್ತಿದ್ದರು.ಹೀಗಾಗಿ ಇದನ್ನು ಪ್ರಶ್ನೆ ಮಾಡಿದ ಸಂಜಯ್ ಹಾಗೂ ಸೈಫ್ ಎಂಬುವರಿಗೆ ಊಳಿಯಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರಿಗೆ …

Read More »

ಮುನಿರತ್ನ ನಾಯ್ಡು ವಿಚಾರಕ್ಕೆ ಪ್ರತಿಕ್ರಿಯಿಸಿದ ಅಬ್ಬಯ್ಯ

ಹುಬ್ಬಳ್ಳಿ: ಪಕ್ಷದವರಿಗೆ ನೈತಿಕತೆ ಇದ್ದರೆ ಅವರನ್ನು ಕೂಡಲೇ ಹೊರಹಾಕಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಒತ್ತಾಯಿಸಿದರು. ಶಾಸಕ ಮುನಿರತ್ನ ನಾಯ್ಡು ಮಾಡಿರುವುದು ಜನಪ್ರತಿನಿಧಿಗಳೆಲ್ಲರೂ ತಲೆತಗ್ಗಿಸುವಂತಹ ವಿಚಾರ, ಮಾತನಾಡಿದ ಅವರು ಎಚ್.ಐ.ವಿ ಇಂಜೆಕ್ಷನ್‌ ಮಾಡಲು ಪ್ರಯತ್ನಿಸಿದ ಆರೋಪದಲ್ಲಿರುವ ಶಾಸಕ ಮುನಿರತ್ನ ಅವರು ಜನಪ್ರತಿನಿಧಿಗಳಾಗಿ ಮುಂದುವರೆಯಲು ಯೋಗ್ಯವಲ್ಲ. ನಾಲಾಯಕ್ ಅಯೋಗ್ಯರು. ನಾವೆಲ್ಲರೂ ತಲೆತಗ್ಗಿಸುವಂತಹ ವಿಚಾರವಾಗಿದೆ. ಪಕ್ಷದವರಿಗೆ ನೈತಿಕತೆ ಇದ್ದರೇ ಅವರನ್ನು ಕೂಡಲೇ ಹೊರಹಾಕಬೇಕು ಎಂದು ಶಾಸಕ ಪ್ರಸಾದ್‌ ಅಬ್ಬಯ್ಯ ಹರಿಹಾಯ್ದರು.

Read More »

ಬಿಹಾರಿ ಮೂಲದ ಯುವಕರಿಂದ ಯುವಕರ ಮೇಲೆ ಹಲ್ಲೆ

ಹುಬ್ಬಳ್ಳಿ: ಬಿಹಾರಿ ಮೂಲದ ಯುವಕರನ್ನು ಪ್ರಶ್ನಿಸಲು ಹೋದ 2 ಯುವಕರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರ್‌ ಓಣಿಯಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ನೆರೆಹೊರೆಯವರ ಜೊತೆ ಜಗಳ ತೆಗೆಯುತ್ತಿದ್ದರು.ವಿಜಯ ನಗರದ ವಡ್ಡರ್ ಓಣಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಪೇಂಟಿಂಗ್ ಕೆಲಸ ಮಾಡಿಕೊಂಡು ವಾಸವಿದ್ದ ಬಿಹಾರ ಮೂಲದ ನಾಲೈದು ಜನ …

Read More »

ಡಿ.12ರಂದು 5 ಸಾವಿರ ಟ್ರಾಕ್ಟರಗಳ ಮೂಲಕ ವಿಧಾನಸೌಧ ಚಲೋ ಕಾರ್ಯಕ್ರಮ: ಬಸವಜಯಮೃಂತ್ಯುಂಜಯ ಸ್ವಾಮಿಜಿ

ನವಲಗುಂದ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಲ್ಲಿ ಸಿಎಂ ಸಿದ್ದರಾಮಯ್ಯ ಉದಾಸೀನ ಮನೋಭಾವ ತೋರುತಿದ್ದಾರೆ. ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ಡಿ.12ರಂದು 5 ಸಾವಿರ ಟ್ರಾಕ್ಟರಗಳ ಮೂಲಕ ವಿಧಾನಸೌಧ ಚಲೋ ಕಾರ್ಯಕ್ರಮ ನಡೆಸಲಾಗುವುದೆಂದು ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲ ಸಂಗಮ ಪೀಠದ ಬಸವಜಯಮೃಂತ್ಯುಂಜಯ ಸ್ವಾಮಿಜಿ ಎಚ್ಚರಿಸಿದರು. ಪಟ್ಟಣದ ವೀರಶೈವ ಲಿಂಗಾಯತ ಸಭಾಭವನದಲ್ಲಿ ತಾಲುಕಾ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯ …

Read More »

ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ವಿನಯ್ ಕುಲಕರ್ಣಿ ಕೆಡಿಪಿ ಸಭೆ

ಧಾರವಾಡ: ತಾಲೂಕಾ ಹಂತದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ವಿನಯ್ ಕುಲಕರ್ಣಿ ಅವರು ಚೆನ್ನಮ್ಮನ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಕೆಡಿಪಿ ಸಭೆ ನಡೆಸಿದರು. ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಪಿಡಬ್ಲ್ಯುಡಿ, ಕಂದಾಯ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿನಯ್ ಕುಲಕರ್ಣಿ, ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ರಸ್ತೆಗಳು ಹಾಳಾಗಿದ್ದು ಅವುಗಳ ಸುಧಾರಣೆ, ಸರಿಯಾದ ರೀತಿಯಲ್ಲಿ ಕುಡಿಯುವ ನೀರಿನ ಸೌಕರ್ಯ ಒದಗಿಸುವುದು ಸೇರಿದಂತೆ ಇತ್ಯಾದಿ ಸೂಚನೆಗಳನ್ನು …

Read More »

ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪನೆ ಮಾಡಿದ ಗಣಪತಿಗೆ ಶಾಸಕ ಭೇಟಿ

ಹುಬ್ಬಳ್ಳಿ: ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪನೆ ಮಾಡಿದ ಗಣಪತಿಗೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಂ. ಎಸ್. ಬಾಣದ, ನ್ಯಾಯವಾದಿಗಳಾದ ಅಶೋಕ ಅಕ್ಕಿ, ಶ್ರೀ ಲೋಕೇಶ ಎಂ, ಮಹೇಶ ಹಿರೇಮಠ, ಅಶೋಕ ಅಣವೇಕರ, ವಿ. ಎಸ್‌. ಹಳೇಮನಿ ಎಂ. ಎಸ್. ಗುಡಗೇರಿ, ಪ್ರಭು ಕಳೆಯ್ಯನವರ, ಬಾಪು ಸಬಳದ, ಗುರು ಮಾಳಪುರ …

Read More »

ಮನೆ ಬೀಗ ಮುರಿದು ಆಭರಣ ಕಳತನ

ಹುಬ್ಬಳ್ಳಿ : ಮನೆ ಬೀಗ ಮುರಿದು ಮನೆಯಲ್ಲಿದ್ದ 5.33 ಲಕ್ಷ ಮೌಲ್ಯದ ಆಭರಣ ಕಳತನವಾದ ಘಟನೆ, ಹುಬ್ಬಳ್ಳಿಯ ವಿಜಯನಗರದ ತೃಪ್ತಿ ಬಜಾರನಲ್ಲಿ ನಡೆದಿದೆ. ದೇವರಮನಿ ಕುಟುಂಬದವರ ಮನೆ ಬೀಗವನ್ನು ಕಳ್ಳರು ಮುರಿದಿದ್ದಾರೆ. ಬಳಿಕ ಮನೆ ಪ್ರವೇಶಿಸಿ ಕೊಠಡಿಯಲ್ಲಿದ್ದ ಬಿರೋ ಬಾಗಿಲು ಮುರಿದು ಈ 2.50 ಲಕ್ಷ ಮೌಲ್ಯದ 50 ಗ್ರಾಂ ಬಂಗಾರದ 4 ಬಳೆ, ಈ 50 ಸಾವಿರ ಮೌಲ್ಯದ 10 ಗ್ರಾಂ 2 ಬಂಗಾರ ಸರ 25 ಸಾವಿರ …

Read More »

ಕಚ್ಚಿದ ನಾಗಪ್ಪನೊಂದಿಗೆ ಆಸ್ಪತ್ರೆಗೆ ಬಂದ ಭೂಪ

ಹುಬ್ಬಳ್ಳಿ: ವ್ಯಕ್ತಿಯೊಬ್ಬ ತನಗೆ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ತಂದೆ ಮಗ ಇಬ್ಬರು ಶೇಂಗಾ ಕೀಳಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಫಕ್ಕೀರಪ್ಪ ಅಣ್ಣಿಗೇರಿ ಎಂಬ ಯುವಕನಿಗೆ ಹಾವು ಕಚ್ಚಿದ್ದು, ಕೂಡಲೇ ಹಾವಿನ ತಲೆ ಜಜ್ಜಿ ಕೊಂದಿದ್ದ ಫಕ್ಕೀರಪ್ಪ. ನಂತರ ತಂದೆ ಈರಪ್ಪನ ಜೊತೆ ಆಸ್ಪತ್ರೆಗೆ ಬಂದಿದ್ದಾನೆ. ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಎಂದ ಫಕ್ಕೀರಪ್ಪ, ನಂತರ ಯುವಕನನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿರೋ …

Read More »

ವರ್ಲ್ಡ್ ಸ್ನೇಟ್ ಗೇಮ್ಸ್ ಗೆ ಹುಬ್ಬಳ್ಳಿಯ ಬಾಲಕಿ ಆಯ್ಕೆ

ಹುಬ್ಬಳ್ಳಿ: ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿ ಸ್ಕೆಟ‌ರ್ ತ್ರಿಶಾ ಜಡಾಲ ಅವರು ಇಟಲಿಯಲ್ಲಿ ನಡೆಯಲಿರುವ ವರ್ಲ್ಡ್ ಸ್ನೇಟ್ ಗೇಮ್ಸ್ 2024ರಲ್ಲಿ ಆಯ್ಕೆಯಾಗಿದ್ದಾರೆ. ಕಳೆದ 10 ವರ್ಷಗಳಿಂದ ತ್ರಿಶಾ ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದು ಈಗ ಅಂತರಾರಾಷ್ಟ್ರೀಯ ಮಟ್ಟದ ವರ್ಲ್ಡ್ ಸ್ಟೇಟಿಂಗ್ 2024ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಾಧನೆಯನ್ನು ಕರ್ನಾಟಕ ರೋಲರ್ ಸ್ಕಟಿಂಗ್ ಪ್ರಧಾನ ಕಾರ್ಯದರ್ಶಿ ಇಂಧೂದರ ಸೀತಾರಾಂ, ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ …

Read More »

ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಕೊಲೆಯ ಆರೋಪಿಯೊಬ್ಬನಿಗೆ ಧಾರವಾಡದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2019ರ ಡಿಸೆಂಬರ್‌ನಲ್ಲಿ ಫಕ್ರುಸಾಬ್‌ ನದಾಫ್ ಎಂಬಾತನನ್ನು ಸಂತೋಷ ವಡ್ಡರ್ ಎಂಬಾತ ಆಸ್ಪತ್ರೆಗೆ ನುಗ್ಗಿ ಕೊಲೆ ಮಾಡಿದ್ದ. ನವಲಗುಂದದ ಅಪ್ರಾಪ್ತ ಮೇಲೆ ಫಕ್ರುಸಾಬ್ ನದಾಫ್ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನಿಗೆ ಧರ್ಮದೇಟು ನೀಡಿದ್ದ ಸ್ಥಳೀಯರು ನಂತರ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದರು. ಘಟನೆ: ಧರ್ಮದೇಟಿನಿಂದ ಗಾಯಗೊಂಡಿದ್ದ ಫಕ್ರುಸಾಬ್‌ನನ್ನು …

Read More »