Breaking News

ಹುಬ್ಬಳ್ಳಿ

ಶಾಸಕ ಪ್ರಸಾದ ಅಬ್ಯಯ್ಯ ಅವರಿಗೆ ಗಬ್ಬೂರಿನ ಜನರು ಮನವಿ ಪತ್ರ ಸಲ್ಲಿಕೆ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂಬರ್ 82 ರ ಇದರ ಪೈಕಿ ಹೊಸ ಗಬ್ಬೂರು ಸೇರಿದ್ದು ಇರುತ್ತದೆ ಇದು ಸದರಿ ಹೊಸ ಗಬ್ಬೂರು ಸೇರಿರುತ್ತದೆ. ಗಬ್ಬೂರಿನ ಬಸವೇಶ್ವರ ಸರ್ಕಸ್ ಉತ್ತರ – ದಕ್ಷಿಣ ಅಭಿಮುಖವಾಗಿ ಪೂರ್ವ ದಿಕ್ಕಿನ ಅಂದರೆ ಪಶ್ಚಿಮ ದಿಕ್ಕಿಗೆ ಹೊಂದಿಕೊಂಡಿದೆ ಮಹಾನಗರ ಪಾಲಿಕೆಯ ಮಾಲಿಕತ್ವದಲ್ಲಿ ಗಬ್ಬೂರಿಗಾಗಿ ಹಾಗೂ ಹೊಸ ಗಬ್ಬೂರಿನಲ್ಲಿರುವ ನಿವಾಸಿಗಳಿಗೆ ಹಾಗೂ ಮಕ್ಕಳ ಆಟಕ್ಕಾಗಿ ಗಾರ್ಡನ್ ಗಾಗಿ ಸುಮಾರು 1 ಎಕರೆ ಮೆಲ್ಪಟ್ಟು …

Read More »

ಬೆನ್ನೆಹಳ್ಳ ಜ್ವಲಂತ ಸಮಸ್ಯೆಯಾಗಿ ಉಳಿದಿದ್ದು, ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬೆನ್ನೆಹಳ್ಳ ಜ್ವಲಂತ ಸಮಸ್ಯೆಯಾಗಿ ಉಳಿದಿದ್ದು, ಪ್ರತಿವರ್ಷ ಬೆಣ್ಣೆಹಳ್ಳ ಮತ್ತು ರಾಡಿಹಳ್ಳ ಪ್ರವಾಹದಿಂದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಕೂಡಲೇ ಬೆನ್ನೆಹಳ್ಳಕ್ಕೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಬೇಕೆಂದು ಬೆಣ್ಣೆಹಳ್ಳ ಸಂರಕ್ಷಣಾ ಸಮಿತಿ ಮತ್ತು ರಾಡಿಹಳ್ಳ ಸಂರಕ್ಷಣಾ ಸಮಿತಿ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿತು. ಹುಬ್ಬಳ್ಳಿಯ ಪತ್ರಿಕಾಗೋಷ್ಠಿಯಲ್ಲಿ ಬೆನ್ನೆ ಹಳ್ಳದ ಸಂರಕ್ಷಣಾ ಸಮಿತಿ ಅಧ್ಯಕ್ಷ ಕಿರಣ ರೆಡ್ಡೆರ್ ಮಾತನಾಡಿ, ಪ್ರತಿವರ್ಷ ಮಳೆಗಾಲದಲ್ಲಿ ಬೆನ್ನೆ ಹಳ್ಳ, …

Read More »

ಆಫ್ರಿಕಾದ ಕಿಲಿಮಾಂಜರೋ ಪರ್ವತದ ಮೇಲೆ ತ್ರಿವರ್ಣ ಧ್ವಜ ಹಾರಾಟ : ಇದು ಸಾಹಸಿ ಕನ್ನಡಿಗನ ಸಾಧನೆ

ಹುಬ್ಬಳ್ಳಿ : ವಯಸ್ಸಾಯ್ತು ಇನ್ನೇನು ಸಾಧನೆ ಮಾಡಲು ಸಾಧ್ಯ ಎಂದು ಗೊಣಗುವವರಿಗೆ ಈ ವ್ಯಕ್ತಿ ವಿಭಿನ್ನ . ಐವತ್ತರ ವಯಸ್ಸಿನಲ್ಲೂ ಆಫ್ರಿಕಾದ ಅತೀ ದೊಡ್ಡ ಶಿಖರ ಕಿಲಿಮಾಂಜರೋ ಪರ್ವತ ಚಾರಣ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು , ಈ ಸಾಹಸಿ ಕನ್ನಡಿಗ ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ . ಹೀಗೆ ದಕ್ಷಿಣ ಆಫ್ರಿಕಾ ದೇಶದ ಶಿಖರದ ಮೇಲೆ ನಮ್ಮ ಭಾರತ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಇವರ ಹೆಸರು ಗಿರೀಶ ಹುಲ್ಲೂರ …

Read More »

ಅತಿವೃಷ್ಟಿ ಅಧ್ಯಯನ : ಕೇಂದ್ರ ತಂಡದ ಭೇಟಿ ಪರಿಶೀಲನೆ ಮಾಡಲಾಗಿದ್ದು, 10 ದಿನದೊಳಗೆ ಕೇಂದ್ರಕ್ಕೆ ವರದಿ ಸಲ್ಲಿಕೆ : ಅಶೋಕ ಕುಮಾರ

ಹುಬ್ಬಳ್ಳಿ : ಅತಿವೃಷ್ಟಿ ಹಾನಿಯ ಅಧ್ಯಯನಕ್ಕಾಗಿ ಭಾರತ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಇಂದು ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ,ಹಾನಿಗೀಡಾದ ಬೆಳೆಗಳು ಮನೆ,ಶಾಲೆ,ರಸ್ತೆ,ಸೇತುವೆಗಳನ್ನು ಪರಿಶೀಲಿಸಿತು. ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾಗಿರುವ ಹಾನಿಯ ವರದಿಯನ್ನು 10 ದಿನಗಳೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮಂತ್ರಾಲಯದ ಅಶೋಕಕುಮಾರ ಹೇಳಿದರು. ಕಿರೇಸೂರಿನಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದ ಹಾನಿಗೀಡಾಗಿರುವ ಹೊಲಗಳಲ್ಲಿನ ಬೆಳೆಗಳನ್ನು ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ …

Read More »

ಮಳೆ ಸಂತ್ರಸ್ತರ ನೋವಿಗೆ ಸ್ಪಂದಿಸದ ಸರಕಾರ ; ಗ್ರಾಮ ವಾಸ್ತವ್ಯದಿಂದ ಪ್ರತ್ಯುತ್ತರ “

ಹುಬ್ಬಳ್ಳಿ : ಮಳೆಯಿಂದ ಬೆಂಗಳೂರಿನಷ್ಟೇ ನವಲಗುಂದ ಕ್ಷೇತ್ರದಲ್ಲೂ ಹಾನಿಯಾಗಿದೆ . ಈ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ , ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಆದ್ದರಿಂದ ಪರಿಹಾರ ಕೊಡುವವರೆಗೂ ಟ್ರ್ಯಾಕ್ಟರ್ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಹೇಳಿದರು . ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ಪ್ರತಿಭಟನೆ ಮಾಡಿದ ನಂತರ ಕಾಳಜಿ ಕೇಂದ್ರ ತೆರೆದಿದ್ದಾರೆ . ಸತ್ಯ ದರ್ಶನ …

Read More »

ಬೆಣ್ಣೆಹಳ್ಳದ ನೀರಿನ ರಭಸಕ್ಕೆ ಕುಸಿದ ಬ್ರಿಡ್ಜ್: ಕೂದಳೆಲೆ ಅಂತರದಲ್ಲಿ ಪಾರಾದ ಮೂವರು ಯುವಕರು

ಹುಬ್ಬಳ್ಳಿ : ಬೆಣ್ಣೆಹಳ್ಳ ಪ್ರವಾದ ವೀಕ್ಷಿಸಲು ತೆರಳಿದ್ದ ಯುವಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನವಲಗುಂದ ತಾಲೂಕಿನ ಕನ್ನೂರ ಗ್ರಾಮದ ಬಳಿ ನಡೆದಿದೆ. ನಿನ್ನೆ ರಾತ್ರಿ ಧಾರಕಾರ ಸುರಿದ ಪರಿಣಾಮ‌ ಬೆಣ್ಣೆ ಹಳ್ಳ ಉಕ್ಕಿ ಹರಿದಿದೆ. ಇದನ್ನು ನೋಡಲು ಮೂವರು ಯುವಕರು ಕನ್ನೂರು ಬ್ರಿಡ್ಜ ಮೇಲೆ ನಿಂತಿದ್ದರು. ಆದರೆ ನೋಡು ನೋಡುತ್ತಿದ್ದಂತೆ ಬ್ರಿಡ್ಜ ಕೊಚ್ಚಿ ಹೋಗಿದೆ. ಯುವಕರು ಬ್ರಿಡ್ಜ್ ಮೇಲೆ ಸಿಲುಕಿ ಕರಲ ಕಾಲ ಆತಂಕಗೊಂಡಿದ್ದರು. ಈ ಭಯಾನಕ ದೃಶ್ಯಗಳು …

Read More »

ಸಮಯಕ್ಕೆ ಬಾರದ ಅಂಬ್ಯುಲೇನ್ಸ್ ಹಾರಿ ಹೊಯಿತು ಜೀವ

ಹುಬ್ಬಳ್ಳಿ:- ಹೃದಯಾಘಾತದಿಂದ ವ್ಯಕ್ತಿಯೊರ್ವ ಸಾವನಪ್ಪಿರುವ ಘಟನೆ ಹುಬ್ಬಳ್ಳಿ ಸಾಯಿ ಬಾಬಾ ಮಂದಿರದ ಬಳಿ ಇಂದು ಮುಂಜಾನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬಂಡವಾಡ ಗ್ರಾಮದ ಮಲ್ಲಪ್ಪ ರೆಡ್ಡೇರ್ 60, ಎಂಬಾತ ಹೃದಯಾಘಾತದಿಂದ ಸಾವನಪ್ಪಿರುವ ವ್ಯಕ್ತಿ, ಇಂದು ಮುಂಜಾನೆ ಸಂತೆಗೆ ಬಂದಿದ್ದ ಮಲ್ಲಪ್ಪ ಸಾಯಿಬಾಬ ಮಂದಿರದ ಬಳಿ ಕುಸಿದ ಬಿದ್ದಿದ್ದಾರೆ.ಇನ್ನೂ ಸ್ಥಳೀಯರು ಆತನನ್ನು ಕಿಮ್ಸ್ ಗೆ ರವಾನಿಸಲು ಅಂಬುಲೇನ್ಸ್ ಗೆ ಕರೆ ಮಾಡಿದ್ರೂ ಸರಿಯಾದ ಸಮಯಕ್ಕೆ ಬಾರದ ಕಾರ ಆತನ ಜೀವ ಹಾರಿ …

Read More »

ಪಿಎಸ್‌ಐ ಹುದ್ದೆ ನಿರೀಕ್ಷೆಯಲ್ಲಿ ಇರುವವರಿಗೆ ಸಿಹಿ ಸುದ್ದಿ

ಹುಬ್ಬಳ್ಳಿ: ಈಗಾಗಲೇ 545 ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ  ನೇಮಕಾತಿ ರದ್ದಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಖಾಲಿ ಇರುವಂತ 900 ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಶೀಘ್ರವೇ ಅರ್ಜಿಯನ್ನು ಕರೆಯಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ  ಘೋಷಣೆ ಮಾಡಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಎಂಟು ತಿಂಗಳ ಹಿಂದೆಯಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದ ಎರಡು ಪೊಲೀಸ್ ಠಾಣೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟಿಸಿರುವುದು‌ ಅನುಕರಣೀಯ ಸಂಗತಿಯಾಗಿದೆ. ಈ ಹಿಂದೆ ವರ್ಷಕ್ಕೆ …

Read More »

ರಾಜ್ಯದ ಗಮನ ಸೆಳೆದ ಹುಬ್ಬಳ್ಳಿ ರಾಣಿ ಚೆನ್ನಮ್ಮ ಮೈದಾನದ ಗಣೇಶನ ವಿಸರ್ಜನೆ

ಹುಬ್ಬಳ್ಳಿ : ರಾಜ್ಯದ ಗಮನ ಸೆಳೆದ ನಗರದ ರಾಣಿ ಚೆನ್ನಮ್ಮ ಮೈದಾನದ ಗಣೇಶನ ವಿಸರ್ಜನೆ ಕಾರ್ಯಕ್ರಮ ಇಂದು ಜರುಗಲಿದ್ದು, ಈ ಹಿನ್ನಲೆ ಡೊಳ್ಳು ಕುಣಿತ, ಗೊಂಬೆ ಕುಣಿತ, ಭಜನೆ ನೋಡುಗರ ಗಮನ ಸೆಳೆಯಿತು. ಗಜಾನನಿಗೆ ವಿವಿಧ ಹಿಂದೂಪರ ಸಂಘಟನೆಗಳಿಂದ ಪೂಜೆ ಸಲ್ಲಿಸಿದರು. ಇದೇ ವೇಳೆ ಸಾವಿರಾರು ಭಕ್ತರು ಗಜಾನನ ದರ್ಶನಾರ್ಶಿವಾದ ಪಡೆದು ಭಕ್ತಿಗೆ ಪಾತ್ರರಾದರು. ರಾಣಿ ಚೆನ್ನಮ್ಮ ಮೈದಾನದ ಗಣೇಶನ ಮುಂದೆ ವಿವಿಧ ಕಲಾವಿದರಿಂದ ಹಿಂದೂ ಸಾಂಪ್ರದಾಯದಂತೆ ಕಲಾ ವೈಭವವನ್ನು …

Read More »

ಪ್ರಧಾನಿ ರಾಜ್ಯ ಪ್ರವಾಸದಿಂದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ; ಸಚಿವ ಜೋಶಿ

ಧಾರವಾಡ : ಸೆ .2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದು , ಇದರಿಂದ ಪ್ರಮುಖವಾಗಿ ಕರಾವಳಿ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು . ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮಂಗಳೂರಿನಲ್ಲಿ ನಡೆಯುವ ಎರಡು ಪ್ರೊಜೆಕ್ಟ್ಗಳ ಉದ್ಘಾಟನೆಗೆ ಮೋದಿ ಬರಲಿದ್ದಾರೆ . ನಂತರ ಮೋದಿ ಅವರು ಬಹುದೊಡ್ಡ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಲಿದ್ದಾರೆ ಎಂದರು …

Read More »

You cannot copy content of this page