Breaking News

ರಾಜ್ಯದ ಗಮನ ಸೆಳೆದ ಹುಬ್ಬಳ್ಳಿ ರಾಣಿ ಚೆನ್ನಮ್ಮ ಮೈದಾನದ ಗಣೇಶನ ವಿಸರ್ಜನೆ


ಹುಬ್ಬಳ್ಳಿ : ರಾಜ್ಯದ ಗಮನ ಸೆಳೆದ ನಗರದ ರಾಣಿ ಚೆನ್ನಮ್ಮ ಮೈದಾನದ ಗಣೇಶನ ವಿಸರ್ಜನೆ ಕಾರ್ಯಕ್ರಮ ಇಂದು ಜರುಗಲಿದ್ದು, ಈ ಹಿನ್ನಲೆ ಡೊಳ್ಳು ಕುಣಿತ, ಗೊಂಬೆ ಕುಣಿತ, ಭಜನೆ ನೋಡುಗರ ಗಮನ ಸೆಳೆಯಿತು.

ಗಜಾನನಿಗೆ ವಿವಿಧ ಹಿಂದೂಪರ ಸಂಘಟನೆಗಳಿಂದ ಪೂಜೆ ಸಲ್ಲಿಸಿದರು. ಇದೇ ವೇಳೆ ಸಾವಿರಾರು ಭಕ್ತರು ಗಜಾನನ ದರ್ಶನಾರ್ಶಿವಾದ ಪಡೆದು ಭಕ್ತಿಗೆ ಪಾತ್ರರಾದರು.

ರಾಣಿ ಚೆನ್ನಮ್ಮ ಮೈದಾನದ ಗಣೇಶನ ಮುಂದೆ ವಿವಿಧ ಕಲಾವಿದರಿಂದ ಹಿಂದೂ ಸಾಂಪ್ರದಾಯದಂತೆ ಕಲಾ ವೈಭವವನ್ನು ಮೆರೆದರು.

ಇನ್ನೂ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಜಾನನ ದರ್ಶನಾರ್ಶಿವಾದ ಪಡೆದು ಭಗವಾಧ್ವಜ ಹಾರಿಸಿ ಸಂಭ್ರಮಿಸಿದ ದೃಶ್ಯಗಳು ಬಂದಿತು.

ಪರ-ವಿರೋಧದ ನಡೆವೆಯು ನಗರದ ರಾಣಿ ಚೆನ್ನಮ್ಮ ಮೈದಾನದಲ್ಲಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಂಡಳಿಯಿಂದ ಗಜಾನನ ಪ್ರತಿಷ್ಠಾಪನೆ ಮಾಡಿದ್ದು, ರಾಜ್ಯದ ಚಿತ್ತವೇ ಈ ವಿಘ್ನೇಶ್ವರನತ್ತ ನೆಟ್ಟಿತ್ತು.

ಇಂದು ೩ ದಿನದ ಬಳಿಕ ಗಣೇಶನ ವಿಸರ್ಜನಾ ಕಾರ್ಯವನ್ನು ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದ ವತಿಯಿಂದ ನೂರಾರು ಆರ್.ಎ.ಎಫ್ ಹಾಗೂ ಪೊಲೀಸರ ಬಿಗಿ ಭದ್ರತೆಯೊಂದಿಗೆ ಜರುಗಲಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *