admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡಿನ ಪ್ರಸಿದ್ಧ ವೃತ್ತವೇ ಚೆನ್ನಮ್ಮ ಸರ್ಕಲ್. ಹುಬ್ಬಳ್ಳಿಗೆ ಮುಕುಟದಂತಿರುವ ಕೇಂದ್ರ ಸ್ಥಳದಲ್ಲಿರುವ ರಾಣಿ ಚೆನ್ನಮ್ಮನ ಪುತ್ಥಳಿ ಶಿಥಿಲಗೊಂಡಿದೆ. ಪುತ್ಥಳಿಯ ಸುತ್ತಮುತ್ತ ಬಿರುಕುಗಳು ಕಾಣಿಸಿಕೊಂಡಿವೆ.ಸುಮಾರು 40 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಪುತ್ಥಳಿಗೆ ಈಗ ಕಂಟಕ ಎದುರಾಗಿದೆ. ಚೆನ್ನಮ್ಮ ಪುತ್ಥಳಿಯ ತಳಭಾಗದ ಬೆಸ್ಮೆಂಟ್ಗೆ ಹೊಂದಿಸಿದ ಕಲ್ಲುಗಳು ಹೊರಬಂದಿವೆ. ಹೀಗಾಗಿ ಚೆನ್ನಮ್ಮ ಮೂರ್ತಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ 8 ಪ್ರಮುಖ ರಸ್ತೆಗಳು ಒಂದೆಡೆ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಎಡೆಬಿಡದೇ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ 5 ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಲೋಂಡಾ ಹಾಗೂ ತಿನೆಘಾಟ್ ನಡುವೆ ರೈಲು ಹಳಿ ಕೊಚ್ಚಿ ಹೋದ ಪರಿಣಾಮ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಸಂಚರಿಸಬೇಕಿದ್ದ ಐದು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.ಪಾಟ್ನಾ-ವಾಸ್ಕೋಡಿಗಾಮ (12742) ರೈಲು ಬೆಳಗಾವಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಹುಬ್ಬಳ್ಳಿ- ವಾಸ್ಕೋಡಿಗಾಮ ಸ್ಲೀಪರ್ ಕೋಚ್ (06948) ಲೋಂಡಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.ವಾಸ್ಕೋಡಿಗಾಮ- ಹೌರಾ ಎಕ್ಸ್‌ಪ್ರೆಸ್ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಹೆಲ್ಮೆಟ್ ಹಾಕದೇ ಅಪಘಾತದಲ್ಲಿ ದುರ್ಮರಣಕ್ಕೀಡಾಗಿ ತನ್ನನ್ನು ಮತ್ತು ತನ್ನ ತಾಯಿಯನ್ನು ಅನಾಥರನ್ನಾಗಿಸಿ ತಂದೆಯ ಶ್ರದ್ಧಾಂಜಲಿ ಕಾರ್ಯದಲ್ಲಿ ಬಾಲಕನೋರ್ವ ಸಾರ್ವಜನಿಕರು ಬೇಷ್ ಎನ್ನುವಂತ ಕೆಲಸ ಮಾಡಿದ್ದಾನೆ.ನನ್ನ ಸ್ಥಿತಿ ಬೇರೆ ಯಾವ ಕುಟುಂಬಕ್ಕೂ ಬಾರದಿರಲಿ ಎಂದು ಮೃತ ವ್ಯಕ್ತಿಯ ಪುತ್ರ, ಶ್ರದ್ಧಾಂಜಲಿ ಸಂದರ್ಭದಲ್ಲಿ ಹೆಲ್ಮೆಟ್ ದಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಮನೆಯಲ್ಲಿ ತಮ್ಮ ಸಂಬಂಧಿಕರು ಕಾಯುತ್ತಿದ್ದಾರೆ ಎಂಬುವಂತ ಪರಿಜ್ಞಾನ ಇಲ್ಲದ ವ್ಯಕ್ತಿವೋರ್ವನ ಸಾವಿನಿಂದ ಕುಟುಂಬ ಅನಾಥವಾಗಿದೆ. …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯೊಂದಿಗೆ ಇಂದು ಆಗಸ್ಟ್ 06 ಹಾಗೂ ನಾಳೆ ಆಗಸ್ಟ್ 07 ರಂದು ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.ಈ ಎರಡು ರಜಾ ದಿನಗಳನ್ನು ಮುಂಬರುವ ರವಿವಾರ ದಿನಗಳಂದು ಕರ್ತವ್ಯ ನಿರ್ವಹಿಸಿ ಅವಧಿಗಳನ್ನು ಸರಿದೂಗಿಸಿಕೊಳ್ಳಲು ಅವರು ಸೂಚಿಸಿದ್ದಾರೆ.
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ:ಅರೆ ಮಲೆನಾಡಿನ ಸೆರಗನ್ನು ಹೊತ್ತಿಕೊಂಡಿರೋ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದುರಾಗಿದೆ. ಇಡಿ ಗ್ರಾಮವೇ ರೋಗ ರುಜಿನಗಳಿಂದ ನರಳುತ್ತಿದ್ದು, ಗ್ರಾಮಸ್ಥರಿಗೆ ಆಸ್ಪತ್ರೆಯೇ ತವರು ಮನೆಯಂತಾಗಿದೆ. ರವಾಡ ಜಿಲ್ಲೆ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರೆಲ್ಲಾ ಅದೇ ತಾಲೂಕಿನ ತುಮರಿಕೊಪ್ಪ ಗ್ರಾಮಸ್ಥರು. ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿರೋ ಕಾರಣದಿಂದ ಗ್ರಾಮಕ್ಕೆ ಸರಬರಾಜು ಮಾಡೋ ಕುಡಿಯುವ ನೀರಿನ ಟ್ಯಾಂಕ್ಗಳ ನೀರು ಕಲುಷಿತಗೊಂಡಿದ್ದು, ಅದೇ ನೀರನ್ನು ತಾಲೂಕು ಆಡಳಿತ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ಜನರು ತತ್ತರಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ತಾಲೂಕಿನ ಅಲ್ಲಾಪುರ, ಗುಡೇನಕಟ್ಟಿ ಭಾಗದಲ್ಲಿ ಅಧಿಕ ಹಾನಿ ಉಂಟಾಗಿದೆ. ಮಳೆಯ ರಭಸಕ್ಕೆ ಕುಂದಗೋಳ ತಾಲೂಕಿನಲ್ಲಿ ನಿಂಗಪ್ಪ ಮಡಿವಾಳರ ಎಂಬುವವರಿಗೆ ಸೇರಿದ ಮನೆ ಕುಸಿತಗೊಂಡಿದೆ. ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಅಷ್ಟೇ ಅಲ್ಲದೇ ಗುಡೇನಕಟ್ಟಿ ಭಾಗದಲ್ಲಿ ಜಮೀನಿಗೆ ಮಳೆ ನುಗ್ಗಿದ ನೀರು ನುಗ್ಗಿದ ಪರಿಣಾಮ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ನಾನು ಯಾವುದೇ ಸ್ಥಾನದ ನಿರೀಕ್ಷೆ ಪಡಲ್ಲಾ, ಪಕ್ಷ ಯಾವ ಜವಾಬ್ದಾರಿ ವಹಿಸುವುದೋ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಭಾಗವಾಗಿದ್ದು, ಆ ಬಗ್ಗೆ ಚರ್ಚಿಸಲು ನಾಳೆ ಅಥವಾ ನಾಡಿದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ನ ನಿರ್ದೇಶನದಂತೆ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು, ಡಿಸಿಎಂ ಸ್ಥಾನ ನೇಮಕ ಮಾಡುವ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಇಂದಿನ ದಿನಮಾನಗಳಲ್ಲಿ ರಂಗಭೂಮಿ ನಾಟಕಕಾರರ ಹಾಗೂ ನಾಟಕ ಕಂಪನಿ ಮಾಲೀಕರ ಆರ್ಥಿಕ ಸ್ಥಿತಿ ಶೋಚಣಿಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು. ನಗರದ ಹಳೇ ಬಸ್ ನಿಲ್ದಾಣದ ಬಸವವನದ ಹತ್ತಿರವಿರುವ ಕೆ.ಬಿ.ಆರ್ ಡ್ರಾಮಾ ಕಂಪನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘ (ರಿ) ವಿಜಯಪುರ 2019-20 ನೇ ಸಾಲಿನ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಿನಿಮಾ, ಟಿ,ವಿ. ಯೂಟ್ಯೂಬ್, ಸೇರಿದಂತೆ ಸಾಮಾಜಿಕ ಜಾಲತಾಣಗಳ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಪಾರ್ಕಿಂಗ್ ಶುಲ್ಕ ವಸೂಲಿ ರದ್ದಾದರೂ ನಗರದ ದುರ್ಗದಬೈಲ್ನಲ್ಲಿ ಕದ್ದುಮುಚ್ಚಿ ಸಾರ್ವಜನಿಕರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ.ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ದುರ್ಗದಬೈಲ್ ಸೇರಿ ಹು-ಧಾ ಅವಳಿ ನಗರದಲ್ಲಿ ರ್ಪಾಂಗ್ ಶುಲ್ಕ ವಸೂಲಿಯನ್ನು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಕಳೆದ ವಾರ ರದ್ದು ಪಡಿಸಿದ್ದಾರೆ. ದುರ್ಗದಬೈಲ್ನಲ್ಲಿ ರ್ಪಾಂಗ್ ಶುಲ್ಕ ವಸೂಲಿ ಗುತ್ತಿಗೆಯನ್ನು ಆಸೀಫ್ ಹಾಗೂ ನದಾಫ್ ಎಂಬುವವರು ಪಡೆದಿದ್ದರು. ಆಗ ಅಧಿಕೃತವಾಗಿ ರ್ಪಾಂಗ್ ಶುಲ್ಕ ವಸೂಲಿ ಮಾಡುತ್ತಿದ್ದ ಇವರ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಮನೆ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಿ, ಸಾವಿರಾರು ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಎಪಿಎಂಸಿ ನವನಗರ ಪೋಲೀಸರು ಯಶಸ್ವಿಯಾಗಿದ್ದಾರೆ.ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಧನ್ಯಕುಮಾರ ಅರಸನಾಳ (30), ನಾರಾಯಣ ಬಾಚಣಕಿ(23) ಬಂಧಿತ ಆರೋಪಿಗಳು.ಮಹಾನಗರ ಪೋಲಿಸ್ ಹು-ಧಾ ಆಯುಕ್ತರಾದ ಎಂಎಸ್. ನಾಗರಾಜ ಅವರ ನೇತೃತ್ವದ ಪೋಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರಿಂದ 26,350 ರೂ. ಮೌಲ್ಯದ ವಿವಿಧ ಬೆಳ್ಳಿ ಆಭರಣಗಳು ಹಾಗೂ ಒಂದು ಎಲ್.ಇ.ಡಿ. ಕಂಪನಿಯ ಟಿ.ವಿಯನ್ನು ಪೋಲಿಸರು …
Read More »