Breaking News

ಪಾರ್ಕಿಂಗ್ ಶುಲ್ಕ ವಸೂಲಿ ರದ್ದಾದರೂ ನಗರದ ದುರ್ಗದಬೈಲ್​ನಲ್ಲಿ ಕದ್ದುಮುಚ್ಚಿ ಸಾರ್ವಜನಿಕರಿಂದ ಪಾರ್ಕಿಂಗ್ ಶುಲ್ಕ ವಸೂಲಿ

ಹುಬ್ಬಳ್ಳಿ: ಪಾರ್ಕಿಂಗ್ ಶುಲ್ಕ ವಸೂಲಿ ರದ್ದಾದರೂ ನಗರದ ದುರ್ಗದಬೈಲ್​ನಲ್ಲಿ ಕದ್ದುಮುಚ್ಚಿ ಸಾರ್ವಜನಿಕರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ.ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ದುರ್ಗದಬೈಲ್ ಸೇರಿ ಹು-ಧಾ ಅವಳಿ ನಗರದಲ್ಲಿ ರ್ಪಾಂಗ್ ಶುಲ್ಕ ವಸೂಲಿಯನ್ನು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಕಳೆದ ವಾರ ರದ್ದು ಪಡಿಸಿದ್ದಾರೆ. ದುರ್ಗದಬೈಲ್​ನಲ್ಲಿ ರ್ಪಾಂಗ್ ಶುಲ್ಕ ವಸೂಲಿ ಗುತ್ತಿಗೆಯನ್ನು ಆಸೀಫ್ ಹಾಗೂ ನದಾಫ್ ಎಂಬುವವರು ಪಡೆದಿದ್ದರು. ಆಗ ಅಧಿಕೃತವಾಗಿ ರ್ಪಾಂಗ್ ಶುಲ್ಕ ವಸೂಲಿ ಮಾಡುತ್ತಿದ್ದ ಇವರ ಸಿಬ್ಬಂದಿಯೇ ಈಗ ಅನಧಿಕೃತವಾಗಿ ವಸೂಲಿ ಮಾಡುತ್ತಿರುವುದು ಶುಕ್ರವಾರ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಕಂಡು ಬಂದಿದೆ.ಜುಲೈ 27ಕ್ಕೆ ಗುತ್ತಿಗೆ ಅವಧಿ ಮುಗಿದಿದೆ. ಗುತ್ತಿಗೆ ಅವಧಿಯಲ್ಲಿ ರ್ಪಾಂಗ್ ಮಾಡಿದ್ದಕ್ಕೆ ವಾಹನ ಸವಾರರಿಗೆ ಗುತ್ತಿಗೆದಾರರ ಸಿಬ್ಬಂದಿ ರಸೀದಿ ನೀಡುತ್ತಿದ್ದರು. ಇದೀಗ ರಸೀದಿ ನೀಡುವುದಿಲ್ಲ. ಹಾಗಂತ ಎಲ್ಲರಿಂದ, ರಾಜಾರೋಷವಾಗಿ ಶುಲ್ಕ ವಸೂಲಿ ಮಾಡುವುದಿಲ್ಲ. ಕದ್ದುಮುಚ್ಚಿ ನಡೆಯುತ್ತಿದೆ. ಇಂಥವರು ತಕರಾರು ಮಾಡಲಾರರು ಎಂಬ ಅಂದಾಜಿನ ಮೇಲೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ.ಮಹಿಳೆಯರಿಂದ ತಪ್ಪದೇ ವಸೂಲಿ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳಿಗೆ ತಲಾ 5 ರೂ. ಹಾಗೂ ನಾಲ್ಕು ಚಕ್ರ ವಾಹನ (ಕಾರು, ಜೀಪ್, ಇತ್ಯಾದಿ ಲಘು ವಾಹನಗಳು)ಗಳಿಗೆ ತಲಾ 10 ರೂ. ವಸೂಲಿ ಮಾಡಲು ಅವಕಾಶ ಇದ್ದವು.ಜುಲೈ 27ಕ್ಕೆ ದುರ್ಗದಬೈಲ್, ಕೊಪ್ಪಿಕರ ರಸ್ತೆ (ಗುತ್ತಿಗೆದಾರ-ಅರುಣ ಶಿರ್ಕೆ) ಹಾಗೂ ಧಾರವಾಡ ಸುಭಾಷ ರಸ್ತೆ (ಗುತ್ತಿಗೆದಾರ-ರಾಜಾರಾಮ ಮುನವಳ್ಳಿ) ಟೆಂಡರ್ ಅವಧಿ ಮುಗಿಯುತ್ತಿದ್ದಂತೆ ಅವಳಿ ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ಶುಲ್ಕ ವಸೂಲಿ ಇಲ್ಲ. ಮೊದಲೆಲ್ಲ ಹು-ಧಾ ಮಹಾನಗರ ಪಾಲಿಕೆ ಕಂಡ ಕಂಡ ರಸ್ತೆಯನ್ನು ಪೇಯ್್ಡ ಪಾರ್ಕಿಂಗ್​ಗೆ ನೀಡಿ ಬೊಕ್ಕಸ ತುಂಬಿಸಿಕೊಂಡಿತ್ತು. ಬಳಿಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೇಯ್್ಡ ಪಾರ್ಕಿಂಗ್ ಸ್ಥಳವನ್ನು ಕಡಿಮೆ ಮಾಡಿತ್ತು. ಪಾರ್ಕಿಂಗ್ ಶುಲ್ಕ ವಸೂಲಿಗೆ ಹೊಸದಾಗಿ ಟೆಂಡರ್ ಕರೆಯಲು ಪಾಲಿಕೆ ಆಯುಕ್ತರು, ಮಹಾನಗರ ಪಾಲಿಕೆ ಆಡಳಿತಾಧಿಕಾರಿಯಾದ ಪ್ರಾದೇಶಿಕ ಆಯುಕ್ತರೊಂದಿಗೆ ಪತ್ರ ವ್ಯವಹಾರ ಮಾಡಿದ್ದಾರೆ. ಪಾಲಿಕೆಯಲ್ಲಿ ಸದ್ಯ ಜನಪ್ರತಿನಿಧಿಗಳ ಆಡಳಿತವಿಲ್ಲ. ಇದ್ದಿದ್ದರೆ ಪಾಲಿಕೆ ಸದಸ್ಯರು, ಸ್ಥಾಯಿ ಸಮಿತಿ ಮುಂದಿಟ್ಟು ಹಾಲಿ ಗುತ್ತಿಗೆದಾರರಿಗೆ ಪಾರ್ಕಿಂಗ್ ಶುಲ್ಕ ವಸೂಲಿ ಟೆಂಡರ್ ಅವಧಿಯನ್ನು ವಿಸ್ತರಿಸಿಕೊಡುತ್ತಿದ್ದರು.ಗಾಡಿ ತೆಗೆದುಕೊಡ್ತಾರಂತೆ!: ದುರ್ಗದಬೈಲ್​ನಲ್ಲಿ ಬೈಕ್ ನಿಲ್ಲಿಸಿದಾಗ, ಮಾಜಿ ಗುತ್ತಿಗೆದಾರರ ಕಡೆಯವರು ಹ್ಯಾಂಡಲ್ ಲಾಕ್ ಮಾಡಬೇಡಿ ಎಂದು ಮೊದಲಿನ ಗತ್ತಿನಲ್ಲೇ ಹೇಳುತ್ತಾರೆ. ಯಾಕೆ ಎಂದು ಗಟ್ಟಿಯಾಗಿ ಕೇಳಿದರೆ, ತಾವು ಬೈಕ್​ಗಳನ್ನು ಸರಿಯಾಗಿ ಪಾರ್ಕ್ ಮಾಡಿ ಇಡುತ್ತೇವೆ. ನೀವು ಮಾರುಕಟ್ಟೆಗೆ ಹೋಗಿ ವಾಪಸ್ ಬರುತ್ತಿದ್ದಂತೆ ಬೈಕ್ ತೆಗೆದುಕೊಡುತ್ತೇವೆ ಎನ್ನುತ್ತಾರೆ. ರ್ಪಾಂಗ್ ಶುಲ್ಕ ರದ್ದಾಗಿದೆಯಲ್ಲ… ಎಂದರೆ, ಬೈಕ್ ಸರಿಯಾಗಿಟ್ಟು, ತೆಗೆದುಕೊಟ್ಟಿದ್ದಕ್ಕೆ ನೀವು ಖುಷಿಯಿಂದ ಕೊಟ್ಟರೆ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಜಾಣ್ಮೆ ತೋರುತ್ತಾರೆ ಈ ಅನಧಿಕೃತ ವಸೂಲಿಗಾರರು. ಶುಲ್ಕ ವಸೂಲಿ ರದ್ದಾಗಿದೆ ಎಂದು ಗೊತ್ತಿಲ್ಲದವರು, ಗಟ್ಟಿಯಾಗಿ ಮಾತನಾಡದವರ ಬಳಿ ಮುಲಾಜಿಲ್ಲದೇ 5 ರೂ.ನಂತೆ ನಿತ್ಯ ಸಾವಿರಾರು ರೂ. ವಸೂಲಿ ಮಾಡಿ ಕಿಸೆಗೆ ತುಂಬಿಕೊಳ್ಳುತ್ತಿದ್ದಾರೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *