admin
September 12, 2019
ಕೋಲಾರ, ಜಿಲ್ಲೆ
KOLAR:-ಕೋಲಾರದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ನಡೆಯುತ್ತಿದ್ದು, ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಯೋಗ ದಿನ ಆಯೋಜಿಸಿದೆ. ಜಿಲ್ಲಾಡಳಿತದೊಂದಿಗೆ ಹಲವು ಸಂಘ ಸಂಸ್ಥೆಗಳು ಸಹಯೋಗದೊಂದಿಗೆ ದೀಪ ಬೆಳಗಿಸುವ ಮೂಲಕ ಜಿಲ್ಲಾದಿಕಾರಿ ಮಂಜುನಾಥ್ ಯೋಗ ದಿನಕ್ಕೆ ಚಾಲನೆ ನೀಡಿದರು. ಯೋಗ ದಿನಾಚರಣೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯೋಗಪಟುಗಳು ಭಾಗಿಯಾಗಿದ್ದರು. ಸಾಮೂಹಿಕ ಯೋಗ ಪ್ರದರ್ಶನವನ್ನು ಯೋಗಪಟುಗಳು ನಡೆಸಿದರು. ಡಿಸಿ ಮಂಜುನಾಥ್, ಸಿಇಓ ಜಗದೀಶ್, ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಚಾಮರಾಜನಗರ ಜಿಲ್ಲೆಯಾಗಲು ನನ್ನ ಶ್ರಮ ಅಪಾರ ಇದು ಹಿಂದುಳಿದ ಗಡಿಪ್ರದೇಶವಾಗಿದ್ದು, ಇನ್ನೂ ಸಾಕಷ್ಟು ಅಭಿವೃದ್ದಿ ಕಾಣಬೇಕಾಗಿದೆ ಅದಕ್ಕಾಗಿ ಜಿಲ್ಲೆಗೆ ವಿಶೇಷವಾದ ಅನುದಾನ ಮತ್ತು ಒಂದು ಪ್ಯಾಕೇಜ್ ನೀಡಬೇಕು ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಇಂದಿಲ್ಲಿ ಆಗ್ರಹಿಸಿದರು.ಚಾಮರಾಜನಗರಕ್ಕೆ ನೀರು ತರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವಾಗ ಭೀಕರ ಬರಗಾಲ ಉಂಟಾಗಿದ್ದು ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪಟ್ಟಣಕ್ಕೆ ಪ್ರತಿನಿತ್ಯ ಕುಡಿಯುವ ನೀರು, ಜಾನುವಾರುಗಳಿಗೆ …
Read More »
admin
September 12, 2019
ಜಿಲ್ಲೆ, ಬೆಂಗಳೂರು ಗ್ರಾಮಾಂತರ
ಇಂದು 5 ನೇ ಅಂತಾರಾಷ್ಟ್ರೀಯ ಯೋಗದಿನವಾಗಿದ್ದು ಈ ಹಿನ್ನೆಲೆ ದೇಶಾದ್ಯಂತ ಬೃಹತ್ ಯೋಗ ಶಿಬಿರಗಳನ್ನ ಆಯೋಜಿಸುವ ಮೂಲಕ ಯೋಗ ದಿನವನ್ನು ಆಚರಿಸಲಾಗುತ್ತಿದೆ, ಅಂತೆಯೇ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಸಾರ್ವಜನಿಕವಾಗಿ ಯೋಗದಿನವನ್ನು ಅಂತಾರಾಷ್ಟ್ರೀಯ ಯೋಗದಿನ ಆಚರಣಾ ಸಮಿತಿಯಿಂದ ಆಚರಿಸಲಾಯಿತು. ಆನೇಕಲ್ ಪಟ್ಟಣದ ಶ್ರೀರಾಮ ಕುಟೀರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನಾಚಾರಣೆಯಲ್ಲಿ ಪಟ್ಟಣದ ನೂರಾರು ಜನ ಯೋಗಪಟುಗಳು ಹಾಗು ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿ ಯೋಗದ ಆಸನಗಳನ್ನು ಪ್ರದರ್ಶಿಸಿವ ಮೂಲಕ 5 ನೇ ಅಂತಾರಾಷ್ಟ್ರೀಯ …
Read More »
admin
September 12, 2019
ಜಿಲ್ಲೆ, ದಾವಣಗೆರೆ
ಕೆಎಸ್ ಆರ್ ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲಿಯೇ ಸಾವನಾಪ್ಪಿದ ಘಟನೆ ದಾವಣಗೆರೆ ನಗರದ ಬಿಎಸ್ ಎನ್ ಎಲ್ ಕಚೇರಿ ಬಳಿ ನಡೆದಿದೆ. ಶಿವಕುಮಾರ (೩೨) ಸಾವನ್ನಪ್ಪಿದ ಆಟೋ ಚಾಲಕನಾಗಿದ್ದು, ಹಾಗೂ ಆಟೋದಲ್ಲಿದ್ದ ಇನ್ನೊಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಿಧ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಚಿತ್ರದುರ್ಗ ನಗರದ NH4ರ JMIT ಸರ್ಕಲ್ ಬಳಿ ನಡೆದಿದೆ. ಅಮೃತ (12) ಮೃತ ವಿಧ್ಯಾರ್ಥಿನಿ. ತಂದೆಯ ಜೊತೆ ಶಾಲೆಗೆ ತೆರಳುವಾಗ ಅಪಘಾತ ಸಂಭವಿಸಿದ್ದು ಮೃತ ವಿದ್ಯಾರ್ಥಿನಿ ತಂದೆಗೆ ಗಂಬೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ST ಮೀಸಲಾತಿಯನ್ನು 7,5ಹೆಚ್ಚಿಸುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂ ಪುರದಿಂದ ಮೊಳಕಾಲ್ಮೂರು ಊರಿನ ವರೆಗೆ ಪಾದಯಾತ್ರೆ ಮಾಡಿದರು. ಮಾಜಿ ಸಂಸದ ಎನ್.ವೈ ಹನುಮಂತಪ್ಪ ಮತ್ತು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸುಶೀಲಮ್ಮರಿಂದ ಪಾದಯಾತ್ರೆಗೆ ಚಾಲನೆ ನೀಡಿದರು. ಸುಮಾರು ಮೂರು ಸಾವಿರಕ್ಕೂ ಹೆಚ್ಷಿನ ಜನರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. 20ಕಿಲೋಮೀಟರ್ ಪಾದಯಾತ್ರೆ ಮಧ್ಯಾನ್ಹದ ವೇಳೆ ಮೊಳಕಾಲ್ಮೂರು ತಲುಪುವುದು.
Read More »
admin
September 12, 2019
ಕೋಲಾರ, ಜಿಲ್ಲೆ
ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಎಸ್.ಮುನಿಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದರ ಹಿನ್ನೆಲೆಯಲ್ಲಿ ಎರಡು ಪ್ರಮುಖ ಹುದ್ದೆಗಳಲ್ಲಿ ಮುಂದುವರೆಯುವ ಸಂಸದರು ಯಾವ ಹುದ್ದೆಗೆ ರಾಜೀನಾಮೆ ನೀಡಬೇಕೆಂಬುದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದರು. ಬಿಬಿಎಂಪಿ ಕಾಡುಗುಡಿ ಕಾರ್ಪೋರೇಟರ್ ಸಹ ಆಗಿರುವ ಎಸ್.ಮುನಿಸ್ವಾಮಿ ಈಗ ಕೋಲಾರದ ಸಂಸದರು ಸಹ ಆಗಿದ್ದಾರೆ. ಹೀಗಾಗಿ ಯಾವ ಪದವಿಗೆ ರಾಜಿನಾಮೆ ಕೊಡಬೇಕು ಅನ್ನೋದ್ರ ಬಗ್ಗೆ ಯೋಚನೆ ಮಾಡ್ತೀನಿ. ಇದರ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಬೆಳಗಾವಿಯಲ್ಲಿ ಮಾಜಿ ಸಚಿವ ಉಮೇಶ ಕತ್ತಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ನಿಜವಾದ ಸಾಲ ಮನ್ನಾ ಆಗಿದೆಯಾ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ ವಿಚಾರವಾಗಿಜೀವಂತ ಇಲ್ಲದೇ ಇರೋ ಸರ್ಕಾರ ಮುಂದುವರೆಸಿದ್ದಾರೆ.ಒಳ್ಳೆಯ ಸರ್ಕಾರ ಕೊಡಿ, ಇಲ್ಲವೇ ರಾಜೀನಾಮೆ ಕೊಡಿ.ದೇವೇಗೌಡರನ್ನು ಪ್ರಧಾನಿ, ಕುಮಾರಸ್ವಾಮಿಯನ್ನು ರಾಜ್ಯದ ಸಿಎಂ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕಾಂಗ್ರೆಸ್ ವಾಪಸ್ ಪಡೆಯಬೇಕು. ಜನರು ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಹೊಡೆಯುತ್ತಾರೆ.ನಮ್ಮನ್ನು …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವಿಚಾರವಾಗಿ ಬೆಳಗಾವಿಯಲ್ಲಿ ಮಾಜಿ ಸಚಿವ ಉಮೇಶ ಕತ್ತಿ ವ್ಯಂಗ್ಯವಾಗಿ ಮಾತನಾಡಿದರು. ಕುಮಾರಸ್ವಾಮಿ ಅವರ ಆರೋಗ್ಯ ಸರಿಯಲ್ಲ. ಅಪ್ಪನ ಕೃಪೆಯಿಂದ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ನಾಟಕ ಕಂಪನಿ ಹೊತ್ತುಕೊಂಡು ಗ್ರಾಮ ವಾಸ್ತ್ಯಕ್ಕೆ ಹೋಗಿದ್ದಾರೆ. ಹಿಂದೆಯು ಎಚಡಿಕೆ ಗ್ರಾಮ ವಾಸ್ತವ್ಯ ಮಾಡಿದ್ರು ಈಗಲೂ ಮಾಡ್ತಿದ್ದಾರೆ ಅದರಿಂದ ಏನು ಪ್ರಯೋಜನವಿಲ್ಲ. ಇಂತಹ ಸರ್ಕಾರ ಇಟ್ಟುಕೊಂಡು ಜನರಿಗೆ ಮೋಸ ಮಾಡುವ ಕೆಲಸ ಮಾಡದಂತೆ ಕತ್ತಿ ಹೇಳಿಕೆ ನೀಡಿದರು.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಜೀವನದ ಜಿಗುಪ್ಸೆಯಿಂದ ಸೆಲ್ಪಿ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದ ಕರವರ್ತಿ ಗ್ರಾಮದಲ್ಲಿ ನಡೆದಿದೆ. ಪವನ್ ಕುಮಾರ್ (19).ಮೃತ ಯುವಕ. ನನಗೆ ಈ ಜೀವನ ಬೇಡ, ನನ್ನ ನಂಬಿಕೆ ನನಗೆ ದ್ರೋಹ ಮಾಡಿದೆ ಎಂದು ವಿಡಿಯೋ ಮಾಡಿ ಸ್ಟೇಟಸ್ ಹಾಕಿದ್ದ ಯುವಕ ಹೊಂಡದಲ್ಲಿ ಹಾರಿ ಮೃತಪಟ್ಟಿದ್ದಾನೆ. ಕಳೆದ ಎರಡು ವರ್ಷದಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದ ಪವನ್ ಹಾಲಿನ ಪಾಯಿಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದ್ರೇ ಮೃತನ ಮೂಲ …
Read More »