Breaking News

ಜಿಲ್ಲೆ

ಬರದಿಂದ ತತ್ತರಿಸಿದ ಜನತೆಗೆ ತಂಪೆರೆದ ಮಳೆರಾಯ.

ಬೆಳಗಾವಿಮಳೆರಾಯ..ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವರುಣ ಬರದಿಂದ ತತ್ತರಿಸಿದ ಜನತೆಗೆ ತಂಪೆರೆದಿದ್ದಾನೆ. ಭಾರಿ ಮಳೆ ಹಿನ್ನೆಲೆಯಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರ ನಡುವೆಯೇ ಮಳೆಯಲ್ಲಿ ನೆನೆದು ನೂರಾರು ಭಕ್ತರು ಯಲ್ಲಮ್ಮ ದೇವಿ ದರ್ಶನ ಪಡೆದು ಪುನೀತರಾದರು. ಹಾಗೂ ರೈತರ ಮೊಗದಲಿ ಮಂದಹಾಸ ಮೂಡಿದಂತಾಗಿದೆ.

Read More »

ಲಂಚ ಸ್ವೀಕರಿಸುವಾಗ ತಹಶಿಲ್ದಾರ್ ಎಸಿಬಿ ಬಲೆಗೆ

1.25 ಲಕ್ಷ ಲಂಚ ಸ್ವೀಕರಿಸುವಾಗ ತಹಶಿಲ್ದಾರ್ ಎಸಿಬಿ ಬಲೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ತಹಶಿಲ್ದಾರ್ ಡಾ.ಪ್ರದೀಪ್ ಎಸಿಬಿ ಬಲೆಗೆ ಬಿದಿದ್ದು, ಊಟದ ಬಿಲ್ ಬಿಡುಗಡೆ ಮಾಡಲು ಲಂಚ ಕೇಳಿದ್ದರು. ಲೋಕಸಭಾ ಚುನಾವಣೆ ವೇಳೆ ಊಟೋಪಚಾರದ 9.37 ಲಕ್ಷ ಹಣ ಬಿಡುಗಡೆ ಮಾಡಬೇಕಿತ್ತು. ಆದ್ರೇ ಈ ಹಣ ಬಿಡುಗಡೆ ಮಾಡುವುದಕ್ಕೆ 1.25 ಲಕ್ಷ ಹಣ ಕೇಳಿ, ಇಂದು ಆ ಹಣವನ್ನು ಪಡೆಯುವಾಗ ಸಿಕ್ಕಿ ಬಿದಿದ್ದಾರೆ. ಎಸಿಬಿ …

Read More »

ವಿಶ್ವ ಯೊಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಐದನೇಯ ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಅಥಣಿ ಯಲ್ಲಿ ಯೋಗಾಬ್ಯಾಸ ನಡೆಸಲಾಯಿತು. ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ನೂರಾರು ಸಾರ್ವಜನಿಕರು ಏಕಕಾಲಕ್ಕೆ ಯೋಗ ತಾಲೀಮು ನಡೆಸುವ ಮೂಲಕ ವಿಶ್ವ ಯೋಗ ದಿನಾಚರಣೆಯ ಕಳೆಯನ್ನು ಹೆಚ್ಚಿಸಿದ್ದು ಕಂಡು ಬಂತು… ಅಷ್ಟೇ ಅಲ್ಲದೆ ಅಥಣಿ ಪಟ್ಟಣದ ವಿವಿಧ ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳು ಯೋಗಾಬ್ಯಾಸದಲ್ಲಿ ತೊಡಗುವಂತೆ ಮಾಡಿದ್ದು ಯೋಗದಿಂದ ರೋಗಗಳು ವಾಸಿಯಾಗಿ ಸ್ವಸ್ಥ,ಸುಂದರ ಸಮಾಜಕ್ಕಾಗಿ ನಿತ್ಯವೂ …

Read More »

ಅಕ್ರಮವಾಗಿ ಹಸುಗಳನ್ನ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದ ಶ್ರೀರಾಮಸೇನೆ

ಅಕ್ರಮವಾಗಿ ಹಸುಗಳನ್ನ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೋಲಾರ ಹೊರವಲಯದ ಪವನ್ ಕಾಲೇಜು ಮೈದಾನದ ಬಳಿ ನಡೆದಿದೆ. ಟಾಟಾ ಏಸ್ ನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಣಿಕೆ ಮಾಡುತ್ತಿದ್ದಾಗ ವೇಳೆ ಶ್ರೀರಾಮಸೇನೆ ಕಾರ್ಯಕರ್ತರು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ. ಟಾಟಾ ಏಸ್ ವಾಹನ ಸೇರಿದಂತೆ ಒಂಬತ್ತು ಹಸುಗಳು, ಚಾಲಕನನ್ನ ನಗರಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ವಾಹನದ ಚಾಲಕನನ್ನು ವಿಚಾರಣೆ ನಡೆಸಿದ್ದಾರೆ.

Read More »

ದಾವಣಗೆರೆಯಲ್ಲು ಯೋಗ ದಿನದ ಸಂಭ್ರಮ.

ಇಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲು ಯೋಗ ದಿನದ ಸಂಭ್ರಮ ಮನೆಮಾಡಿತ್ತು. ಜಿಲ್ಲಾಡಳಿತ, ಆಯುಷ್ ಇಲಾಖೆ ಮತ್ತು ಯೋಗ ಒಕ್ಕೂಟದಿಂದ ಯೋಗ ಪ್ರದರ್ಶನ ಮಾಡಲಾಯಿತು. ದಾವಣಗೆರೆ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮದಲ್ಲಿ ಯೋಗ ಕಾರ್ಯಕ್ರಮದಲ್ಲಿ ಯೋಗಪಟುಗಳು ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು. ಪೇಜಾವರದ ವಿಶ್ವೇಶತೀರ್ಥ ಶ್ರೀಗಳು , ವೈದ್ಯ ಚನ್ನಬಸವಣ್ಣ, ಸೇರಿಂದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Read More »

ಕೇಂದ್ರ ಸಚಿವ ಸುರೇಶ ಅಂಗಡಿ ವಿರುದ್ಧ ಪ್ರತಿಭಟನೆ

ಸಂಸತ್ತಿನಲ್ಲಿ ಇಂಗ್ಲಿಷ್ ಪ್ರಮಾಣ ವಚನ ಸ್ವೀಕಾರ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ‌ನಡೆಸಿದರು. ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರತಿಕೃತಿ ದಹಿಸಿ ಅಂಗಡಿ ವಿರುದ್ಧ ಘೋಷಣೆ ಕೂಗಿದರು. ಅಂಗಡಿ ಮನೆ ಮುಂದೆ ಧರಣಿಗೆ ಮುಂದಾದ‌ ಕರವೇ ಕಾರ್ಯಕರ್ತರನ್ನು ಪೊಲೀಸರು ರಸ್ತೆಯಲ್ಲಿ ತಡೆದರು ಇದರಿಂದಾಗಿ ಪೊಲೀಸರು ಮತ್ತು ಕರವೇ …

Read More »

ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ಭ್ರಷ್ಟರ ಮೇಲೆ ದಾಳಿ

ಕೋಲಾರ ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಭ್ರಷ್ಟರ ಮೇಲೆ ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕರ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕ ನಾರಾಯಣಸ್ವಾಮಿ ಸಂಬಂಧಿಕರು ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವಮನೆಗಳ ಮೇಲೆ ದಾಳಿಯಾಗಿದೆ. ಅಧಿಕಾರಿ ನಾರಾಯಣಸ್ವಾಮಿ ಮಾವ ಶಿವಪ್ಪ, ತಾಯಿ ತುಳಸಮ್ಮ ನಿವಾಸಗಳ ಮೇಲೆ ಹಾಗೂ ಬೆಂಗಳೂರಿನ‌ ಜಯನಗರ ನಿವಾಸ ಮತ್ತು ಚಿಂತಾಮಣಿ …

Read More »

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ದಾವಣಗೆರೆಯಲ್ಲಿ ಎಬಿವಿಪಿ ಪ್ರತಿಭಟನೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ದಾವಣಗೆರೆಯಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿತು. ನಗರದ ಜಯದೇವ ವೃತ್ತದ ಮುಖಾಂತರ ಎಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ,ಶಿಕ್ಷಣವೆಂಬುದು ಸರ್ವರಿಗೂ ಸಿಗಬೇಕಾಗಿರು ಅಮೂಲ್ಯ ಸಂಪತ್ತು ಎಂಬ ಶ್ರೇಷ್ಠ ಪರಿಕಲ್ಪನೆ ನಮ್ಮದು ,‌ಆದರೆ 2018-19 ನೇ ಸಾಲಿನ ಬಜೆಟ್‌ ನಲ್ಲಿ ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ …

Read More »

ಬಿರುಕಿನಿಂದ ಸ್ಥಳೀಯರು ಆತಂಕ

ಕಳೆದ ಐದು ವರ್ಷಗಳ ಹಿಂದೆ 80 ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯ ಮಣಿಪಾಲ- ಅಲೆವೂರು ರಸ್ತೆಯ ಮಂಚಿಕೆರೆ ಎಂಬಲ್ಲಿ ರುವ ನಾಗಬ್ರಹ್ಮಸ್ಥಾನದ ಎದುರಿನ ಎರಡನೆ ಅಡ್ಡರಸ್ತೆಯ ಭೂಮಿಯಲ್ಲಿ ಕಂಡು ಬಂದಿರುವ ಬಿರುಕು ಇದೀಗ ಇನ್ನಷ್ಟು ಹಿರಿದಾಗಿದ್ದು, ಇಲ್ಲಿನ ಮನೆ ಹಾಗೂ ಬಾವಿಗಳಿಗೆ ಹಾನಿ ಉಂಟು ಮಾಡಿರುವ ಈ ಬಿರುಕಿನಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. 2014ರ ಜುಲೈ ತಿಂಗಳಲ್ಲಿ ಈ ಪರಿಸರದಲ್ಲಿ ಭೂಮಿ ಬಿರುಕು ಬಿಟ್ಟಿರುವ ವಿಚಾರ ಸ್ಥಳೀಯ ಗಮನಕ್ಕೆ ಬಂದಿದ್ದು, ಆಗ …

Read More »

ಹಿರಿಯ ರಂಗಕರ್ಮಿ, ಸಾಹಿತಿ ಡಿ ಕೆ ಚೌಟ ಇನ್ನಿಲ್ಲ

ಉದ್ಯಮಿ, ಕನ್ನಡದ ಹಿರಿಯ ರಂಗಕರ್ಮಿ, ಬರಹಗಾರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ. ಚೌಟ ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.ಡಿ.ಕೆ. ಚೌಟ ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿ.ಕೆ. ಚೌಟ ಅವರು ಕೊನೆಯುಸಿರೆಳೆದಿದ್ದಾರೆ. ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿದ್ದ ಡಿ.ಕೆ. ಚೌಟ ತುಳು ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿಯನ್ನೂ ಪಡೆದಿದ್ದರು. ಚಿತ್ರಕಲಾ ಪರಿಷತ್‌ ಅಧ್ಯಕ್ಷರಾಗಿಯೂ ಡಿ.ಕೆ. …

Read More »