ಉದ್ಯಮಿ, ಕನ್ನಡದ ಹಿರಿಯ ರಂಗಕರ್ಮಿ, ಬರಹಗಾರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ. ಚೌಟ ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.ಡಿ.ಕೆ. ಚೌಟ ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿ.ಕೆ. ಚೌಟ ಅವರು ಕೊನೆಯುಸಿರೆಳೆದಿದ್ದಾರೆ. ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿದ್ದ ಡಿ.ಕೆ. ಚೌಟ ತುಳು ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿಯನ್ನೂ ಪಡೆದಿದ್ದರು. ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿಯೂ ಡಿ.ಕೆ. ಚೌಟ ಕಾರ್ಯ ನಿರ್ವಹಿಸಿದ್ದರು. ದರ್ಬೆ ಕೃಷ್ಣಾನಂದ ಚೌಟ ಡಿ.ಕೆ.ಚೌಟ ಎಂದೇ ಪ್ರಸಿದ್ಧಿಯಾಗಿದ್ದರು. ಜೂ.1, 1938ರಲ್ಲಿ ಮಂಜೇಶ್ವರ ಸಮೀಪದ ಮೀಯಪ್ಪದಾವಿನ ತುಳು ಮಾತನಾಡುತ್ತಿದ್ದ ಕೇರಳದ ಬಂಟ ಮನೆತನದಲ್ಲಿ ಜನಿಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಸಂದೀಪ್ ಚೌಟ ಸಂಗೀತಗಾರರಾಗಿದ್ದರೆ, ಪ್ರಜ್ಞಾ ಚೌಟ ಜನಾಂಗಶಾಸ್ತ್ರಜ್ಞೆಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





