Breaking News

UP: ಮನೆಯಲ್ಲಿ ಕರೆಂಟ್ ಇಲ್ಲ, ಸೆಕೆ ತಡೆಯಲಾಗದೆ ಎಟಿಎಂ ಎಸಿಗೆ ಬಂದು ಕುಳಿತ ಕುಟುಂಬ!

ವಿದ್ಯುತ್ ಕಡಿತದ ವಿರುದ್ಧ ಜನರು ಪ್ರತಿಭಟನೆ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ. ಇದೀಗ ಕುಟುಂಬವೊಂದು ಈ ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಎಟಿಎಂ ಬೂತ್ ನಲ್ಲೇ ಆಶ್ರಯ ಪಡೆದುಕೊಂಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿದ್ಯುತ್ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ಭ್ರಷ್ಟ ಇಲಾಖೆ ಯಾವುದಾದರೂ ಇದ್ದರೆ ಅದುವೇ ವಿದ್ಯುತ್ ಇಲಾಖೆ, ಇದನ್ನು ತಕ್ಷಣವೇ ಖಾಸಗಿಕರಣಗೊಳಿಸಬೇಕು ಎಂದಿದ್ದಾರೆ. ಇನ್ನೊಬ್ಬರು, ಇದರಲ್ಲಿ ಯಾವುದೇ ತಪ್ಪಿಲ್ಲ, ಅಧಿಕಾರಿಗಳು ಮೂಲಭೂತ ಸೌಕಾರ್ಯ ಒದಗಿಸಲು ಸಾಧ್ಯವಾಗದಿದ್ದಾಗ, ಜನಸಾಮಾನ್ಯರು ಇಂತಹ ವಿಧಾನಗಳನ್ನು ಅನುಸರಿಸಬಹುದು. ನಾವು ಜನರನ್ನು ದೂಷಿಸಬಾರದು ಹಾಗೂ ಪ್ರಶ್ನಿಸಬಾರದು ಎಂದಿದ್ದಾರೆ. ಮತ್ತೊಬ್ಬರು, ಇದು ನಮ್ಮ ದೇಶದ ಸ್ಥಿತಿ, ಹೆಸರಿಗಷ್ಟೇ ಅಭಿವೃದ್ಧಿ,ಆದರೆ ಜನರು ಒದ್ದಾಡುತ್ತಿರುವುದು ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *