Breaking News

ಜಿಲ್ಲೆ

ಭವಿಷ್ಯದ ಕೌಶಲ್ಯಗಳ ಕುರಿತಾದ ಎಪಿಜೆ ಕಲಾಂ ಫ್ಯೂಯಲ್ ಸಮಾವೇಶ ಜೂ.2ಕ್ಕೆ

ಫ್ರೇಂಡ್ಸ್ ಯೂನಿಯನ್ ಫಾರ್ ಎನರ್ಜೈಸಿಂಗ್ ಲೈವ್ಸ್ (ಪ್ಯೂಲ್) ವತಿಯಿಂದ ಎಪಿಜೆ ಕಲಾಂ ಫ್ಯೂಯೆಲ್ ಫೆಲೋಗಳ ಸಂಕಿರಣ ಮತ್ತು ಭವಿಷ್ಯದ ಕೌಶಲ್ಯಗಳ ಕುರಿತಾದ ಸಮಾವೇಶವನ್ನು ಮೇ.2 ರಂದು ಬೆಳಿಗ್ಗೆ 11 ಕ್ಕೆ ಇಲ್ಲಿನ ಡೆನಿಸನ್ಸ್ ಹೊಟೆಲ್ ನಲ್ಲಿ ಆಯೋಜಿಸಲಾಗಿದೆ ಎಂದು ಪ್ಯೂಯೆಲ್ ಅಧ್ಯಕ್ಷ ಚೇತನ ದೇಶಪಾಂಡೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಫ್ಯೂಯೆಲ್ ಫೆಲೋಗಳ ಸಂಕಿರಣ, ನಾಯಕತ್ವ ಪ್ರಶಸ್ತಿಗಳ ಪ್ರಧಾನ ಮತ್ತು ಶಿಕ್ಷಣದಲ್ಲಿ ನಾವೀನ್ಯತೆ, ಉದ್ಯಮಕ್ಕೆ ಪೂರಕವಾಗಿರುವ ಶಿಕ್ಷಣವನ್ನು …

Read More »

ಬೀಕರ ರಸ್ತೆ ಅಪಘಾತ

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಬಳಿ ಧನದ ಮಾರ್ಕೆಟ್ ಹತ್ತಿರ ಘಟನೆನೀಲಕಂಠಪ್ಪ ಯಲಿಗಾರ 55,ನೀಲವ್ವಾ ಯಲಿಗಾರ 85, ಮೃತ ದುರ್ದೈವಿಗಳುಮೃತರು ಶಿಗ್ಗಾವಿ ಮತ್ತು ಯಳವಟ್ಟಿ ಗ್ರಾಮದ ನಿವಾಸಿಗಳುಇಬ್ಬರು ಮಕ್ಕಳು ಸೇರಿ ಎಂಟು ಜನರಿಗೆ ಗಾಯ, ಆಸ್ಪತ್ರೆಗೆ ದಾಖಲುಪಲ್ಟಿಯಾದ ರಭಸಕ್ಕೆ ನಜ್ಜುಗುಜ್ಜಾದ ವಾಹನಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರ ಪಲ್ಟಿಯಾಗಿದೆಈ ಪರಿಣಾಮ ಸಾವು ನೋವು ಸಂಭವಿಸಿದೆಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

Read More »

ಕಾಲ್ನಡಿಗೆಯಲ್ಲಿ ಕಚೇರಿಗೆ ಬಂದ ಜಿಲ್ಲಾಧಿಕಾರಿ

ಹಾಸನ : ‘ಖಾಸಗಿ ವಾಹನಗಳಿಗೆ ರಜೆ ಕೊಡೋಣ-ಜೀವಪ್ರಭೇದಗಳನ್ನು ಕಾಪಾಡೋಣ’ ಎಂಬ ಘೋಷಣೆಯೊಂದಿಗೆ ವಿಶ್ವ ಭೂ-ದಿನದ ಅಂಗವಾಗಿ ಹಾಸನದಲ್ಲಿ ಸೋಮವಾರ ಕರೆ ನೀಡಿದ್ದ ಸ್ವಂತ ವಾಹನಗಳ ಬಳಕೆ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಜಿಲ್ಲಾಡಳಿತ, ಜಿಪಂ, ನ್ಯಾಯಾಂಗ ಇಲಾಖೆ ಸೇರಿದಂತೆ ನಾನಾ ಇಲಾಖೆಗಳು, ಹಸಿರು ಭೂಮಿ ಪ್ರತಿಷ್ಠಾನ, ವ್ಯಾಪಾರಸ್ಥರು, ವೈದ್ಯಕೀಯ ಕ್ಷೇತ್ರದವರು ಸೈಕಲ್‌, ಕಾಲ್ನಡಿಗೆ ಹಾಗೂ ಕುದುರೆ ಮೂಲಕ ಜಾಥಾದಲ್ಲಿ ಭಾಗವಹಿಸಿ ವಿಶ್ವ ಭೂ- ದಿನಾಚರಣೆಗೆ ಮೆರುಗು ನೀಡಿದರು.ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ …

Read More »

ಸಿಎಂ ಕಾರು ತಡೆದು ತಪಾಸಣೆ ನಡೆಸಿದ ಪೋಲಿಸರು

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಪ್ರತಿ ವಾಹನದ ಮೇಲೂ ಹದ್ದಿನ ಕಣ್ಣಿಟ್ಟಿದೆ. ಸಾಮಾನ್ಯ ವ್ಯಕ್ತಿಯ ವಾಹನದಿಂದ ಹಿಡಿದು ಎಂತಹ ದೊಡ್ಡ ವ್ಯಕ್ತಿಯಾದರೂ ಪ್ರತಿ ವಾಹನವನ್ನು ತಪಾಸಣೆಗೆ ಒಳಪಡಿಸುತ್ತಿದೆ. ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಬಿಡದ ಚುನಾವಣಾ ಆಯೋಗ ಚನ್ನರಾಯಪಟ್ಟಣದ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಅವರ ಎಸ್ಯುವಿ ಕಾರನ್ನು ತಡೆಹಿಡಿದು ತಪಾಸಣೆ ನಡೆಸಿದರು.ಶಿವಮೊಗ್ಗದಲ್ಲಿಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ …

Read More »

ಖರ್ಚಿಗೆ ತಮ್ಮ ದುಡಿಮೆಯ ಹಣ ನೀಡಿ ಔದಾರ್ಯ ಮೆರೆದ ಮಂಡ್ಯ ಮತದಾರರು..!

ಮಂಡ್ಯ: ಚುನಾವಣೆಯಲ್ಲಿ ಹಣ ಬಲ, ತೋಳ್ಬಲ ಇರೋರೇ ಗೆಲ್ಲೋದು ಅನ್ನೋ ಮಾತು ಸಾಮಾನ್ಯವಾಗಿ ಕೇಳಿ ಬರ್ತಾನೇ ಇರುತ್ತೆ. ಅದ್ರಲ್ಲೂ ಕೆಲ ಅಭ್ಯರ್ಥಿಗಳಂತೂ ನೀರಿನಂತೆ ಹಣವನ್ನು ಹರಿಸ್ತಾನೇ ಇರ್ತಾರೆ. ಅಧಿಕಾರಿಗಳು ಕೂಡ ಬೆಸ್ತು ಬೀಳೋವಷ್ಟು ಹಣವನ್ನು ಕ್ರೋಡಿಕರಿಸಿ ಇಟ್ಟಿರ್ತಾರೆ. ಅಪ್ಪಿ ತಪ್ಪಿ ಸಿಕ್ಕಿ ಹಾಕಿಕೊಂಡಾಗಲೇ ಜನರಿಗೂ ಇದೇನಪ್ಪ ಈ ಮನುಷ್ಯ ಇಷ್ಟು ಹಣ ಇಟ್ಟವನೆ ಅಂತಾ ಗೊತ್ತಾಗುತ್ತೆ. ಹೀಗೆ ಕ್ರೋಡಿಕರಿಸಿದ ಹಣವನ್ನು ಆಯಾ ಪಕ್ಷಗಳು, ಅಭ್ಯರ್ಥಿಗಳು ಮತಗಳನ್ನು ಕೊಂಡುಕೊಳ್ಳಲು, ಮತದಾರರನ್ನು ಪ್ರೇರೇಪಿಸಲು …

Read More »

ಇಂದು ಅಮಿತ್ ಶಾ ರೋಡ್ ಶೋ..

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಇಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪದ್ಮನಾಭನಗರ ಕ್ಷೇತ್ರದಲ್ಲಿ ರೋಡ್ ಶೋ ನಡೆಯಲಿದೆ.ಸಂಜೆ 6 ಗಂಟೆಗೆ ಆರಂಭವಾಗಲಿರುವ ರೋಡ್ ಶೋನಲ್ಲಿ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತಯಾಚನೆ ಮಾಡಲಿದ್ದಾರೆ. ಆರ್.ಅಶೋಕ್, ವಿ.ಸೋಮಣ್ಣ, ಸತೀಶ್ ರೆಡ್ಡಿ, ರವಿಸುಬ್ರಮಣ್ಯ, ಉದಯ್ ಗರುಡಾಚಾರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಅಮಿತ್ …

Read More »

ಸಿಇಓ ಯಾಲಕ್ಕಿಗೌಡ ಎತ್ತಂಗಡಿ..

ಮಂಡ್ಯ: ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಂಡ್ಯ ಸಿಇಓ ಯಾಲಕ್ಕಿಗೌಡರನ್ನ ದಿಢೀರ್ ಅಂತಾ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ಮಂಡ್ಯ ಸಿಇಓ ಆಗಿ ಅನಿಲ್ ಕುಮಾರ್ ಮೆನನ್ ರಾಜೇಂದ್ರನ್ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೊಂದೆಡೆ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಾಗಿ ಪ್ರಶಾಂತ್ ಕುಮಾರ್ ಮಿಶ್ರಾ ನೇಮಕವಾಗಿದ್ದಾರೆ. ಜಿಲ್ಲಾಧಿಕಾರಿ ಮಂಜುಶ್ರೀ ಹಾಗೂ ಎಸ್​ಪಿ ಶಿವಪ್ರಕಾಶ್ ದೇವರಾಜ್ ಅವರನ್ನ ಇಂದು ಎತ್ತಂಗಡಿ ಮಾಡಲಾಗುತ್ತದೆ ಅಂತಾ ಹೇಳಲಾಗುತ್ತಿದೆ. ಈ ಬಗ್ಗೆ ಇಂದು …

Read More »

ಕಿಚ್ಚ ಸುದೀಪ್‌ಗೆ ಅರೆಸ್ಟ್ ವಾರೆಂಟ್ ಜಾರಿ..!

ಚಿಕ್ಕಮಗಳೂರು : ಧಾರಾವಾಹಿ ಶೂಟಿಂಗ್‌ಗಾಗಿ ತೆಗೆದುಕೊಂಡಿದ್ದ ಮನೆ ಮತ್ತು ತೋಟದ ಬಾಡಿಗೆ ನೀಡದೇ ವಂಚಿಸಿದ್ದ ಆರೋಪದಡಿ, ನಟ ಕಿಚ್ಚ ಸುದೀಪ್‌ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.ಮನೆ ಮತ್ತು ತೋಟದ ಮಾಲೀಕ ದೀಪಕ್ ಮಯೂರ್ ಎಂಬುವವರು ಸುದೀಪ್ ವಿರುದ್ಧ ದೂರು ದಾಖಲಿಸಿದ್ದು, ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯದಿಂದ ಸುದೀಪ್‌ಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.ಸುದೀಪ್‌ ನಿರ್ಮಾಣದ ವಾರಸ್ದಾರ ಧಾರಾವಾಹಿಗಾಗಿ, ದೀಪಕ್ ಮನೆ ಮತ್ತು ತೋಟ ಬಾಡಿಗೆಗೆ …

Read More »

ಮೇ.1 ರಿಂದ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮ ಕಡ್ಡಾಯ…

ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಮೇ. 1 ರಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.ಸರ್ಕಾರಿ ಕಚೇರಿಗಳಲ್ಲಿ ನೌಕರರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಕೆಲ ನೌಕರರು ಕೆಲಸಕ್ಕೆ ತಡವಾಗಿ ಆಗಮಿಸಿ, ಬೇಗ ಕಚೇರಿಯಿಂದ ಹೋಗುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ.2013 ರಲ್ಲೇ …

Read More »

ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 19ಕ್ಕೆ ಏರಿಕೆ..

ಧಾರವಾಡ: ಮಾರ್ಚ್ 19, ಮಂಗಳವಾರದಂದು ನಗರದ ಕುಮಾರೇಶ್ವರನಗರದಲ್ಲಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 19 ಕ್ಕೆ ಏರಿದೆ.ಅಂತಿಮ ಹಂತದ ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿದ್ದ ಮತ್ತಿಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ. ಮೃತರನ್ನು ವಾಘು ಮೋರೆ(24), ಸಹದೇವ(50) ಎಂದು ಗುರುತಿಸಲಾಗಿದೆ.ಮಂಗಳವಾರ ಸಂಭವಿಸಿದ ಈ ದುರ್ಘಟನೆಯಲ್ಲಿ 19 ಮಂದಿ ಮರಣ ಹೊಂದಿದ್ದು, 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. …

Read More »