Breaking News

ಹುಬ್ಬಳ್ಳಿಯಲ್ಲಿ ಸಾರ್ವಜನಿಕರಿಂದ ಅಳವಡಿಸಲ್ಪಟ್ಟ,ಸಿಸಿಟವಿ ಕ್ಯಾಮರಗಳ ಉದ್ಘಾಟನಾ ಸಮಾರಂಭ ಹಾಗೂ ಗಾಂಜಾ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮ..

ಜನಸ್ನೇಹಿ ಪೊಲೀಸ್ ಬೀಟ್ ನಂ.52 ಹಾಗೂ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೇಟ್ ಹಳೇ ಹುಬ್ಬಳ್ಳಿ ಪೋಲಿಸ್ ಅಧಿಕಾರಿಗಳು ಸಮ್ಮುಖದಲ್ಲಿ ಸಾರ್ವಜನಿಕರಿಂದ ಅಳವಡಿಸಲ್ಪಟ್ಟ ಸಿಸಿಟವಿ ಕ್ಯಾಮಾರಗಳ ಉದ್ಘಾಟನಾ ಸಮಾರಂಭ ಹಾಗೂ ಗಾಂಜಾ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು

ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತರಾದ ಸನ್ಮಾನ್ಯ ಶ್ರೀ ರಮಣ ಗುಪ್ತಾ ಅವರು ನೇರವೇರಿಸಲಿದ್ದಾರೆ. ಈ ಕ್ರಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪೋಲಿಸ್ ಆಯುಕ್ತರಾದ ರಾಜೀವ್ ಎಂ (ಕಾನೂನು ಮತ್ತು ಸುವ್ಯವಸ್ಥಿತೆ ) ಹಾಗೂ ಅಪರಾಧ ವಿಭಾಗದ ಶ್ರೀ ಗೋಪಾಲ ಬ್ಯಾಕೋಡ ಅವರು ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಪೋಲಿಸ್ ಆಯುಕ್ತರಾದ ಆರ್.ಕೆ.ಪಾಟೀಲ ಅವರು ಭಾಗವಹಿಸಲಿದ್ಧಾರೆ.ಇನ್ನು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ವೈದ್ಯರಾದ

ಡಾ.ರಾಮಚಂದ್ರ ಕಾರಟಗಿ, ಡಾ.ಬಸವರಾಜ ಸಂಕನಗೌಡ್ರ , ನಿವೃತ್ತ ಶಿಕ್ಷಕರಾದ ಶ್ರೀ ಯುನೂಸ್ ಎಂ.ಸಿದ್ದೀಕಿ, ಸಮಾಜದ ಸೇವಕರಾದ ರಾಜು ವೈ ಗೋಕಾಕ ಸೇರಿದಂತೆ ಹಲವಾರು ಸೇವಕರು

ಉಪನ್ಯಾಸವನ್ನು ನೀಡಲಿದ್ದಾರೆ.ಇನ್ನು ಕಾರ್ಯಕ್ರಮದ ಸ್ವಾಗತವನ್ನು ಹಳೆ ಹುಬ್ಬಳ್ಳಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಸುರೇಶ್ ಹೆಚ್, ಯಳ್ಳೂರ ಅವರು ನೆರವೇರಿಸಲಿದ್ದಾರೆ. ಹುಬ್ಬಳ್ಳಿಯ ನ್ಯೂ ಆನಂದ ನಗರದ ಸಮಸ್ತ ನಾಗರಿಕರು ಹಾಗೂ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಭಾಗವಹಿಸಲು ಕೋರಲಾಗಿದೆ.ಕಾರ್ಯಕ್ರಮ ನಡೆಯುವ ಸ್ಥಳ ಜನಸ್ನೇಹಿ ಪೋಲಿಸ್ ಬೀಟ್ ನಂ 52 ದಿನಾಂಕ 19-06-2023 ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿದೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *