ಫ್ರೇಂಡ್ಸ್ ಯೂನಿಯನ್ ಫಾರ್ ಎನರ್ಜೈಸಿಂಗ್ ಲೈವ್ಸ್ (ಪ್ಯೂಲ್) ವತಿಯಿಂದ ಎಪಿಜೆ ಕಲಾಂ ಫ್ಯೂಯೆಲ್ ಫೆಲೋಗಳ ಸಂಕಿರಣ ಮತ್ತು ಭವಿಷ್ಯದ ಕೌಶಲ್ಯಗಳ ಕುರಿತಾದ ಸಮಾವೇಶವನ್ನು ಮೇ.2 ರಂದು ಬೆಳಿಗ್ಗೆ 11 ಕ್ಕೆ ಇಲ್ಲಿನ ಡೆನಿಸನ್ಸ್ ಹೊಟೆಲ್ ನಲ್ಲಿ ಆಯೋಜಿಸಲಾಗಿದೆ ಎಂದು ಪ್ಯೂಯೆಲ್ ಅಧ್ಯಕ್ಷ ಚೇತನ ದೇಶಪಾಂಡೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಫ್ಯೂಯೆಲ್ ಫೆಲೋಗಳ ಸಂಕಿರಣ, ನಾಯಕತ್ವ ಪ್ರಶಸ್ತಿಗಳ ಪ್ರಧಾನ ಮತ್ತು ಶಿಕ್ಷಣದಲ್ಲಿ ನಾವೀನ್ಯತೆ, ಉದ್ಯಮಕ್ಕೆ ಪೂರಕವಾಗಿರುವ ಶಿಕ್ಷಣವನ್ನು ರೂಪಿಸಿ ನೀಡುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ, ಜಗತ್ತಿನಾದ್ಯಂತ ಜರುಗಿದ ಜಾಗತೀಕರಣದ ಸವಾಲುಗಳು, ತಾಂತ್ರಿಕ ಅಭಿವೃದ್ಧಿ ಸಾಧಿಸುವಲ್ಲಿ ಶಿಕ್ಷಣ ಪ್ರಸರಣ ಪಧ್ಧತಿಯಲ್ಲಾದ ಪರಿವರ್ತನೆಗಳ ಕುರಿತಾದ ಚರ್ಚೆಗಳು ನಡೆಯಲಿದ್ದು. ಪ್ರಮುಖ ಭಾಷಣಕಾರರಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನವದೆಹಲಿ ಅಧ್ಯಕ್ಷ ಪ್ರೋ.ಅನಿಲ ಡಿ.ಸಹಸ್ರಬುದ್ಧೆ, ಕವಿವಿ ಉಪಕುಲಪತಿ ಪ್ರಮೋದ ಬಿ. ಗಾಯಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕರಿಸಿದ್ದಪ್ಪ, ಪುಣೆಯ ಸಿಓಇಪಿ ಆಡಳಿತ ನಿರ್ದೇಶಕ ಮಂಡಳಿಯ ಪ್ರೊ.ಸಂಜಯ ಇನಾಮದಾರ, ಬೆಂಗಳೂರಿನ ಭಾರತೀಯ ನಿರ್ವಹಣಾ ವಿಜ್ಞಾನ ಸಂಸ್ಥೆಯ ಸಂಸ್ಥೆಯ ಡಾ.ಕೆ.ಆರ್.ಎಸ್.ಮೂರ್ತಿ ಸೇರಿದಂತೆ ಮುಂತಾದ ಶಿಕ್ಷಣ ತಜ್ಞರು ಮಾತನಾಡಲಿದ್ದಾರೆ ಎಂದರು. ಸಮಾವೇಶದಲ್ಲಿ ಕಾರ್ಪೋರೆಟ್ ಲೋಕದ ನುರಿತ ತಜ್ಞರುಗಳಾದ ವೋಲ್ವೊ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರು ಕಮಲ ಬಾಲಿ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿಯ ಗರಿಮಾ ಬಬ್ಬರ ಸೇರಿದಂತೆ ಮುಂತಾದವರು ಭಾಗಿಯಾಗಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂತೋಷ ಹುರಲಿಕೊಪ್ಪಿ ಸೇರಿದಂತೆ ಮುಂತಾದವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





