BigTv News
October 15, 2024
Breaking News, ಮೈಸೂರು
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಲಾತಂಡಗಳಿಗೆ ಬಹುಮಾನ ಘೋಷಿಸಲಾಗಿದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಸಿದ್ದಾಪುರ (ಕಾರಿಕೊಳ್ಳ)ದ ಸಂಜೀತ ಸಿ.ಕೋತ ನೇತೃತ್ವದ ರೇವಣಸಿದ್ದೇಶ್ವರ ಯುವಕ ಕಲಾಸಂಘದ ಸತ್ತಿಗೆ ಕುಣಿತಕ್ಕೆ ಪ್ರಥಮ ಬಹುಮಾನ (₹ 15 ಸಾವಿರ) ದೊರೆತಿದೆ. ಯಾದಗಿರಿಯ ವಿಶ್ವಾಸಪುರ ತಾಂಡಾದ ಮನೋಹರ ಖೇಮು ಪವಾರ ಸಾರಥ್ಯದ ಲಂಬಾಣಿ ನೃತ್ಯ ಕಲಾ ತಂಡ, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕ್ಯಾತಘಟ್ಟದ ಕೀರ್ತಿನಿ …
Read More »
BigTv News
October 15, 2024
Breaking News, ಮೈಸೂರು
ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾ ಉತ್ಸವ ಹಿನ್ನೆಲೆಯಲ್ಲಿ ಈ ಬಾರಿ 16 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿದ್ದು ಐತಿಹಾಸಿಕ ದಾಖಲೆಯಾಗಿದೆ. ಈ ಮೂಲಕ 500 ಕೋಟಿ ರೂ.ಗೂ ಅಧಿಕ ಆರ್ಥಿಕ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಅ. 3ರಂದು ಚಾಮುಂಡಿಬೆಟ್ಟದಲ್ಲಿ ದೇವಿಯ ಅಗ್ರಪೂಜೆಯೊಂದಿಗೆ ಆರಂಭವಾಗಿ ಅ.12ರಂದು ಅಭಿಮನ್ಯು ನೇತೃತ್ವದಲ್ಲಿ ನಡೆದ ಜಂಬೂ ಸವಾರಿ ಮೆರವಣಿಗೆಯವರೆಗೆ ರಾಜ್ಯದ ವಿವಿಧ ಮೂಲೆಗಳಿಂದಷ್ಟೇ ಅಲ್ಲದೆ ದೇಶ, ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಿ …
Read More »
BigTv News
October 14, 2024
Breaking News, ಶಿವಮೊಗ್ಗ
ಸಾಗರ: ಬೆಳೆ ಹಾನಿ ಮಾಡುವ ಮಂಗಗಳನ್ನು ಹಿಡಿಯಲು ಮುಂದಾದರೆ ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧ. ಆದ ನಷ್ಟಕ್ಕೆ ಕಾಯ್ದೆ ಪ್ರಕಾರವೇ ಬೆಳೆ ಪರಿಹಾರ ಕಲ್ಪಿಸಿ ಅಂದರೆ ಮಾತ್ರ ಅಧಿಕಾರಿಗಳಿಂದ ತೀವ್ರ ಮೌನ, ಅರಣ್ಯ ಇಲಾಖೆಯ ಈ ಇಬ್ಬಂದಿತನ ಮಲೆನಾಡಿನ ರೈತರನ್ನು ಹೈರಾಣಾಗಿಸಿದೆ. ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಂಗ ಹಾಗೂ ಮುಸಿಯಾಗಳ ಹಾವಳಿ ವಿಪರೀತವಾಗಿದೆ. ಬೆಳೆ ಹಾನಿ ಮಾಡಿ ರೈತ ಸಮೂಹಕ್ಕೆ ತೊಂದರೆ ಕೊಡುವ ಜೊತೆಗೆ …
Read More »
BigTv News
October 12, 2024
Breaking News, ಮೈಸೂರು
ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೂ ಮುನ್ನ ನಂದಿ ಪೂಜೆ ನೆರವೇರಿಸಲಾಯಿತು, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು ಹಾಗೂ ಶಾಸಕರೊಂದಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ದಸರಾ ಹಬ್ಬದ ಭಾಗವಾಗಿ ಶನಿವಾರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಬಾರಿ ಕರ್ನಾಟಕದಲ್ಲಿ ಮಳೆ ಉತ್ತಮವಾಗಿ ಜಲಾಶಯಗಳು ತುಂಬಿವೆ. ಉತ್ತಮ ಫಸಲು ಬಂದು ಜನರ ಜೀವನ ಇನ್ನಷ್ಟು ಸುಭಿಕ್ಷವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು …
Read More »
BigTv News
October 12, 2024
Breaking News, ಶಿವಮೊಗ್ಗ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಅಡಿಕೆ ಮತ್ತು ಭತ್ತ ಬೆಳೆಯುವ ರೈತರಿಗೆ ಸಂಕಷ್ಟವನ್ನು ತಂದಿದೆ. ಭತ್ತದ ಗದ್ದೆಯಲ್ಲಿ ಕೀಟಬಾಧೆ ಕಾಣಿಸಿಕೊಂಡಿದ್ದು ನೂರಾರು ಎಕರೆ ಬೆಳೆ ನಷ್ಟದ ಹಾದಿಯತ್ತ ಸಾಗಿದೆ. ಭತ್ತದ ಬೆಳೆಯ ಕೀಟಬಾಧೆಯನ್ನು ಹೋಗಲಾಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಂಟಿ ಕೃಷಿ ನಿರ್ದೇಶಕರಾದ ಕಿರಣ್ ಕುಮಾರ್ ಎಂ. ರೈತರಿಗೆ ಸಲಹೆಗಳನ್ನು ನೀಡಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕನ್ನಂಗಿ ಪಂಚಾಯತಿ ಗರಗ ಕಿಕ್ಕೇರಿಯ ಭತ್ತದ ಗದ್ದೆಗಳಲ್ಲಿ ಕೀಟಬಾಧೆಯಿಂದ ನೂರಾರು …
Read More »
BigTv News
October 11, 2024
Breaking News, ಶಿವಮೊಗ್ಗ
ಶಿವಮೊಗ್ಗ: ಆಯುಧ ಪೂಜೆಯನ್ನು ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಸಡಗರ, ಸಂಭ್ರಮದಿಂದ ಆಚರಿಸಿದರು. ಅಂಗಡಿ ಮಾಲೀಕರು ಸಿಹಿ ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳ ಎದುರು ಬೆಳಿಗ್ಗೆಯಿಂದಲೇ ರಂಗೋಲಿಗಳು ಕಂಗೊಳಿಸುತ್ತಿದ್ದವು. ಮನೆ, ಕಚೇರಿಗಳ ಎದುರು ವಾಹನಗಳನ್ನು ನಿಲ್ಲಿಸಿ, ಬೂದಗುಂಬಳ ಕಾಯಿ ಒಡೆದು ಪೂಜೆ ಮಾಡುವುದು ಎಲ್ಲೆಡೆ ಕಂಡುಬಂತು ವಾಹನಗಳಿಗೆ ಹಾರ ಹಾಕಿ ಸಿಂಗರಿಸಲಾಗಿತ್ತು. ಆಯುಧಪೂಜೆಯಂದು ಆಯುಧಗಳಿಗೆ ಮಾತ್ರವಲ್ಲದೆ, ವಾಹನಗಳಿಗೆ, ಯಂತ್ರೋಪಕರಣಗಳು, ಕೃಷಿ ಉಪಕರಣ, ಸಲಕರಣೆಗಳಿಗೆ ಪೂಜೆ ಸಲ್ಲಿಸಿರುವ …
Read More »
BigTv News
October 11, 2024
Breaking News, ಗದಗ
ಗದಗ: ಧಾರವಾಡ ಹಾಗೂ ಗದಗ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದ್ದು ಗದಗ ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಬಳಿ ಸೇತುವೆ ಜಲಾವೃತವಾಗಿದ್ದು ಗದಗ-ಶಲವಡಿ- ನರಗುಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಸೇತುವೆ ಜಲಾವೃತಗೊಂಡಿದ್ದು ರೋಣ ಹಾಗೂ ನರಗುಂದ ರಸ್ತೆ ಸಂಪರ್ಕ ಸ್ಥಗಿತಗೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ …
Read More »
BigTv News
October 10, 2024
Breaking News, ಮೈಸೂರು
ಮೈಸೂರು: ನಾಡಹಬ್ಬ ದಸರಾ ಸಂಭ್ರಮವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದು, ದಟ್ಟಣೆ ತಪ್ಪಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗವು ವಿಶೇಷ ರೈಲು ಸೇವೆ ಆರಂಭಿಸಿದೆ. ಅರಸೀಕೆರೆ- ಮೈಸೂರು ರೈಲು ಅ.10ರಿಂದ ಅ.12ರ ವರೆಗೆ ಮೂರು ಟ್ರಿಪ್ ಓಡಾಡಲಿದೆ. ಮಧ್ಯಾಹ್ನ 2 ಗಂಟೆಗೆ ಅರಸೀಕೆರೆಯಿಂದ ಹೊರಟು ಸಂಜೆ 6.40ಕ್ಕೆ ಮೈಸೂರು ತಲುಪಲಿದೆ. ಸಂಜೆ 6.50ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 11.45ಕ್ಕೆ ತಲುಪಲಿದೆ. ಬೆಳಗಾವಿ- ಮೈಸೂರು ರೈಲು ಬೆಳಗಾವಿಯನ್ನು …
Read More »
BigTv News
October 9, 2024
Breaking News, ಮೈಸೂರು
ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ 50 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಕಲೆ, ವಾಸ್ತುಶಿಲ್ಪ, ಪ್ರವಾಸೋದ್ಯಮ, ಜಾನಪದ, ಸಮಾನತೆ, ಭ್ರಾತೃತ್ವ ಹಾಗೂ ಸಂವಿಧಾನದ ಮಹತ್ವ ಮೊದಲಾದ ವಿಷಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ದಸರಾ ಸ್ತಬ್ಧಚಿತ್ರ ಉಪ ಸಮಿತಿ ಅಧ್ಯಕ್ಷ ಪ್ರಶಾಂತ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಂಡೀಪಾಳ್ಯದ ಎಪಿಎಂಸಿ ಯಾರ್ಡ್‌ನಲ್ಲಿ ಸ್ತಬ್ಧಚಿತ್ರ ನಿರ್ಮಾಣ ಭರದಿಂದ ಸಾಗಿದ್ದು, ಶೇ 80ರಷ್ಟು ಮುಗಿದಿದೆ. ಅ.11ರ ರಾತ್ರಿ ಅರಮನೆ ಆವರಣ ಪ್ರವೇಶಿಸಲಿವೆ. ಪ್ರದರ್ಶನದಲ್ಲಿ ಒಂದು …
Read More »
BigTv News
October 9, 2024
Breaking News, ಕಾರವಾರ
ಕಾರವಾರ: ರಾಜ್ಯದಲ್ಲಿ 34 ಸರ್ವೆ ಎಡಿಎಲ್‌ಆರ್ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 364 ಸರ್ವೆಯರ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಸರ್ವೆಯರ್ ಹುದ್ದೆಗಳ ನೇಮಕಾತಿ ಕೂಡ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ. 1091 ಲೈಸೆನ್ಸ್ ಸರ್ವೆಯರ್ ಗಳ ನೇಮಕ ಮಾಡಲಾಗಿದೆ ಗ್ರಾಮ ಆಡಳಿತಾಧಿಕಾರಿ ಹುದ್ದೆ ಖಾಲಿ ಇವೆ. ಒಂದು ಸಾವಿರ ಗ್ರಾಮ ಲೆಕ್ಕಗರ ನೇಮಕಾತಿ …
Read More »