Breaking News

ಮಲೆನಾಡು ಭಾಗದಲ್ಲಿ ಹೆಚ್ಚಾದ ಮಂಗಗಳ ಹಾವಳಿ: ಹೈರಾಣಾದ ರೈತರು

ಸಾಗರ: ಬೆಳೆ ಹಾನಿ ಮಾಡುವ ಮಂಗಗಳನ್ನು ಹಿಡಿಯಲು ಮುಂದಾದರೆ ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧ. ಆದ ನಷ್ಟಕ್ಕೆ ಕಾಯ್ದೆ ಪ್ರಕಾರವೇ ಬೆಳೆ ಪರಿಹಾರ ಕಲ್ಪಿಸಿ ಅಂದರೆ ಮಾತ್ರ ಅಧಿಕಾರಿಗಳಿಂದ ತೀವ್ರ ಮೌನ, ಅರಣ್ಯ ಇಲಾಖೆಯ ಈ ಇಬ್ಬಂದಿತನ ಮಲೆನಾಡಿನ ರೈತರನ್ನು ಹೈರಾಣಾಗಿಸಿದೆ.
ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಂಗ ಹಾಗೂ ಮುಸಿಯಾಗಳ ಹಾವಳಿ ವಿಪರೀತವಾಗಿದೆ. ಬೆಳೆ ಹಾನಿ ಮಾಡಿ ರೈತ ಸಮೂಹಕ್ಕೆ ತೊಂದರೆ ಕೊಡುವ ಜೊತೆಗೆ ನಗರ ಪ್ರದೇಶಕ್ಕೂ ಲಗ್ಗೆ ಇಟ್ಟು ಜನರಿಗೆ ಕಾಟ ಕೊಡುತ್ತಿವೆ.
ಅಡಿಕೆ ಮರ ಏರುವ ಮಂಗಗಳು ಎಳೆಯ ಅಡಿಕೆ ಚೀಪುವುದರಿಂದ ಅವು ಒಣಗಿದ ನಂತರ ಮರದಿಂದ ಉದುರಿ ಬೀಳುತ್ತಿವೆ. ಮಂಗಗಳ ಕಾಟದಿಂದ ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆಗಳಾದ ಕಾಫಿ, ಕಾಳುಮೆಣಸು ಕೂಡ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *