Breaking News

ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ವಿಜಯಪುರದ ಸತ್ತಿಗೆ ಕುಣಿತಕ್ಕೆ ಪ್ರಥಮ ಬಹುಮಾನ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಲಾತಂಡಗಳಿಗೆ ಬಹುಮಾನ ಘೋಷಿಸಲಾಗಿದೆ.
ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಸಿದ್ದಾಪುರ (ಕಾರಿಕೊಳ್ಳ)ದ ಸಂಜೀತ ಸಿ.ಕೋತ ನೇತೃತ್ವದ ರೇವಣಸಿದ್ದೇಶ್ವರ ಯುವಕ ಕಲಾಸಂಘದ ಸತ್ತಿಗೆ ಕುಣಿತಕ್ಕೆ ಪ್ರಥಮ ಬಹುಮಾನ (₹ 15 ಸಾವಿರ) ದೊರೆತಿದೆ.
ಯಾದಗಿರಿಯ ವಿಶ್ವಾಸಪುರ ತಾಂಡಾದ ಮನೋಹರ ಖೇಮು ಪವಾರ ಸಾರಥ್ಯದ ಲಂಬಾಣಿ ನೃತ್ಯ ಕಲಾ ತಂಡ, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಕ್ಯಾತಘಟ್ಟದ ಕೀರ್ತಿನಿ ಮತ್ತು ಪ್ರಮೋದಿನಿ ನೇತೃತ್ವದ ಪೂಜಾಕುಣಿತ ಕಲಾವಿದರ ತಂಡ, ಮದ್ದೂರು ತಾಲ್ಲೂಕು ಚಿಕ್ಕರಸಿನಕೆರೆಯ ಕಾಲಭೈರವೇಶ್ವರ (ಪೂಜಾಕುಣಿತ) ಯುವಕರ ತಂಡಗಳು ದ್ವಿತೀಯ ಸ್ಥಾನ ‍ಪಡೆದು ತಲಾ ₹ 5 ಸಾವಿರ ಬಹುಮಾನ ಗಳಿಸಿವೆ.
ಹಾವೇರಿ ಜಿಲ್ಲೆಯ ವೀರಭದ್ರೇಶ್ವರ ಪುರವಂತಿಕೆ ಕಲಾತಂಡ ಹಾಗೂ ಕೋಲಾರ ಜಿಲ್ಲೆಯ ಸುಳದೇನಹಳ್ಳಿಯ ಮಾರುತಿ ಕಲಾವಿದರ ಸಂಘ (ಗಾರುಡಿ ಗೊಂಬೆ) ತೃತೀಯ ಬಹುಮಾನ ಗಳಿಸಿದ್ದು, ತಲಾ ₹ 2,500 ಪಡೆದಿವೆ, ತೀರ್ಪುಗಾರರ ಆಯ್ಕೆಯಂತೆ ಕಲಾತಂಡಗಳನ್ನು ಬಹುಮಾನಕ್ಕೆ ಪರಿಗಣಿಸಲಾಗಿದೆ. ಒಟ್ಟು ₹ 35 ಸಾವಿರವನ್ನು ಬಹುಮಾನವಾಗಿ ನೀಡಲಾಗಿದೆ ಎಂದು ದಸರಾ ಮೆರವಣಿಗೆ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *